ಟಿಎಂಸಿಗೆ ಸೇರಿದ ನಂತರ ಬಾಬುಲ್ ಸುಪ್ರಿಯೋ ಭದ್ರತೆ ಕಡಿತಗೊಳಿಸಿದ ಕೇಂದ್ರ

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಬಾಬುಲ್ ಸುಪ್ರಿಯೋಗೆ ನೀಡಲಾಗಿದ್ದ ಕೇಂದ್ರೀಯ ಅರೆಸೇನಾ ಕಮಾಂಡೋಗಳ ಸಶಸ್ತ್ರ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Written by - Zee Kannada News Desk | Last Updated : Sep 18, 2021, 08:08 PM IST
  • ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಬಾಬುಲ್ ಸುಪ್ರಿಯೋಗೆ ನೀಡಲಾಗಿದ್ದ ಕೇಂದ್ರೀಯ ಅರೆಸೇನಾ ಕಮಾಂಡೋಗಳ ಸಶಸ್ತ್ರ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 ಟಿಎಂಸಿಗೆ ಸೇರಿದ ನಂತರ ಬಾಬುಲ್ ಸುಪ್ರಿಯೋ ಭದ್ರತೆ ಕಡಿತಗೊಳಿಸಿದ ಕೇಂದ್ರ title=

ನವದೆಹಲಿ: ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಬಾಬುಲ್ ಸುಪ್ರಿಯೋಗೆ ನೀಡಲಾಗಿದ್ದ ಕೇಂದ್ರೀಯ ಅರೆಸೇನಾ ಕಮಾಂಡೋಗಳ ಸಶಸ್ತ್ರ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 'Chhapaak' ರೀತಿ ಆಸಿಡ್ ದಾಳಿ ಪ್ರಕರಣಗಳಲ್ಲಿ ಈ ರಾಜ್ಯವೇ ಮುಂದು..!

ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಆದೇಶ ಹೊರಡಿಸಿದ ನಂತರ, ಕವರ್ ಅನ್ನು ಎರಡನೇ ಅತ್ಯುನ್ನತ ಮಟ್ಟದ Z ವರ್ಗದಿಂದ ವೈ ವರ್ಗಕ್ಕೆ ಇಳಿಸಲಾಗಿದೆ.ಕೇಂದ್ರೀಯ ಯೋಜನೆಯಡಿ ವಿವಿಐಪಿಗಳು ಮತ್ತು ಹೆಚ್ಚಿನ ಅಪಾಯದ ವ್ಯಕ್ತಿಗಳಿಗೆ ನೀಡಲಾಗಿರುವ ಭದ್ರತಾ ರಕ್ಷಣೆಯು ಅತ್ಯಧಿಕ Z+ ನಿಂದ ಹಿಡಿದು Z, Y+, Y ಮತ್ತು X ವರ್ಗಗಳವರೆಗೆ ಇರುತ್ತದೆ.

ಸುಪ್ರಿಯೋ (Babul Supriyo) ಅವರ ಭದ್ರತಾ ವರ್ಗವನ್ನು ಕಡಿಮೆ ಮಾಡುವ ಕುರಿತು ಕೇಂದ್ರ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳಿಂದ ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಜುಲೈನಲ್ಲಿ ನರೇಂದ್ರ ಮೋದಿ ಸಂಪುಟದಿಂದ ಸುಪ್ರಿಯೋ (50) ಅವರನ್ನು ಮಂತ್ರಿಯಾಗಿ ಕೈಬಿಡಲಾಯಿತು,ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಶಸ್ತ್ರ ದಳದಿಂದ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ: ಮಗಳ ಶಿರಚ್ಚೇದ ಮಾಡಿ ಪೋಲಿಸ್ ಠಾಣೆಗೆ ತಂದ ತಂದೆ..!

ಸುಮಾರು ಆರು-ಏಳು ಕಮಾಂಡೋಗಳಿಂದ,ಸುಪ್ರಿಯೋಗೆ ಈಗ ಇಬ್ಬರು ಸಶಸ್ತ್ರ ಸಿಬ್ಬಂದಿಗಳು ಪ್ರಯಾಣದ ಸಮಯದಲ್ಲಿ ರಕ್ಷಣೆ ನೀಡುತ್ತಾರೆ.ಈಗ ಅವರು ಟಿಎಂಸಿ ಸೇರಿಸುವುದರಿಂದ ಭದ್ರತೆಯ ಕೆಲಸವನ್ನು ಸಂಪೂರ್ಣವಾಗಿ ಪಶ್ಚಿಮ ಬಂಗಾಳ ಪೊಲೀಸರಿಗೆ ವಹಿಸಬಹುದು ಎನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷಕ್ಕೆ ಸೇರಿದ ನಂತರ ಸುಪ್ರಿಯೋ 'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರುವ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಮತ್ತು ಅವರು  ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News