Sakshi Murder Case: ಸಾಕ್ಷಿಯನ್ನು ಬರ್ಬರವಾಗಿ ಹತ್ಯೆಗೈದ ಸಾಹಿಲ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದೇನು?

Sakshi Murder Case: ಶ್ರದ್ಧಾ ಮರ್ಡರ್ ಕೇಸ್ ಬಳಿಕ ದೆಹಲಿಯಲ್ಲಿ ಮತ್ತೊಂದು ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಸಾಹಿಲ್ ಖಾನ್ ಎಂಬ ತಲೆತಿರುಕ  ವ್ಯಕ್ತಿ 16 ವರ್ಷದ ಅಪ್ರಾಪ್ತ ಬಾಲಕಿ ಸಾಕ್ಷಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದೀಗ ಈ ಪ್ರಕರಣದಲ್ಲಿ ಆರೋಪಿ ಮಹತ್ವದ ಹೇಳಿಕೆ ನೀಡಿದ್ದಾನೆ.  

Written by - Nitin Tabib | Last Updated : May 30, 2023, 08:43 PM IST
  • ಆರೋಪಿ ಸಾಹಿಲ್ ಸಾಕ್ಷಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಕ್ರೌರ್ಯ ಸಮೀಪದಲ್ಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
  • ವಿಚಾರಣೆ ವೇಳೆ ಆರೋಪಿ ಸಾಹಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡು ಸಾಕ್ಷಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ.
  • ವಿಚಾರಣೆ ವೇಳೆ, ಸಾಕ್ಷಿ ಮತ್ತು ಸಾಹಿಲ್ ಸುಮಾರು 3 ವರ್ಷಗಳಿಂದ ಪರಸ್ಪರ ಚಿರಪರಿಚಿತರಾಗಿದ್ದರು ಮತ್ತು ಇಬ್ಬರೂ ಇನ್‌ಸ್ಟಾ ಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಿದ್ದರು
  • ಆದರೆ ಸಾಹಿಲ್‌ನ ಪೂರ್ಣ ಹೆಸರು 'ಸಾಹಿಲ್ ಖಾನ್' ಎಂದು ಸಾಕ್ಷಿಗೆ ನಂತರ ತಿಳಿದಿತ್ತು ಎನ್ನಲಾಗಿದೆ.
Sakshi Murder Case: ಸಾಕ್ಷಿಯನ್ನು ಬರ್ಬರವಾಗಿ ಹತ್ಯೆಗೈದ ಸಾಹಿಲ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದೇನು? title=

Delhi Murder Case: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ರಾಷ್ಟ್ರರಾಜಧಾನಿ ದೆಹಲಿ ಇನ್ನೂ  ಭೀತಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನುವಾಗಲೇ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನು ತಲೆತಿರುಕ ವ್ಯಕ್ತಿಯೊಬ್ಬ ಹತ್ಯೆಗೈದ ರೀತಿ ನೋಡಿದರೆ ಪ್ರತಿಯೊಬ್ಬರ ಆತ್ಮವೂ ಒಂದು ಕ್ಷಣ ಕಂಪಿಸುತ್ತದೆ. ಅಪ್ರಾಪ್ತ ಬಾಲಕಿಯ ಹೆಸರು ಸಾಕ್ಷಿ ಎಂದು ಹೇಳಲಾಗುತ್ತಿದ್ದು, ಕೊಲೆ ಮಾಡಿದ 20 ವರ್ಷದ ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಮಹತ್ವದ ಹೇಳಿಕೆ ನೀಡಿದ್ದಾನೆ.

ಅಪರಾಧ ಒಪ್ಪಿಕೊಂಡ ಸಾಹಿಲ್
ಸಾಕ್ಷಿ ಹತ್ಯೆ ಆರೋಪಿ ಸಾಹಿಲ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಸಾರ್ವಜನಿಕರ ಮುಂದೆ ಇಡಲು ದೆಹಲಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ್ದು, ಸಾಹಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥ ಯಾವುದೇ ಸಂದರ್ಭದಲ್ಲಿ ತಪ್ಪಿಸಿಕೊಳ್ಳದಂತೆ ಪ್ರಬಲ ಚಾರ್ಜ್ ಶೀಟ್ ಸಿದ್ಧಪಡಿಸಲು ಪ್ರಯತ್ನಿಸುವುದಾಗಿ ದೆಹಲಿಯ ಉತ್ತರ ಹೊರವಲಯದ ಡಿಸಿಪಿ ರವಿಕುಮಾರ್ ಹೇಳಿದ್ದಾರೆ. ಪೊಲೀಸರ ಸಂಪೂರ್ಣ ಒತ್ತು ವೈಜ್ಞಾನಿಕ ತನಿಖೆಯ ಮೇಲಿರಲಿದೆ. ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಲವ್ ಜಿಹಾದ್‌ನ ಕೋನವನ್ನು ಪತ್ತೆ ಹಚ್ಚಲು ಪೊಲೀಸರು ಯತ್ನಿಸಲಿದ್ದು, ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Rajasthan: ಸಚಿನ್ ಪೈಲಟ್ ಗೆ ಸಿಗಲಿದೆಯಾ ದೊಡ್ಡ ಜವಾಬ್ದಾರಿ? 4 ಗಂಟೆಗಳ ಕಾಲ ನಡೆದ ಮೀಟಿಂಗ್ ನಲ್ಲಿ ನಡೆದಿದ್ದೇನು?

3 ವರ್ಷಗಳಿಂದ ಪರಸ್ಪರ ಚಿರಪರಿಚಿತರಾಗಿದ್ದರು
ಆರೋಪಿ ಸಾಹಿಲ್ ಸಾಕ್ಷಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಕ್ರೌರ್ಯ ಸಮೀಪದಲ್ಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಚಾರಣೆ ವೇಳೆ ಆರೋಪಿ ಸಾಹಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡು ಸಾಕ್ಷಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ವಿಚಾರಣೆ ವೇಳೆ, ಸಾಕ್ಷಿ ಮತ್ತು ಸಾಹಿಲ್ ಸುಮಾರು 3 ವರ್ಷಗಳಿಂದ ಪರಸ್ಪರ ಚಿರಪರಿಚಿತರಾಗಿದ್ದರು  ಮತ್ತು ಇಬ್ಬರೂ ಇನ್‌ಸ್ಟಾ ಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಿದ್ದರು ಆದರೆ ಸಾಹಿಲ್‌ನ ಪೂರ್ಣ ಹೆಸರು 'ಸಾಹಿಲ್ ಖಾನ್' ಎಂದು ಸಾಕ್ಷಿಗೆ ನಂತರ ತಿಳಿದಿತ್ತು ಎನ್ನಲಾಗಿದೆ.

ಇದನ್ನೂ ಓದಿ-Delhi: 16 ವರ್ಷದ ಅಪ್ರಾಪ್ತೆಯನ್ನು ಕೊಚ್ಚಿ ಕೊಲೆಗೈದ ತಲೆತಿರುಕ, ಬುಲಂದ್ ಶಹರ್ ನಲ್ಲಿ ಆರೋಪಿ ಸಾಹಿಲ್ ಬಂಧನ

ಕೇಜ್ರಿವಾಲ್ ಘೋಷಣೆ
ದೆಹಲಿಯ ಕೇಜ್ರಿವಾಲ್ ಸರ್ಕಾರ ಈಗಾಗಲೇ ಸಾಕ್ಷಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇದಲ್ಲದೇ ನ್ಯಾಯಾಲಯದಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ. ಈ ಹತ್ಯೆಯನ್ನು ನಡೆಸಿದ ನಂತರ ಆರೋಪಿಯು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇದಾದ ಬಳಿಕ ಪೊಲೀಸರು ಫೋನ್ ಟ್ರ್ಯಾಕಿಂಗ್ ಮೂಲಕ ಆತನನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News