ಲಾಕ್ ಡೌನ್ ನಲ್ಲಿ ಮದುವೆಯಾಗುತ್ತಿದ್ದವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಈ ರಾಜ್ಯ...!

ಮಧ್ಯಪ್ರದೇಶದಲ್ಲಿ ಮೇ ತಿಂಗಳದ COVID-19 ಲಾಕ್‌ಡೌನ್ ನಿರ್ಬಂಧದ ಸಮಯದಲ್ಲಿ ಮದುವೆಯಾಗಿದ್ದಿರಾ ? ಒಂದು ವೇಳೆ ನೀವು ಹಾಗೆ ಮಾಡಿದ್ದೆ ಆದಲ್ಲಿ ನಿಮಗೆ ಅಧಿಕೃತ ಮದುವೆ ಪ್ರಮಾಣ ಪತ್ರ ಇನ್ಮುಂದೆ ದೊರೆಯುವುದಿಲ್ಲ.

Last Updated : May 27, 2021, 11:36 PM IST
  • ಮಧ್ಯಪ್ರದೇಶದಲ್ಲಿ ಮೇ ತಿಂಗಳದ COVID-19 ಲಾಕ್‌ಡೌನ್ ನಿರ್ಬಂಧದ ಸಮಯದಲ್ಲಿ ಮದುವೆಯಾಗಿದ್ದಿರಾ ? ಒಂದು ವೇಳೆ ನೀವು ಹಾಗೆ ಮಾಡಿದ್ದೆ ಆದಲ್ಲಿ ನಿಮಗೆ ಅಧಿಕೃತ ಮದುವೆ ಪ್ರಮಾಣ ಪತ್ರ ಇನ್ಮುಂದೆ ದೊರೆಯುವುದಿಲ್ಲ.
ಲಾಕ್ ಡೌನ್ ನಲ್ಲಿ ಮದುವೆಯಾಗುತ್ತಿದ್ದವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಈ ರಾಜ್ಯ...! title=
ಸಾಂದರ್ಭಿಕ ಚಿತ್ರ

ನವದೆಹಲಿ: ಮಧ್ಯಪ್ರದೇಶದಲ್ಲಿ ಮೇ ತಿಂಗಳದ COVID-19 ಲಾಕ್‌ಡೌನ್ ನಿರ್ಬಂಧದ ಸಮಯದಲ್ಲಿ ಮದುವೆಯಾಗಿದ್ದಿರಾ ? ಒಂದು ವೇಳೆ ನೀವು ಹಾಗೆ ಮಾಡಿದ್ದೆ ಆದಲ್ಲಿ ನಿಮಗೆ ಅಧಿಕೃತ ಮದುವೆ ಪ್ರಮಾಣ ಪತ್ರ ಇನ್ಮುಂದೆ ದೊರೆಯುವುದಿಲ್ಲ.

ಇಂತಹ ಮದುವೆಗಳನ್ನು ಶೂನ್ಯ ಮದುವೆ ಎಂದು ಪರಿಗಣಿಸಲು ಮಧ್ಯಪ್ರದೇಶದಲ್ಲಿನ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ನಿರ್ಧರಿಸಿದೆ.ರಾಜ್ಯಾದ್ಯಂತ ಕರೋನವೈರಸ್ (Coronavirus) ಪ್ರಕರಣಗಳಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರ ಮೇ ತಿಂಗಳಲ್ಲಿ ವಿವಾಹಗಳಿಗೆ ನಿಷೇಧ ಹೇರಿತ್ತು. ಆದಾಗ್ಯೂ, ಸರ್ಕಾರವು ನಿಷೇಧ ಹೇರಿದ ಹೊರತಾಗಿಯೂ, ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಿ ಕನಿಷ್ಠ 130 ವಿವಾಹ ಸಮಾರಂಭಗಳು 'ರಹಸ್ಯವಾಗಿ' ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಈ ಹಿನ್ನಲೆಯಲ್ಲಿ ಈಗ ಈ ಕ್ರಮವನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Baba Ramdev : 'ಅವರ ಅವರಪ್ಪನಿಂದಲೂ ಕೂಡ ನನ್ನನ್ನು ಬಂಧಿಸಲು ಸಾಧ್ಯವಿಲ್ಲ'

ವಿವಾಹಗಳನ್ನು ನಿಷೇಧಿಸಿದ ಅವಧಿಯಲ್ಲಿ ಮದುವೆಯಾದ ಈ ದಂಪತಿಗಳಿಗೆ ಯಾವುದೇ ಪ್ರಮಾಣಪತ್ರಗಳನ್ನು ನೀಡಬಾರದು ಅಥವಾ ಕ್ರಮವನ್ನು ಎದುರಿಸಬೇಕು ಎಂದು ಮದುವೆ ರಿಜಿಸ್ಟ್ರಾರ್ ಕಚೇರಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.ಇದಲ್ಲದೆ, ಈ ದಂಪತಿಗಳಿಗೆ 'ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಆದೇಶಗಳಿಗೆ ಅವಿಧೇಯತೆ ತೋರಿದವರಿಗೆ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.

ಕೆಲವು ಜಿಲ್ಲಾ ಅಧಿಕಾರಿಗಳು  ಈಗ ಅಂತಹ ವಿವಾಹಗಳನ್ನು ಕಾನೂನುಬಾಹಿರವೆಂದು ಘೋಷಿಸಲು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ ಮತ್ತು ಮೇ ತಿಂಗಳಲ್ಲಿ ವಿವಾಹವಾದವರಿಗೆ ಯಾವುದೇ ಪ್ರಮಾಣಪತ್ರಗಳನ್ನು ನೀಡದಂತೆ ರಿಜಿಸ್ಟ್ರಾರ್ ಕಚೇರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

ಮಧ್ಯಪ್ರದೇಶ ಸರ್ಕಾರವು ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿವಾಹಗಳಿಗೆ ನಿಷೇಧ ಹೇರಿದ ನಂತರ, ಅನೇಕ ದಂಪತಿಗಳು ತಮ್ಮ ವಿವಾಹ ಯೋಜನೆಗಳನ್ನು ಮುಂದಿಟ್ಟುಕೊಂಡು ನೆರೆಯ ರಾಜ್ಯವಾದ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡು ಆಚರಣೆಗಳು ಮತ್ತು ಸಮಾರಂಭಗಳನ್ನು ನಡೆಸಿದರು. ಇತರ ರಾಜ್ಯಗಳಲ್ಲಿ ಮದುವೆಯಾದ ದಂಪತಿಗಳಿಗೆ, ಈ ಆದೇಶವು ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News