ಅಯೋಧ್ಯೆಯಲ್ಲಿ ಆಗಸ್ಟ್ 5ಕ್ಕೆ ರಾಮಮಂದಿರದ ಶಿಲಾನ್ಯಾಸ

ಆಗಸ್ಟ್ 5ರಂದು ಮಧ್ಯಾಹ್ನ 3 ಗಂಟೆಗೆ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ.

Written by - Yashaswini V | Last Updated : Jul 19, 2020, 12:11 PM IST
ಅಯೋಧ್ಯೆಯಲ್ಲಿ ಆಗಸ್ಟ್ 5ಕ್ಕೆ ರಾಮಮಂದಿರದ ಶಿಲಾನ್ಯಾಸ title=

ಅಯೋಧ್ಯೆ: ಬಹುವರ್ಷಗಳ ಕನಸಾದ ಅಯೋಧ್ಯೆ (Ayodhya) ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಕಾರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೇ ಶಿಲಾನ್ಯಾಸ ನೆರವೇರಿಸಲಾಗುವುದು. ಆಗಸ್ಟ್ 5ರಂದು ಮಧ್ಯಾಹ್ನ 3 ಗಂಟೆಗೆ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಶಿಲಾನ್ಯಾಸ ಕಾರ್ಯ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.

ಆಗಸ್ಟ್ 5ರಂದು ಬೆಳಿಗ್ಗೆ 8 ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಳಿವೆ, ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 

ಪ್ರಧಾನಿಯವರಲ್ಲದೇ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ ಹಾಗೂ ರಾಮಮಂದಿರ ಚಳುವಳಿಯಲ್ಲಿ ಭಾಗವಹಿಸಿದ್ದ ಪ್ರಮುಖರು ಭಾಗಿಯಾಗಲಿದ್ದಾರೆ  ಎಂದು ಹೇಳಲಾಗಿದೆ. 

ಕಾರ್ಯಕ್ರಮಕ್ಕೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸುಮಾರು 300 ಜನರಿಗೆ ಆಹ್ವಾನ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ರಾಮ್ ದೇವಾಲಯದ ಎತ್ತರ:
ರಾಮ ಮಂದಿರ (Ram Mandir) ಟ್ರಸ್ಟ್‌ನ ಸಭೆಯಲ್ಲಿ ರಾಮ ಮಂದಿರದ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಮೊದಲ ದೇವಾಲಯದ ಎತ್ತರವು 128 ಅಡಿಗಳಾಗಿದ್ದು, ಈಗ ಅದನ್ನು 161 ಅಡಿಗಳಿಗೆ ಹೆಚ್ಚಿಸಲಾಗುವುದು. ಇದಲ್ಲದೆ ಈಗ ಗರ್ಭಗುಡಿಯ ಸುತ್ತ 5 ಗುಮ್ಮಟಗಳನ್ನು ನಿರ್ಮಿಸಲಾಗುವುದು. ಟ್ರಸ್ಟ್ ಸಭೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದೆ. ಅಂದರೆ 2023ರ ಹೊತ್ತಿಗೆ ವಿಶ್ವದ ಭವ್ಯವಾದ ರಾಮ ದೇವಾಲಯವು ಅಯೋಧ್ಯೆಯಲ್ಲಿ ಸಿದ್ಧವಾಗಲಿದೆ. ರಾಮ ದೇವಸ್ಥಾನಕ್ಕೆ ಕಲ್ಲುಗಳು ಇನ್ನೂ ಪೂರ್ಣಗೊಂಡಿಲ್ಲ. ಕಲ್ಲುಗಳನ್ನು ಪೂರೈಸಲು ವಿಚಾರಣಾ ಸಮಿತಿಯನ್ನು ರಚಿಸಲಾಗುವುದು.

Trending News