ನವದೆಹಲಿ : ದೇಶಾದ್ಯಂತ 73ನೇ ಗಣರಾಜ್ಯೋತ್ಸವದ (Republic Day Celebration) ಸಂಭ್ರಮ ಕಳೆಕಟ್ಟಿದೆ. ದೆಹಲಿಯಲ್ಲಿ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿ ಗಣರಾಜ್ಯೋತ್ಸವದ ಆಚರಣೆಯಲ್ಲಿ ಕೆಲವು ಹೊಸತನ ಮತ್ತು ಬದಲಾವಣೆಗಳಾಗಿವೆ. ಈ ಬಾರಿಯ ಪರೇಡ್ (Republic Day Parade) ಮತ್ತು ದೇಶದ ಗಣರಾಜ್ಯ ಆಚರಣೆ ಮೊದಲಿಗಿಂತ ಹೆಚ್ಚು ಅದ್ಭುತವಾಗಿ ಕಂಗೊಳಿಸಲಿದೆ.
ಗಣರಾಜ್ಯೋತ್ಸವದ ಅದ್ಧೂರಿ ಆಚರಣೆ :
ಗಣರಾಜ್ಯೋತ್ಸವದ (Republic Day Celebration) ಆಚರಣೆಯ ಸಂದರ್ಭದಲ್ಲಿ, ರಾಜಪಥದಲ್ಲಿ ವಿರಾಟ್ ಭಾರತದ ಒಂದು ನೋಟವನ್ನು ಪ್ರದರ್ಶಿಸಲಾಗುವುದು. ನವ ಭಾರತದ ಮಿಲಿಟರಿ ಶಕ್ತಿ ಇಂದಿನ ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ. ಇದರೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಯ ಸವಿಯೂ ಇರಲಿದೆ.
ಇದನ್ನೂ ಓದಿ : Republic Day: ಮೊದಲಿಗೆ ಗಣರಾಜ್ಯೋತ್ಸವ ಪರೇಡ್ ನಡೆದಿದ್ದೆಲ್ಲಿ? ಮುಖ್ಯ ಅತಿಥಿ ಯಾರಾಗಿದ್ದರು?
ಮಂಜು ಆವರಿಸಿರುವ ಹಿನ್ನಲೆಯಲ್ಲಿ ಪರೇಡ್ (Republic Day Parade) ಮತ್ತು ಫ್ಲೈಪಾಸ್ಟ್ ಪ್ರದರ್ಶನವು ಅರ್ಧ ಗಂಟೆ ತಡವಾಗಿ ಅಂದರೆ 10:30 ಕ್ಕೆ ರಾಜಪಥದಲ್ಲಿ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿತ್ತು. ಕರೋನಾ ಸಾಂಕ್ರಾಮಿಕ (coronavirus) ರೋಗದಿಂದಾಗಿ ಕಳೆದ ಬಾರಿಯಂತೆ ಈ ವರ್ಷ ಕೂಡಾ ಯಾವುದೇ ವಿದೇಶಿ ಮುಖ್ಯ ಅತಿಥಿಗೆ ಆಹ್ವಾನ ನೀಡಿಲ್ಲ.
ಪರೇಡ್ ಮುಖ್ಯಾಂಶಗಳು :
ಈ ಸಮಾರಂಭದಲ್ಲಿ ಮೊದಲ ಬಾರಿಗೆ ಭಾರತೀಯ ವಾಯುಪಡೆಯ (Indian Air Force) 75 ವಿಮಾನಗಳ ಭವ್ಯ ಫ್ಲೈ-ಪಾಸ್ಟ್ ಮಾಡಲಾಗುವುದು. ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ಸ್ಪರ್ಧಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಿದ್ದಾರೆ. ಪ್ರತಿ 75 ಮೀಟರ್ ಅಂತರದಲ್ಲಿ 10 ದೊಡ್ಡ ಎಲ್‌ಇಡಿ ಪರದೆಗಳನ್ನು (LED Screen) ಅಳವಡಿಸಲಾಗಿದೆ. ಈ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳದಿಂದ ದೂರ ಕುಳಿತಿರುವ ಜನರಿಗೂ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : Googleನಲ್ಲಿಯೂ ಗಣರಾಜ್ಯೋತ್ಸವದ ಸಂಭ್ರಮ.. ಇಲ್ಲಿದೆ ಈ ಬಾರಿಯ ಪರೇಡ್ ವಿಶೇಷತೆಗಳು
-ರಾಜ್‌ಪಥ್‌ನಲ್ಲಿ 25 ಟ್ಯಾಬ್ಲೋಗಳ ಸಂಚಾರ : 12 ರಾಜ್ಯ, 9 ಕೇಂದ್ರ ಸಚಿವಾಲಯಗಳು, 2 DRDO, ವಾಯುಪಡೆ ಮತ್ತು ನೌಕಾಪಡೆಯಿಂದ ತಲಾ ಒಂದು ಟ್ಯಾಬ್ಲೋ.
-ಪರೇಡ್ ಸಮಯದಲ್ಲಿ, ಸಿಆರ್‌ಪಿಎಫ್, ಎಸ್‌ಎಸ್‌ಬಿ ಸಿಬ್ಬಂದಿಯಿಂದ ಶೌರ್ಯ ಪ್ರದರ್ಶನ ದೆಹಲಿ ಪೊಲೀಸರು, ಎನ್‌ಸಿಸಿ ಸ್ಕ್ವಾಡ್ ಸಹ ಪರೇಡ್ ನಲ್ಲಿ ಭಾಗಿ
-ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾಯುಪಡೆ, ನೌಕಾಪಡೆ ಮತ್ತು ಸೇನೆಯ 75 ವಿಮಾನಗಳು ಗ್ರ್ಯಾಂಡ್ ಫ್ಲೈಪಾಸ್ಟ್‌ನಲ್ಲಿ ಭಾಗಿ
-ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವದಲ್ಲಿ 17 ಜಾಗ್ವಾರ್ ಹೋರಾಟಗಾರರು ಭಾಗಿ . ರಾಜಪಥ್‌ನ ಮೇಲ್ಭಾಗದಲ್ಲಿ 75 ರ ಆಕೃತಿ ರಚನೆ
ವೀಕ್ಷಕರ ಸಂಖ್ಯೆಯಲ್ಲಿ ಕಡಿತ :
ಪರೇಡ್ ನಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು (Corona Vaccine) ಪಡೆದ ವಯಸ್ಕರಿಗೆ ಮಾತ್ರ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾರು ಮೊದಲ ದೋಸೆ ಲಸಿಕೆ ಪಡೆದಿದ್ದಾರೆ ಅವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ಭೀತಿಯಿಂದಾಗಿ ಈ ಬಾರಿ ವೀಕ್ಷಕರ ಸಂಖ್ಯೆಯನ್ನು 5 ರಿಂದ 8 ಸಾವಿರ ಪ್ರೇಕ್ಷಕರಿಗೆ ಮಾತ್ರ ಮಿತಿಗೊಳಿಸಲಾಗಿದೆ. ಕಳೆದ ವರ್ಷ 25 ಸಾವಿರ ಜನರು ಪರೇಡ್ ವೀಕ್ಷಿಸಿದ್ದರು.
ಪರೇಡ್ ಮಾರ್ಗವನ್ನು ಮೊಟಕುಗೊಳಿಸಲಾಗಿದೆ :
ಈ ಬಾರಿ ಪರೇಡ್ ಮಾರ್ಗವನ್ನೂ ಮೊಟಕುಗೊಳಿಸಲಾಗಿದೆ. ಈ ಹಿಂದೆ 8.3 ಕಿಮೀ ಇದ್ದ ಮಾರ್ಗವನ್ನು 3.3 ಕಿಮೀಗೆ ಇಳಿಸಲಾಗಿದೆ.
ಇದನ್ನೂ ಓದಿ : Republic Day Parade 2022: ಗಣರಾಜ್ಯೋತ್ಸವದ ಪರೇಡ್‌ನ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ? ಹೇಗೆ ವೀಕ್ಷಿಸಬೇಕೆಂದು ತಿಳಿಯಿರಿ
ಇಲ್ಲಿಯವರೆಗೆ ಆಹ್ವಾನ ನೀದದವರಿಗೆ ಈ ಬಾರಿ ಆಮಂತ್ರಣ :
ವಿಶೇಷವೆಂದರೆ ಈ ಬಾರಿಯ ರಾಷ್ಟ್ರೀಯ ಸಮಾರಂಭದಲ್ಲಿ, ಸಾಮಾನ್ಯವಾಗಿ ಮೆರವಣಿಗೆ ನೋಡಲು ಬಾರದ ಸಮಾಜದ ವರ್ಗದವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಣರಾಜ್ಯೋತ್ಸವದ ಪರೇಡ್ ಜೊತೆಗೆ 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭವನ್ನು ವೀಕ್ಷಿಸಲು ಆಟೋ-ರಿಕ್ಷಾ ಚಾಲಕರು, ಕಾರ್ಮಿಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ.
ಪ್ರಮುಖ ಆಕರ್ಷಣೆಗಳು:
1965 ಮತ್ತು 1971 ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪ್ರದರ್ಶಿಸಲಾಗುತ್ತದೆ. ಹಳೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳು ಕಳೆದ ದಶಕಗಳಲ್ಲಿ ಭಾರತೀಯ ಸೇನೆಯು ನಡೆಸಿದ ಯುದ್ಧಗಳ ಸಂಕೇತವಾಗಿದೆ. ಹಳೆಯ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಸ್ಥಾನದಲ್ಲಿ ಹೊಸ ಹೊಸ ವಿಷಯಗಳನ್ನು ಕೂಡಾ ಇಂದು ಪ್ರದರ್ಶಿಸಲಾಗುವುದು.
ಒಟ್ಟಾರೆಯಾಗಿ ಹೇಳುವುದಾದರೆ ಈ ಬಾರಿಯ ಪರೇಡ್ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯದ ಅಮೃತೋತ್ಸವದ ವಿಶಿಷ್ಟ ಸಂಗಮವಾಗಲಿದೆ ಎಂದು ಹೇಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.