close

News WrapGet Handpicked Stories from our editors directly to your mailbox

ಭೀಕರ ಕಾರು ಅಪಘಾತ; ಬಿಜೆಪಿ ನಾಯಕ ಸೇರಿ ಮೂವರ ದುರ್ಮರಣ

ಶಮೀರ್‌ಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕ  ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Updated: Aug 13, 2019 , 10:18 PM IST
ಭೀಕರ ಕಾರು ಅಪಘಾತ; ಬಿಜೆಪಿ ನಾಯಕ ಸೇರಿ ಮೂವರ ದುರ್ಮರಣ

ಶಮೀರ್‌ಪೇಟೆ: ಹೈದರಾಬಾದ್‌ನ ಉಪನಗರವಾದ ಶಮೀರ್‌ಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕ  ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

ನಾಗೋಲ್ ಮೂಲದ ಬಿಜೆಪಿ ಮುಖಂಡ ಕೆ ಕಿಶೋರ್ ಚಾರಿ (47) ಫೋರ್ಡ್ ಇಕೋಸ್ಪೋರ್ಟ್ನಲ್ಲಿ ಪ್ರಯಾಣಿಸುತ್ತಿದ್ದಾಗ ಶಮಿರ್‌ಪೇಟೆ ತಹಶೀಲ್ದಾರ್ ಕಚೇರಿ ಬಳಿ ವಾಹನವು ನಿಯಂತ್ರಣ ಕಳೆದುಕೊಂಡ ಪರಿಣಾಮ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರು ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. 

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.