ಸೇನಾ ಬಾಂಬ್ ಸ್ಫೋಟ: ಒಂದೇ ಕುಟುಂಬದ ಮೂವರ ದುರ್ಮರಣ

ಸ್ಫೋಟದಲ್ಲಿ ಮೃತರ ಮೂವರು ಸಂಬಂಧಿಕರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶಿವಪುರಿ ಎಎಸ್ಪಿ ಜಿಎಸ್ ಕನ್ವರ್ ತಿಳಿಸಿದ್ದಾರೆ. 

Last Updated : Jul 2, 2019, 11:53 AM IST
ಸೇನಾ ಬಾಂಬ್ ಸ್ಫೋಟ: ಒಂದೇ ಕುಟುಂಬದ ಮೂವರ ದುರ್ಮರಣ title=

ಭೋಪಾಲ್: ಸೇನಾ ಬಾಂಬ್ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹಿಮ್ಮತ್ ಪುರ್ ಪ್ರದೇಶದಲ್ಲಿ ನಡೆದಿದೆ. 

ಘಟನೆಯಲ್ಲಿ ಶ್ಯಾಮ್ ಜಾತವ್ (55), ಅವರ ಮಗಳು ಸುಖದೇವಿ (30) ಮತ್ತು ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಸ್ಫೋಟದಲ್ಲಿ ಮೃತರ ಮೂವರು ಸಂಬಂಧಿಕರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶಿವಪುರಿ ಎಎಸ್ಪಿ ಜಿಎಸ್ ಕನ್ವರ್ ತಿಳಿಸಿದ್ದಾರೆ. 

ಸಾಮಾನ್ಯವಾಗಿ ಈ ಪ್ರದೇಶದ ಗ್ರಾಮಸ್ಥರು ಸೇನೆ ಬಳಸಿದ ಗುಂಡುಗಳನ್ನು ತಂದು ಕರಗಿಸಿ ಲೋಹವಾಗಿ ಪರಿವರ್ತಿಸುತ್ತಾರೆ. ಅದೇ ರೀತಿ ಸೋಮವಾರ ಈ ಪ್ರದೇಶದಲ್ಲಿ ಬಿದ್ದಿದ್ದ ಬಾಂಬೊಂದನ್ನು ಶ್ಯಾಮ್ ಜಾತವ್ ಸಂಗ್ರಹಿಸಿದ್ದು, ಮನೆಗೆ ತಂದು ಕರಗಿಸಲು ಹೋದಾಗ ಈ ಘಟನೆ ನಡೆದಿದೆ. ಆತ ಮನೆಗೆ ತಂದಿದ್ದು ಜೀವಂತ ಬಾಂಬ್ ಎಂಬುದು ಆತನ ಗಮನಕ್ಕೆ ಬಾರದಿದ್ದುದ್ದೇ ಇಂಥ ದುರ್ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
Trending News