'Chhapaak' ರೀತಿ ಆಸಿಡ್ ದಾಳಿ ಪ್ರಕರಣಗಳಲ್ಲಿ ಈ ರಾಜ್ಯವೇ ಮುಂದು..!

ಆಸಿಡ್ ದಾಳಿ ಸಂತ್ರಸ್ಥೆ ಲಕ್ಷ್ಮಿ ಅಗರ್ವಾಲ್ ಕುರಿತು ಬೆಳಕು ಚೆಲ್ಲುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಸಿನಿಮಾ ಭರ್ಜರಿ ಸದ್ದು  ಮಾಡುತ್ತಿದೆ.

Last Updated : Jan 12, 2020, 06:37 PM IST
'Chhapaak' ರೀತಿ ಆಸಿಡ್ ದಾಳಿ ಪ್ರಕರಣಗಳಲ್ಲಿ ಈ ರಾಜ್ಯವೇ ಮುಂದು..!  title=
ಸಾಂದರ್ಭಿಕ ಚಿತ್ರ

ನವದೆಹಲಿ: ಆಸಿಡ್ ದಾಳಿ ಸಂತ್ರಸ್ಥೆ ಲಕ್ಷ್ಮಿ ಅಗರ್ವಾಲ್ ಕುರಿತು ಬೆಳಕು ಚೆಲ್ಲುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಸಿನಿಮಾ ಭರ್ಜರಿ ಸದ್ದು  ಮಾಡುತ್ತಿದೆ.

ಈಗ ಇಂತಹ ಆಸಿಡ್ ದಾಳಿ ಪ್ರಕರಣಗಳ ಅಂಕಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)  ಬಿಡುಗಡೆ ಮಾಡಿದ್ದು, 2017 ರಲ್ಲಿ ಒಟ್ಟು ಆಸಿಡ್ ದಾಳಿ ಪ್ರಕರಣಗಳ ಸಂಖ್ಯೆ 244 ಆಗಿದ್ದರೆ, 2018 ರಲ್ಲಿ ದೇಶದಲ್ಲಿ 228 ಪ್ರಕರಣಗಳು ದಾಖಲಾಗಿವೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ದೇಶಾದ್ಯಂತ ಆಸಿಡ್ ದಾಳಿ ಪ್ರಕರಣಗಳು 2018 ರಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿದಿವೆ ಎನ್ನಲಾಗಿದೆ.

ಆದರೆ, 2018 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಆಸಿಡ್ ದಾಳಿಯಲ್ಲಿ 36 ಪ್ರಕರಣಗಳು ದಾಖಲಾಗಿವೆ,  ಇನ್ನು ಉತ್ತರ ಪ್ರದೇಶದಲ್ಲಿ 32 ತೆಲಂಗಾಣದಲ್ಲಿ 10 ಪ್ರಕರಣಗಳು ದಾಖಲಾಗಿವೆ. 2017 ರಂತೆ ಉತ್ತರಪ್ರದೇಶದಲ್ಲಿ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ ಎನ್ನಲಾಗಿದೆ. ಇಲ್ಲಿ ಈ ಹಿಂದೆ 41 ಪ್ರಕರಣಗಳಿಗೆ ಸಾಕ್ಷಿಯಾಗಿದೆ.

ಆಸಿಡ್ ದಾಳಿಗೆ ಕನಿಷ್ಠ ಶಿಕ್ಷೆ 10 ವರ್ಷಗಳ ಜೈಲು ಶಿಕ್ಷೆ. ಇದು ದಂಡದೊಂದಿಗೆ ಜೀವಾವಧಿ ಶಿಕ್ಷೆಯವರೆಗೆ ವಿಸ್ತರಿಸಬಹುದು. ಅಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ಶಿಕ್ಷಿಸಲು ಪ್ರತ್ಯೇಕ ಕಾನೂನನ್ನು ಜಾರಿಗೊಳಿಸಲಾಯಿತು ಮತ್ತು ಲೈಂಗಿಕ ಅಪರಾಧಗಳ ಮೇಲಿನ ಕಾನೂನಿನ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ.

Trending News