ಅಮರಾವತಿ: ಆಂಧ್ರ ಪ್ರದೇಶದಲ್ಲಿ ಲೋಕಸಭೆ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು, ಒಟ್ಟು 175 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯದಲ್ಲಿ "ಮಿಷನ್ 150 ಪ್ಲಸ್ ಗುರಿ"ಯನ್ನು ಹೊಂದಿರುವ ತೆಲುಗು ದೇಶಂ ಪಕ್ಷವು 126 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಏಪ್ರಿಲ್ 11 ರಂದು ನಡೆಯಲಿರುವ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗಾಗಿ ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು 126 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ಟಿಡಿಪಿ ಶುಕ್ರವಾರ ಲೋಕಸಭಾ ಚುನಾವಣೆಗಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಚಂದ್ರಬಾಬು ನಾಯ್ಡು ಏಳನೇ ಬಾರಿಗೆ ತಮ್ಮ ತವರು ಜಿಲ್ಲೆ ಚಿತ್ತೂರಿನ ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಾಯ್ಡು ಪುತ್ರ ನಾರಾ ಲೋಕೇಶ್ ಅಮರಾವತಿಯ ಮಂಗಳಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ನಂದಮುರಿ ಬಾಲಕೃಷ್ಣ ಮತ್ತೊಮ್ಮೆ ತಮ್ಮ ಕ್ಷೇತ್ರ ಹಿಂದುಪುರದಿಂದ ಸ್ಪರ್ಧಿಸಲಿದ್ದಾರೆ.
TDP announces 126 candidates for Assembly polls; Chandrababu Naidu, son Nara Lokesh to contest
Read @ANI Story | https://t.co/5aua5NhjS3 pic.twitter.com/tkqcswKr9U
— ANI Digital (@ani_digital) March 14, 2019
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ತಾವು ಸಮೀಕ್ಷೆಗಳನ್ನು ನಡೆಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ನಾಯ್ಡು, ಚ್ಚಿನ ಅಭ್ಯರ್ಥಿಗಳು ಸಾರ್ವಜನಿಕರಿಂದ 86 ಪ್ರತಿಶತದಷ್ಟು ತೃಪ್ತಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ" ಎಂದು ಹೇಳಿದರು.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೊದಲು ನಾಯ್ಡು ಚಿತ್ತೂರಿಗೆ ಭೇಟಿ ನೀಡಲಿದ್ದು, ಶುಕ್ರವಾರ ತಿರುಮಲ ಬೆಟ್ಟಕ್ಕೆ ತೆರಳಿ ತಿರುಪತಿ ವೆಂಕಟರಮಣನ ಆಶೀರ್ವಾದ ಪಡೆಯಲಿದ್ದಾರೆ.
ನಾಯ್ಡು ಕ್ಯಾಬಿನೆಟ್ ನ 24 ಮಂತ್ರಿಗಳ ಪೈಕಿ 18 ಮಂದಿಗೆ ಟಿಕೆಟ್:
- ಬೆಂದಲಂ ಅಶೋಕ್ (ಇಚಪುರಂ)
- ಗುಥು ಸೈರೇಷಾ (ಪಳಸ)
- ಕಿಂಜಾರಪು ಆಟ್ಚೆಮ್ ನಾಯ್ಡು (ಟೆಕ್ಕೆಲಿ)
- ಕಲಾಮತಾ ವೆಂಕಟರಮಣ (ಪಥಪಟ್ಟಣಂ)
- ಗುಂಡ ಲಕ್ಷ್ಮಿ ದೇವಿ (ಶ್ರೀಕಾಕುಲಂ)
- ಕುನಾ ರವಿ ಕುಮಾರ್
- ಕಿಮಿಡಿ ಕಲಾ ವೆಂಕಟರಾವ್ (ಎಟ್ಚರ್ಲಾ)
- ಬಾಗ್ಗು ರಾಮನಮೂರ್ತಿ (ನರಸಪೇತೆ)
- ಕೊಂಡ್ರು ಮುರಳಿ ಮೋಹನ್ (ರಾಜಮ್)
- ಜನಾರ್ಧನ್ ಧಾತ್ರಾಜ್ (ಕುರುಪಮ್)
- ಬಾಬ್ಬಿಲಿ ಚಿರಂಜೀವುಲು (ಪರ್ವತಿಪುರಂ)
- ಆರ್.ಪಿ. ಬಾನ್ದೇವ್ (ಸಲೂರ್)
- ಸುಜಯಕೃಷ್ಣ ರಂಗರಾವ್ (ಬಾಬ್ಬಿಲಿ),
- ಕಿಮಿಡಿ ನಾಗಾರ್ಜುನ (ಚೆಪುರಾಪೂಲ್)
- ಕೆ.ಎ. ನಾಯ್ಡು (ಗಜಪತಿನಗರ) ಮತ್ತು
- ಕೊಲ್ಲ ಲಲಿತಾ ಕುಮಾರಿ (ಎಸ್. ಕೋಟಾ)
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಅವರು ಭಾನುವಾರದಂದು ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ಘೋಷಿಸಿದ್ದಾರೆ ಮತ್ತು ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಫಲಿತಾಂಶಗಳನ್ನು ಮೇ 23 ರಂದು ಘೋಷಿಸಲಾಗುವುದು.