ಮುಂಬೈ: ಆಧುನಿಕ ಕ್ರಿಕೆಟ್ ಯುಗದ ತಾಲಿಸ್ಮನ್ ಎಂದು ಪರಿಗಣಿಸಲ್ಪಟ್ಟಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ಸತತವಾಗಿ ರನ್ ಗಳಿಸುತ್ತಿದ್ದಾರೆ.ಇನ್ನೊಂದೆಡೆ ಅವರು ಸಚಿನ್ ತೆಂಡೂಲ್ಕರ್ ಅವರ ಏಕದಿನ ದಾಖಲೆಯನ್ನು ಅತಿ ಶೀಘ್ರದಲ್ಲಿಯೇ ಮೀರಿಸಲು ಸಜ್ಜಾಗಿದ್ದಾರೆ.
ಆದರೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರಕಾರ ತೆಂಡೂಲ್ಕರ್ ಅವರ ಈ ಒಂದು ದಾಖಲೆಯನ್ನು ಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಅದು ಬೇರೆ ಯಾವ ಆಟಗಾರನು ಈ ದಾಖಲೆಯ ಹತ್ತಿರ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ನಲ್ಲಿ 60.31 ರ ಸರಾಸರಿಯಲ್ಲಿ 11520 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ. ಇನ್ನು ಆರು ಶತಕಗಳನ್ನು ಗಳಿಸಿದ್ದೆ ಆದಲ್ಲಿ ಅವರು ಸಚಿನ್ ಅವರ ಅತಿ ಹೆಚ್ಚು ಶತಕದ ದಾಖಲೆಗಳನ್ನು ಮುರಿಯಲಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವೀರೇಂದ್ರ ಸೇಹ್ವಾಗ್ "ಯಾರೂ ಮುರಿಯಲಾಗದ ಒಂದು ದಾಖಲೆಯ ಸಚಿನ್ ಅವರ 200 ಟೆಸ್ಟ್ ಪಂದ್ಯಗಳ ದಾಖಲೆಯಾಗಿದೆ. 200 ಟೆಸ್ಟ್ ಪಂದ್ಯಗಳ ದಾಖಲೆಯನ್ನು ಯಾರಾದರೂ ಮುರಿಯಬಹುದು ಎಂದು ನನಗೆ ಅನಿಸಿಲ್ಲ, 200 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಯಾರಾದರೂ ಆಡಬಹುದೆಂದು ಕೂಡ ನಾನು ಭಾವಿಸುವುದಿಲ್ಲ ”ಎಂದು ಹೇಳಿದರು.