7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ.

Written by - Manjunath N | Last Updated : Jun 10, 2024, 06:54 PM IST
  • ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು,
  • ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ.
  • ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.
7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ title=

ನವದೆಹಲಿ: ಏಳು ರಾಜ್ಯಗಳ 13 ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆ ನಡೆಸುವ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ಎಲ್ಲಾ ಏಳು ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆ 2024 ರಲ್ಲಿ ಸ್ಪರ್ಧಿಸಲು ಹಾಲಿ ಶಾಸಕರು ಹಲವಾರು ಸ್ಥಾನಗಳನ್ನು ತೆರವು ಮಾಡಿದ ನಂತರ ಈ ಘೋಷಣೆ ಬಂದಿದೆ.

ಇದನ್ನೂ ಓದಿ: 'ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೊದಲ ಆರೋಪಿ' - ಆರ್‌.ಅಶೋಕ

ವಿಧಾನಸಭಾ ಉಪಚುನಾವಣೆ ಪೂರ್ಣ ವೇಳಾಪಟ್ಟಿ: 

ಜೂನ್ 14 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 21 ಮತ್ತು ನಾಮಪತ್ರಗಳ ಪರಿಶೀಲನೆ ಜೂನ್ 26 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 26 ಕೊನೆಯ ದಿನವಾಗಿದೆ.ಜುಲೈ 10 ರಂದು ಮತದಾನ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಬರದ ನಡುವೆ ತಡೆರಹಿತ ವಿದ್ಯುತ್‌ ಪೂರೈಕೆ ಸಾಧ್ಯವಾಗಿಸಿದ್ದು ಹೇಗೆ..? ವಿವರ ನೀಡಿದ ಜಾರ್ಜ್‌

13 ಸ್ಥಾನಗಳಲ್ಲಿ ಬಿಹಾರದ ರುಪೌಲಿ, ರಾಯ್‌ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢ ಕ್ಷೇತ್ರಗಳು ಸೇರಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News