close

News WrapGet Handpicked Stories from our editors directly to your mailbox

70ರ ಹರೆಯದ ಈ ವ್ಯಕ್ತಿ ಪಿ.ವಿ. ಸಿಂಧು ಅವರನ್ನು ಮದುವೆಯಾಗಬೇಕಂತೆ!

ಮದುವೆಗೆ ಸರಿಯಾದ ವ್ಯವಸ್ಥೆ ಮಾಡದಿದ್ದರೆ...

Updated: Sep 19, 2019 , 12:55 PM IST
70ರ ಹರೆಯದ ಈ ವ್ಯಕ್ತಿ ಪಿ.ವಿ. ಸಿಂಧು ಅವರನ್ನು ಮದುವೆಯಾಗಬೇಕಂತೆ!

ಚೆನ್ನೈ: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ತಮಿಳುನಾಡಿನ ರಾಮನಾಥಪುರಂನಲ್ಲಿ ವಾಸಿಸುತ್ತಿರುವ 70 ವರ್ಷದ ವ್ಯಕ್ತಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಮದುವೆ ವ್ಯವಸ್ಥೆ ಮಾಡದಿದ್ದರೆ, ಆಕೆಯನ್ನು ಅಪಹರಿಸಿಯಾದರೂ ಮದುವೆಯಾಗುವುದಾಗಿ ಆತ ಕಲೆಕ್ಟರ್ ಗೆ ತಿಳಿಸಿದ್ದಾನೆ.

ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ದೂರು ಸ್ವೀಕರಿಸುವ ಸಾಪ್ತಾಹಿಕ ವಿಚಾರಣೆಯ ಸಮಯದಲ್ಲಿ ಈ ಪ್ರಕರಣ ಹೊರಬಂದಿದೆ.

ಏತನ್ಮಧ್ಯೆ, ಎಪ್ಪತ್ತು ವರ್ಷದ ಮಲಯಸಾಮಿ ತಮ್ಮ ದೂರಿನೊಂದಿಗೆ ಕಲೆಕ್ಟರ್ ಕಚೇರಿಗೆ ತಲುಪಿದರು. ಅವರು ಚಿನ್ನದ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಅವರ ಫೋಟೋದೊಂದಿಗೆ ಅರ್ಜಿಯನ್ನು ನೀಡಿದರು, ಅದರಲ್ಲಿ ಅವರು ಮದುವೆಯಾಗುವ ಉದ್ದೇಶವನ್ನು ವ್ಯಕ್ತಪಡಿಸಿದರು.

"ನಾನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ನಾನು ಹೈಕೋರ್ಟ್‌ನ ನ್ಯಾಯಾಧೀಶ ಮತ್ತು ನಾನು ಸರ್ವಾಧಿಕಾರಿ. ನಾನು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬ" ಎಂದು ಈ ವ್ಯಕ್ತಿ ವಿಡಿಯೋ ಒಂದರಲ್ಲಿ ಹೇಳಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಮಲಯಸಾಮಿ ತಾವು 2004 ರ ಏಪ್ರಿಲ್ 4 ರಂದು ಜನಿಸಿದ್ದು, ತಮ್ಮ ವಯಸ್ಸು 16 ವರ್ಷ ಎಂದು ಹೇಳಿಕೊಂಡಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್ ಭಾರತದ ಪಿ.ವಿ ಸಿಂಧು ಈ ದಿನಗಳಲ್ಲಿ ಚಾಂಗ್‌ಝೋವ್ (ಚೀನಾ) ಪ್ರವಾಸದಲ್ಲಿದ್ದಾರೆ. ಚೀನಾ ಓಪನ್ -2019 ರಲ್ಲಿ ಭಾರತದ ಸ್ಟಾರ್ ಶಟ್ಲರ್ ಗುರುವಾರ ಥೈಲ್ಯಾಂಡ್‌ನ ಪೋರ್ನ್‌ಪಾವಿ ಚೋಚುವಾಂಗ್ ವಿರುದ್ಧ ಆಡಲಿದ್ದಾರೆ.