ಪುಟ್ಟ ಕಂದನ ಪ್ರಾಣ ಉಳಿಸಲು ಬೇಕಿತ್ತು 16 ಕೋಟಿಯ ಲಸಿಕೆ..! ಬಳಿಕ ಆಗಿದ್ದು ಪವಾಡ

ಗುಜರಾತ್‌ನ  ಮಹಿಸಾಗರ್ ಜಿಲ್ಲೆಯ 5 ತಿಂಗಳ ಮಗು  ಸ್ಪೈನಲ್ ಮಸ್ಕ್ಯುಲರ್ ಆಂಟ್ರಫಿ  ಕಾಯಿಲೆಯಿಂದ ಬಳಲುತ್ತಿತ್ತು. ಇದೊಂದು ಅನುವಂಶಿಕ ಕಾಯಿಲೆ.   

Written by - Ranjitha R K | Last Updated : May 6, 2021, 09:58 AM IST
  • ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಿತ್ತು 16 ಕೋಟಿ
  • ಮಗುವಿಗೆ ಒಂದು ತಿಂಗಳಿರುವಾಗಲೇ ಗಮನಕ್ಕೆ ಬಂತು ಸಮಸ್ಯೆ
  • ಕ್ರೌಡ್ ಫಂಡಿಂಗ್ ನ ಮೊರೆ ಹೋದ ಹೆತ್ತವರು
ಪುಟ್ಟ ಕಂದನ ಪ್ರಾಣ ಉಳಿಸಲು ಬೇಕಿತ್ತು 16 ಕೋಟಿಯ ಲಸಿಕೆ..! ಬಳಿಕ ಆಗಿದ್ದು ಪವಾಡ title=
ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಿತ್ತು 16 ಕೋಟಿ (file photo)

ಅಹಮದಾಬಾದ್ : ಗುಜರಾತ್ ನ  (Gujarat) ದಂಪತಿಯ 5 ತಿಂಗಳ ಮಗುವಿಗೆ ಅಪರೂಪದ ಕಾಯಿಲೆಯೊಂದು ಕಾಡಿತ್ತು. ಈ ಕಾಯಿಲೆಯ ಚಿಕಿತ್ಸೆಗೆ ಮಗುವಿಗೆ ಲಸಿಕೆ ನೀಡುವ ಅಗತ್ಯವಿತ್ತು. ಈ ಲಸಿಕೆಗೆ ತಗಲುವ ವೆಚ್ಚ ಬರೋಬ್ಬರಿ 16 ಕೋಟಿ. 16 ಕೋಟಿ ಹೊಂದಿಸಬೇಕು ಎಂದರೆ ಅದು ಅಷ್ಟು ಸುಲಭವಲ್ಲ. ಆದರೆ ಹೇಗಾದರೂ ಮಾಡಿ ಮಗುವಿಗೆ ಲಸಿಕೆ ಹಾಕಿಸುವುದು ಅನಿವಾರ್ಯವಾಗಿತ್ತು. ಹಣಕ್ಕಾಗಿ ಈ ಮಗುವಿನ ತಂದೆತಾಯಿ ಆರಿಸಿದ ಮಾರ್ಗ  ಕ್ರೌಡ್ ಫಂಡಿಂಗ್ (Crowd Funding) . ಹೌದು ಕ್ರೌಡ್ ಫಂಡಿಂಗ್ ಮೂಲಕವೇ ಈ ಮಗುವಿನ ಹೆತ್ತವರು 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಮಗುವಿಗೆ ನಿನ್ನೆಯಷ್ಟೇ ಲಸಿಕೆ ಹಾಕಿಸಲಾಗಿದೆ. ಈ ವಿಚಾರವನ್ನು ಮಗುವಿನ ತಂದೆ ರಾಜ್‌ದೀಪ್ ಸಿಂಗ್ ರಾಥೋಡ್ (Rajdeep Sing Rathod) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಮ್ಮ ಕರುಳಬಳ್ಳಿ ಶೀಘ್ರ ಗುಣಮುಖವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸ್ಪೈನಲ್ ಮಸ್ಕ್ಯುಲರ್ ಆಂಟ್ರಫಿ ಕಾಯಿಲೆಯಿಂದ ಬಳಲುತ್ತಿದ್ದ ಮಗು : 
ಗುಜರಾತ್‌ನ (Gujrat) ಮಹಿಸಾಗರ್ ಜಿಲ್ಲೆಯ 5 ತಿಂಗಳ ಮಗು  ಸ್ಪೈನಲ್ ಮಸ್ಕ್ಯುಲರ್ ಆಂಟ್ರಫಿ (Spinal Muscular Atrophy) ಕಾಯಿಲೆಯಿಂದ ಬಳಲುತ್ತಿತ್ತು. ಇದೊಂದು ಅನುವಂಶಿಕ ಕಾಯಿಲೆ.  ಈ ಕಾಯಿಲೆಯಿಂದ ಬಳಲುತ್ತಿರವವರ ಮಾಂಸಖಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ. ರೋಗಿಗೆ ಉಸಿರಾಡುವುದು ಕೂಡಾ ಕಷ್ಟವಾಗಲು ಆರಂಭಿಸುತ್ತದೆ.  ಇದು ಮಾರಣಾಂತಿಕವಾಗಿ ಮಾರ್ಪಡುವ ಸಾಧ್ಯತೆಯೂ ಇದೆ. 

ಇದನ್ನೂ ಓದಿ : Big Decision: Corona ವಿರುದ್ಧದ ಹೋರಾಟದಲ್ಲಿ 'Antibody Cocktail' ಬಳಕೆಗೆ CSSCO ಅನುಮತಿ

ಹುಟ್ಟಿನಿಂದಲೇ ಈ ರೋಗದಿಂದ ಬಳಲುತ್ತಿದ್ದ ಕಂದಮ್ಮ : 
 ಮಗ ಹುಟ್ಟಿದ ಒಂದು ತಿಂಗಳ ನಂತರ ಕೈಕಾಲುಗಳನ್ನು ಅಲುಗಾಡಿಸಲು ಕೂಡಾ ಈ ಮಗುವಿಗೆ (Baby) ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಗುವನ್ನು ವೈದ್ಯರ (Doctor) ಬಳಿ ಕರೆದುಕೊಂಡು ಹೋದರು. ಅಲ್ಲಿ ಮಗುವನ್ನು ತಪಾಸಣೆಗೆ ಒಳಪಡಿಸಿದಾಗ, ಮಗುವಿಗೆ ಸ್ಪೈನಲ್ ಮಸ್ಕ್ಯುಲರ್ ಆಂಟ್ರಫಿ ಟೈಪ್ 1 ಇರುವುದು ಪತ್ತೆಯಾಗಿದೆ. 

ಈ ಮಾರಕ ಕಾಯಿಲೆಗೆ ಇರುವ ಪರಿಹಾರ ಲಸಿಕೆ ಮಾತ್ರ : 
ಈ ವಿಚಿತ್ರ ಕಾಯಿಲೆಗೆ ಇರುವ ಚಿಕಿತ್ಸೆ ಎಂದರೆ, Zolgensma ಲಸಿಕೆ. ಈ ಲಸಿಕೆಯ ಬೆಲೆ 22 ಕೋಟಿ ರೂಪಾಯಿಗಳು. ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ರಾಜ್‌ದೀಪ್‌ ಬಳಿಯಲ್ಲಿ ಎಷ್ಟು ಹಣವಿರಲಿಲ್ಲ. ಆದರೆ ಹೇಗಾದರೂ ಮಾಡಿ ತನ್ನ ಮಗುವನ್ನು ಬದುಕಿಸಲೇ ಬೇಕು ಎನ್ನುವ ಛಲ ಅವರಲ್ಲಿತ್ತು. ತನ್ನ ಮಗುವಿನ ಪ್ರಾಣ ರಕ್ಷಣೆಗಾಗಿ ಜನರ ನೆರವನ್ನು ಪಡೆದರು. ತನ್ನ ಪುಟ್ಟ ಕಂದನಿಗೆ ಇರುವ ಈ ಮಾರಕ ಕಾಯಿಲೆಯ ಬಗ್ಗೆ ಜನರ ಗಮನಕ್ಕೆ ತಂದು ಸಹಾಯ ಮಾಡುವಂತೆ ಕೋರಿದರು. ಜನ ಕೂಡಾ ತಮ್ಮಿಂದಾಗುವ ಸಹಾಯವನ್ನು ಮಾಡಿದ್ದಾರೆ ಹೀಗೆ ಕೇವಲ 42 ದಿನಗಳಲ್ಲಿ 16 ಕೋಟಿ ರೂಪಾಯಿ ಸಂಗ್ರಹವಾಗಿದೆ. 

ಇದನ್ನೂ ಓದಿ : ಕರೋನಾ ಲಸಿಕೆಯ ಸೈಡ್ ಅಫೆಕ್ಟ್ ಬಗ್ಗೆ ಆತಂಕ ಬೇಡ..! ಡಾಕ್ಟರ್ಸ್ ಹೇಳಿದ್ದೇನು ಗೊತ್ತಾ..?

ಕಸ್ಟಮ್ ಸುಂಕವನ್ನು ಮನ್ನಾ ಮಾಡಿದ ಸರ್ಕಾರ : 
ಮೊದಲೇ ಹೇಳಿದ ಹಾಗೆ ಈ ಲಸಿಕೆಯ ಬೆಲೆ 22 ಕೋಟಿ ರೂ.  ಆದರೆ ಲಸಿಕೆ ಮೇಲಿನ 6.5 ಕೋಟಿ ರೂ. ಕಸ್ಟಮ್ ಸುಂಕವನ್ನು (Custom duty) ಸರ್ಕಾರ ಮನ್ನಾ ಮಾಡಿದೆ. ಹಾಗಾಗಿ, 16 ಕೋಟಿ ರೂಪಾಯಿಗಳಲ್ಲಿ ಈ ಕಂದನಿಗೆ ಲಸಿಕೆ ಸಿಕ್ಕಿದಂತಾಗಿದೆ. ಇದೀಗ ಚಿಕಿತ್ಸೆಗೆ ನೆರವಾದ ಪ್ರತಿಯೊಬ್ಬರಿಗೂ ಮಗುವಿನ ತಂದೆ ಧನ್ಯವಾದ ಅರ್ಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News