ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆತೀಕ್ ಮತ್ತು ಅಶ್ರಫ್‌ರ ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕೊಲ್ವಿನ್ ಆಸ್ಪತ್ರೆಗೆ ಬಂದಾಗ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ. ಅತೀಕ್ ಮತ್ತು ಅಶ್ರಫ್ ಅವರನ್ನು ಕೊಂದ ನಂತರ ದಾಳಿಕೋರರು ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಸ್ಫೋಟಕ ಮಾಹಿತಿ!
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ದರೋಡೆಕೋರ-ರಾಜಕಾರಣಿ ಅತೀಕ್ ಮತ್ತು ಅಶ್ರಫ್ ಹತ್ಯೆಯ ಹಿಂದಿನ ಕಾರಣ ಬಹಿರಂಗವಾಗಿದೆ. ಅತೀಕ್ ಹತ್ಯೆ ಪ್ರಕರಣ ಸಂಬಂಧ ಸನ್ನಿ, ಲವಲೇಶ್ ಮತ್ತು ಅರುಣ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಕೋರರು ಮಾಧ್ಯಮದವರಂತೆ ವೇಷ ಧರಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: "ಸಿಬಿಐ, ಇಡಿ ಅಧಿಕಾರಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಪ್ರಕರಣ ದಾಖಲಿಸಲಿದೆ"
ಮಾಫಿಯಾ ಡಾನ್ ಆಗಿ ಗುರುತಿಸಿಕೊಳ್ಳಲು ಕೃತ್ಯ!
ಅತೀಕ್ ಹಾಗೂ ಅಶ್ರಫ್ ಹತ್ಯೆಗೆ ಕಾರಣ ಬಹಿರಂಗವಾಗಿದೆ. ಮೂವರು ಆರೋಪಿಗಳು ಮಾಫಿಯಾ ಡಾನ್ ಆಗಿ ಗುರುತಿಸಿಕೊಳ್ಳಲು ಬಯಸಿದ್ದರು. ಅಪರಾಧ ಜಗತ್ತಿನಲ್ಲಿ ತಾವು ಹೆಸರು ಮಾಡಬೇಕು ಅನ್ನೋ ಆಸೆಯಿಂದ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಉತ್ತರಪ್ರದೇಶದ ನಿವಾಸಿಗಳು
ಅತೀಕ್ ಮತ್ತು ಅಶ್ರಫ್ ಮೇಲೆ ಗುಂಡು ಹಾರಿಸಿದ ಮೂವರು ದಾಳಿಕೋರರ ಗುರುತು ಬಹಿರಂಗವಾಗಿದೆ. ಮೂವರು ದಾಳಿಕೋರರು ಉತ್ತರ ಪ್ರದೇಶದ ನಿವಾಸಿಗಳು. ಗಮನಿಸಬೇಕಾದ ವಿಷಯವೆಂದರೆ ಇವರಲ್ಲಿ ಯಾರೂ ಪ್ರಯಾಗರಾಜ್‌ನವರಲ್ಲ. ಮೊದಲ ಆರೋಪಿ ಲವಲೇಶ್ ತಿವಾರಿ ಬಂದಾ ನಿವಾಸಿಯಾದ್ರೆ, 2ನೇ ಆರೋಪಿ ಅರುಣ್ ಮೌರ್ಯ ಹಮೀರ್‌ಪುರ ನಿವಾಸಿ ಮತ್ತು 3ನೇ ಆರೋಪಿ ಸನ್ನಿ ಕಾಸ್‌ಗಂಜ್ ಜಿಲ್ಲೆಯ ನಿವಾಸಿಯಾಗಿದ್ದಾನೆ.
ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ದರೋಡೆಕೋರ ಅತೀಕ್ ಅಹ್ಮದ್, ಸಹೋದರ ಅಶ್ರಫ್ ಹತ್ಯೆ
ಮಾರುವೇಷದಲ್ಲಿ ದಾಳಿ!
ಅತೀಕ್ ಮತ್ತು ಅಶ್ರಫ್ ಮೇಲೆ ದಾಳಿ ಮಾಡಲು ದಾಳಿಕೋರರು ಮಾರುವೇಷದಲ್ಲಿ ಬಂದಿದ್ದರು. ದಾಳಿಕೋರರು ಮಾಧ್ಯಮದವರಂತೆ ನಟಿಸಿ ಸ್ಥಳಕ್ಕೆ ತಲುಪಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಮಾಧ‍್ಯಮದವರ ಬಳಿ ಮಾತನಾಡುತ್ತಿದ್ದ ವೇಳೆ ಅತೀಕ್ ಮತ್ತು ಅಶ್ರಫ್ ಮೇಲೆ ಆರೋಪಿಗಳು ಇದ್ದಕ್ಕಿದ್ದಂತೆಯೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.