Republic Day:ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Republic Day: ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪೊಲೀಸ್ ಪದಕ ಘೋಷಣೆ ಆಗಿದೆ. 

Edited by - Zee Kannada News Desk | Last Updated : Jan 25, 2022, 04:28 PM IST
  • ಭಾರತದ ವಿವಿಧ ರಾಜ್ಯಗಳ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ದಿನದಂದು ಪದಕ ನೀಡಲಾಗುತ್ತದೆ.
  • ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪೊಲೀಸ್ ಪದಕ ಘೋಷಣೆ ಆಗಿದೆ.
  • ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
Republic Day:ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ  title=
ಕರ್ನಾಟಕ ಪೊಲೀಸ್

ಬೆಂಗಳೂರು: ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪೊಲೀಸ್ ಪದಕ ಘೋಷಣೆ ಆಗಿದೆ. ಭಾರತದ ವಿವಿಧ ರಾಜ್ಯಗಳ ಅಧಿಕಾರಿಗಳಿಗೆ ಗಣರಾಜ್ಯೋತ್ಸವ (Republic Day) ದಿನದಂದು ಈ ಪದಕ ನೀಡಲಾಗುತ್ತದೆ. 

ಪೊಲೀಸ್ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ ನೀಡಲಾಗುವ ಪ್ರಶಂಸನೀಯ ಪದಕಕ್ಕೆ ಕರ್ನಾಟಕದ (Karnataka Police) 19 ಅಧಿಕಾರಿಗಳು ಈ ಬಾರಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. 

ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕವನ್ನು (President’s Medals) ಪಡೆದ ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. 

ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ: 

  1. ಬಿ ದಯಾನಂದ್, ಎಡಿಜಿಪಿ ಗುಪ್ತಚರ ಇಲಾಖೆ.
  2. ಆರ್. ಹಿತೇಂದ್ರ, ಎಡಿಜಿಪಿ ಕ್ರೈಮ್ ಆಂಡ್ ಟೆಕ್ನಿಕಲ್ ಸರ್ವೀಸ್.
  3. ಬಿ. ಆರ್. ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ ಸಂಚಾರ ಬೆಂಗಳೂರು.
  4. ರಾಮಯ್ಯ ಜನಾರ್ಧನ್, ಕಮಾಂಡೆಂಟ್ ಕೆಎಸ್ ಆರ್ಪಿ 5ನೇ ಬೆಟಾಲಿಯನ್.
  5. ಕುಮಾರ ಡಿ, ಎಸಿಪಿ ಹಲಸೂರು  ಉಪವಿಭಾಗ.
  6. ಪ್ರಭುದೇವ್ ರವಿಪ್ರಸಾದ್, ಡಿಎಸ್ಪಿ ಹುಣಸೂರು ಉಪವಿಭಾಗ.
  7. ವೆಂಕಟಪ್ಪ ನಾಯಕ‌ ಓಲೇಕರ್, ಡಿಎಸ್ಪಿ ಸಿಂದನೂರು.
  8. ಮಲ್ಲೇಶಯ್ಯ .ಎಂ, ಡಿ ಎಸ್ ಪಿ , ಆನೇಕಲ್ ಉಪವಿಭಾಗ.
  9. ಯಶವಂತಕುಮಾರ್, ಡಿಎಸ್ಪಿ ಸೈಬರ್ ಕ್ರೈಮ್ ಸಿಐಡಿ.
  10. ಗಂಗಾಧರ್ ಮಠಪತಿ, ಎಸಿಪಿ ಸಿಸಿಆರ್ ಬಿ, ಕಲಬುರಗಿ.
  11. ಕೆ.ಎಂ ರಮೇಶ್ , ಡಿಎಸ್ಪಿ ಕರ್ನಾಟಕ ಲೋಕಾಯುಕ್ತ.
  12. ಎಸ್. ಬಿ. ಕೆಂಪಯ್ಯ, ಡಿಎಸ್ಪಿ ಸಿಐಡಿ 
  13. ಕೃಷ್ಣಮೂರ್ತಿ ಎಸ್ , ಇನ್ಸ್‌ಪೆಕ್ಟರ್ ಲೋಕಾಯುಕ್ತ.
  14. ಸಿ ಎಸ್ ಸಿಂಪಿ, ಕೆಎಸ್ ಆರ್ ಪಿ ೧ನೇ ಬೆಟಾಲಿಯನ್ ಬೆಂಗಳೂರು.
  15. ಮಹಮ್ಮದನೀಫ್, ಎಆರ್ ಎಸ್ ಐ, ಡಿಎಆರ್ ಬೆಳಗಾವಿ.
  16. ಎಂ ಹೆಚ್ ರೇವಣ್ಣ, ಎಎಸ್ ಐ, ಜಂಟಿ ಸಿಪಿ ಕಚೇರಿ ಬೆಂಗಳೂರು.

ಇದನ್ನೂ ಓದಿ:  ಬಿಡಿಎ ಕರ್ಮಕಾಂಡ ಮೂರೇ ದಿನದಲ್ಲಿ ದಾಖಲಾಯ್ತು 8 ಎಫ್ಐಆರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News