ನವದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗೆ ಭಾರತ ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಯೋತ್ಪಾಧನೆಯ ನಿಗ್ರಹಕ್ಕೆ ಪಾಕ್ ಕ್ರಮ ತಗೆದುಕೊಳ್ಳದ ಹೊರತು ಭಾರತ ಸಾರ್ಕ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
#WATCH For many years the Indian Government had been asking for this (#Kartarpur) corridor, only now Pakistan responded positively. It doesn’t mean the bilateral dialogue will start because of this, terror & talks can’t go together. : EAM Sushma Swaraj pic.twitter.com/iSPFRbyQI1
— ANI (@ANI) November 28, 2018
ಕರ್ತಾರ್ಪುರ್ ಕಾರಿಡಾರ್ ಪಾಕಿಸ್ತಾನದೊಂದಿಗೆ ಮಾತುಕತೆಗೆ ಕಾರಣವಾಗುವುದಿಲ್ಲ ಮತ್ತು ಅವರು ಮೊದಲು ಭಯೋತ್ಪಾದನೆಯನ್ನು ನಿಲ್ಲಬೇಕು ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಹಿರಿಯ ಪತ್ರಕರ್ತರನ್ನು ಕೊಂದಿದ್ದ ಭಯೋತ್ಪಾದಕ ಪಾಕಿಸ್ತಾನದ ಮೂಲದ ಮುಲ್ತಾನ್ ನಿವಾಸಿ ಎಂದು ತಿಳಿದುಬಂದಿದೆ.ಅವನನ್ನು ನವೀದ್ ಜಾಟ್ ಎಂದು ಗುರುತಿಸಲಾಗಿದ್ದು ಲಷ್ಕರ್-ಇ-ತೊಯ್ಬಾ ಜೊತೆ ಅವನು ಗುರುತಿಸಿಕೊಂಡಿದ್ದನು ಎಂದು ತಿಳಿದುಬಂದಿದೆ.ಈಗ ಅವನು ಬುಡ್ಗಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
"ದ್ವಿಪಕ್ಷೀಯ ಮಾತುಕತೆ ಮತ್ತು ಕಾರ್ತಾರ್ಪುರ್ ಕಾರಿಡಾರ್ ಎರಡು ಬೇರೆ ಬೇರೆ ವಿಷಯಗಳಾಗಿದ್ದು, ಕಳೆದ 20 ವರ್ಷಗಳಿಂದ ಭಾರತ ಸರ್ಕಾರ ಈ ಕರ್ತಾರ್ಪುರ್ ಕಾರಿಡಾರ್ ಅನ್ನು ಕೇಳುತ್ತಿದೆ ಮೊದಲ ಬಾರಿಗೆ ಪಾಕಿಸ್ತಾನ ಇದಕ್ಕೆ ಧನಾತ್ಮಕವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.