ಈ ಬಾರಿಯ ಲೋಕಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಸಮರ- ಅಮಿತ್ ಷಾ

ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಕದನ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಭಿಪ್ರಾಯಪಟ್ಟರು.

Last Updated : Jan 11, 2019, 06:04 PM IST
ಈ ಬಾರಿಯ ಲೋಕಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಸಮರ- ಅಮಿತ್ ಷಾ title=

ನವದೆಹಲಿ: ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಕದನ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಭಿಪ್ರಾಯಪಟ್ಟರು.

ದೆಹಲಿ ರಾಮ ಲೀಲಾ ಮೈದಾನದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಷಾ ಪ್ರತಿಪಕ್ಷಗಳ ಮಹಾಮೈತ್ರಿಗೆ ಯಾವುದೇ ನೀತಿ ಮತ್ತು ಕಾರ್ಯಕ್ರಮವಿಲ್ಲ ಆದ್ದರಿಂದ ಅದು ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದರು.

ನಾವು 2014 ರಲ್ಲಿ  ಅವರೆಲ್ಲರನ್ನು ಕೂಡ ಸೋಲಿಸಿದ್ದೆವೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ 2014 ರಲ್ಲಿ ಗಳಿಸಿದ ಸೀಟ್ ಗಳಿಗಿಂತಲೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದರು. ಇದೇ ವೇಳೆ ಮೇಲ್ವರ್ಗದ ಬಡವರಿಗೆ ನೀಡಿರುವ ಶೇ 10 ರಷ್ಟು ಮಿಸಲಾತಿ ಸೌಲಭ್ಯವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು ಮೋದಿ ಸರ್ಕಾರ ಕೋಟ್ಯಾಂತರ ಯುವಕರ ಕನಸನ್ನು ಈಡೇರಿಸಿದೆ. ಇದು ಸಂಸತ್ತು ಜಾರಿಗೆ ತಂದಿರುವ ಪ್ರಮುಖ ಕಾಯ್ದೆ ಎಂದು ಷಾ ತಿಳಿಸಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ಕೇರಳದಲ್ಲಿ ಗೆಲ್ಲುವ ಮೂಲಕ ನಮ್ಮ ಪ್ರಸ್ತುತಿಯನ್ನು ಸಾಭಿತುಪಡಿಸಲಿದೆ. 2014 ರಲ್ಲಿನ ಫಲಿತಾಂಶ ನಿಜಕ್ಕೂ ಅದ್ಬುತ. ಈ ಬಾರಿ  ಮತ್ತೆ  ಪುನರಾವರ್ತನೆಯಾಗುತ್ತದೆ ಎಂದುತಿಳಿಸಿದರು.

 

Trending News