'ತಗೋ ಇಲ್ಲಿದೆ ಆಜಾದಿ' ಎಂದು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ಕಾನೂನನ್ನು ಪ್ರತಿಭಟಿಸಿದ ಜನರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಇಂದು ಮಧ್ಯಾಹ್ನ ಗುಂಡು ಹಾರಿಸಿದ್ದು, ಈ ಪ್ರದೇಶದಲ್ಲಿ ಗೊಂದಲ ಮತ್ತು ಭೀತಿ ಉಂಟಾಗಿದೆ.ಈಗ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.

Last Updated : Jan 30, 2020, 04:43 PM IST
'ತಗೋ ಇಲ್ಲಿದೆ ಆಜಾದಿ' ಎಂದು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ  title=
Photo Courtsey: Reuters

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ಕಾನೂನನ್ನು ಪ್ರತಿಭಟಿಸಿದ ಜನರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಇಂದು ಮಧ್ಯಾಹ್ನ ಗುಂಡು ಹಾರಿಸಿದ್ದು, ಈ ಪ್ರದೇಶದಲ್ಲಿ ಗೊಂದಲ ಮತ್ತು ಭೀತಿ ಉಂಟಾಗಿದೆ.ಈಗ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.

ಸಶಸ್ತ್ರ ಪೊಲೀಸರ ಸಮ್ಮುಖದಲ್ಲಿಯೇ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿರುವುದು ಆಗ ವಿಡಿಯೋವೊಂದರಲ್ಲಿ ಸೆರೆಯಾಗಿದೆ, ಈ ವೀಡಿಯೊವೊಂದರಲ್ಲಿ, ಕಪ್ಪು ಜಾಕೆಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ ವ್ಯಕ್ತಿ, ಭಾರೀ ಕಾವಲು ಇರುವ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು, ಪ್ರತಿಭಟನಾಕಾರರ ಬಳಿ "ಯೆ ಲೋ ಆಜಾದಿ (ಇಲ್ಲಿ ನಿಮ್ಮ ಸ್ವಾತಂತ್ರ್ಯ ಇಲ್ಲಿದೆ") ಎಂದು ಕೂಗುತ್ತಾ ಗುಂಡು ಹಾರಿಸಿದ್ದಾನೆ.

ಈಗ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಹಿರಿಯ ಪೋಲಿಸ್ ಅಧಿಕಾರಿ ಚಿನ್ಮಯ್ ಬಿಸ್ವಾಲ್ ' ಜನಸಂದಣಿಯಿಂದ ಈ ವ್ಯಕ್ತಿ ಈ ಬಂದಿದ್ದು, ಆತನನ್ನು ಈಗ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ತಿಂಗಳು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ಕಾನೂನನ್ನು ವಿರೋಧಿಸಿ ಹಿಂಸಾಚಾರ ನಡೆದಿತ್ತು; ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗದ ಆರೋಪ ಪೊಲೀಸರ ಮೇಲೆ ಇತ್ತು. ಈ ತಿಂಗಳ ಆರಂಭದಲ್ಲಿ, ಮುಖವಾಡದ ಗೂಂಡಾಗಳು ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.ಈಗ ಈ ಘಟನೆ ಮೂಲಕ ದೆಹಲಿ ಕೆಲವೇ ದಿನಗಳಲ್ಲಿ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.

ಇಂದು, ಜಾಮಿಯಾದಿಂದ ದೂರದಲ್ಲಿರುವ ಶಾಹೀನ್ ಬಾಗ್‌ನಲ್ಲಿ ಸುಮಾರು ಆರು ವಾರಗಳ ಕಾಲ ಪ್ರತಿಭಟನೆ ನಡೆಸುತ್ತಿರುವ ನೂರಾರು ಮಹಿಳೆಯರು, ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ಗೆ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.ದೆಹಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ದೇಶದ್ರೋಹಿಗಳನ್ನು ಹೊಡೆದುರುಳಿಸುವಂತೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಒತ್ತಾಯಿಸಿದ ಕೆಲವೇ ದಿನಗಳ ನಂತರ ಈ ಗುಂಡಿನ ದಾಳಿ ನಡೆದಿದೆ.

ಈಗ ಪೌರತ್ವ ಕಾಯ್ದೆ ಧರ್ಮವನ್ನು ಮಾನದಂಡವನ್ನಾಗಿ ಮಾಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ದೇಶಾದ್ಯಂತ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಪೌರತ್ವ (ತಿದ್ದುಪಡಿ) ಕಾಯ್ದೆಯು ಮೂರು ಮುಸ್ಲಿಂ ಪ್ರಾಬಲ್ಯದ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ಪಲಾಯನ ಮಾಡಿದರೆ ಅಂತವರಿಗೆ ಪೌರತ್ವ ಪಡೆಯಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.

Trending News