ದೆಹಲಿ: ಆನಂದ್ ವಿಹಾರ್ ಶಾಲೆಯಲ್ಲಿ ಉಯ್ಯಾಲೆ ಬಿದ್ದು 14 ಮಂದಿಗೆ ಗಾಯ

ಈ ಘಟನೆ ನಡೆದ ಅಮರ್ ಜ್ಯೋತಿ ಶಾಲೆಯಲ್ಲಿ ಫೇರ್ ನಡೆಯುತ್ತಿತ್ತು ಎನ್ನಲಾಗಿದ್ದು, ಯಾವುದೇ ಅಪಘಾತದ ಬಗ್ಗೆ ವರದಿಗಳು ಬಂದಿಲ್ಲ.

Last Updated : Oct 19, 2019, 11:57 AM IST
ದೆಹಲಿ: ಆನಂದ್ ವಿಹಾರ್ ಶಾಲೆಯಲ್ಲಿ ಉಯ್ಯಾಲೆ ಬಿದ್ದು 14 ಮಂದಿಗೆ ಗಾಯ title=
Representational image

ದೆಹಲಿ: ರಾಷ್ಟ್ರ ರಾಜಧಾನಿಯ ಆನಂದ್ ವಿಹಾರ್ ಪ್ರದೇಶದ ಶಾಲೆಯೊಳಗೆ ಉಯ್ಯಾಲೆ(Swing) ಬಿದ್ದು ಶುಕ್ರವಾರ 14 ಜನರು ಗಾಯಗೊಂಡಿದ್ದಾರೆ. ಈ ಉಯ್ಯಾಲೆಯು ಶಾಲೆಗೆ ಸೇರಿದ್ದು, ಘಟನೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕರು ಗಾಯಗೊಂಡಿದ್ದಾರೆ.

ಅಮರ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ನೆರವಿನೊಂದಿಗೆ ಅಮರ್ ಜ್ಯೋತಿ ಶಾಲೆಯಲ್ಲಿ ಫೇರ್ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯಾವುದೇ ಅಪಘಾತದ ಬಗ್ಗೆ ವರದಿಗಳು ಬಂದಿಲ್ಲ. ಜನರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ರಾತ್ರಿ 8 ಗಂಟೆ ಸುಮಾರಿಗೆ ಸ್ವಿಂಗ್(ಉಯ್ಯಾಲೆ) ಬಗ್ಗೆ ಪಿಸಿಆರ್ ಕರೆ ಬಂದಿತು. ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾನ್ಯುಯಲ್ ಆಪರೇಟೆಡ್ ಸ್ವಿಂಗ್ ನೆಲದ ಮೇಲೆ ಉರುಳಿರುವುದು ಕಂಡುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಾಹಿತಿ ಪ್ರಕಾರ, ಸ್ವಿಂಗ್(ಉಯ್ಯಾಲೆ) ಟ್ರಸ್ಟ್ ವ್ಯಾಪ್ತಿಯೊಳಗೆ ಇದ್ದು, ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಗಮನಕ್ಕೆ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಎಲ್ಲರೂ (ಟ್ರಸ್ಟ್‌ನ ಸದಸ್ಯರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು). ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಆವರಣದೊಳಗೆ ಸ್ವಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಅನುಮತಿಯನ್ನು ಟ್ರಸ್ಟ್ ಪಡೆದಿಲ್ಲ ಎಂದು ಹೇಳಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

Trending News