TikTok Video: ಪೊಲೀಸ್ ಠಾಣೆಯಲ್ಲಿ ಡ್ಯಾನ್ಸ್ ಮಾಡಿದ್ದ ಮಹಿಳಾ ಪೇದೆ ಸಸ್ಪೆಂಡ್!

ಕರ್ತವ್ಯ ಲೋಪ ಮತ್ತು ನಿಯಮ ಉಲ್ಲಂಘಿಸಿದ ಕಾರಣದ ಮೇಲೆ ಪೇದೆ ಅರ್ಪಿತಾ ಚೌಧರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೋಲೀಸ್ ಅಧಿಕಾರಿ ಮಂಜಿತಾ ವಂಜಾರ ತಿಳಿಸಿದ್ದಾರೆ.

Last Updated : Jul 25, 2019, 01:25 PM IST
TikTok Video: ಪೊಲೀಸ್ ಠಾಣೆಯಲ್ಲಿ ಡ್ಯಾನ್ಸ್ ಮಾಡಿದ್ದ ಮಹಿಳಾ ಪೇದೆ ಸಸ್ಪೆಂಡ್! title=

ಮೆಹ್ಸಾನಾ: ಪೊಲೀಸ್ ಠಾಣೆಯೊಳಗೆ ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ವಿಡಿಯೋ ಮಾಡಿದ್ದ ಸುದ್ದಿ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಆ ಮಹಿಳಾ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾದ ಮಹಿಳಾ ಪೇದೆ ಅರ್ಪಿತಾ ಚೌದರಿ ಕರ್ತವ್ಯದ ಸಂದರ್ಭದಲ್ಲೇ ಪೊಲೀಸ್ ಠಾಣೆಯೊಳಗೆ ಡ್ಯಾನ್ಸ್ ಮಾಡಿರುವ ಟಿಕ್ ಟಾಕ್ ವೀಡಿಯೋವೊಂದು ಗುರುವಾರ ಸಾಮಾಜಿಲ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಳಿಕ ಪೊಲೀಸ್ ಠಾಣೆಯ ಒಳಗೇ ಕಾನೂನು, ನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ಹಲವು ಟೀಕೆಗಳು ವ್ಯಕ್ತವಾಗಿದ್ದವು. ಈ ಬೆನ್ನಲ್ಲೇ ಉಪ ಅಧೀಕ್ಷಕರಾದ ಮಂಜಿತಾ ವಂಜಾರ ಅವರು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದರು.

ಟಿಕ್ ಟಾಕ್ ವೀಡಿಯೋದಲ್ಲಿರುವ ಮಹಿಳಾ ಪೇದೆ ಅರ್ಪಿತಾ ಚೌದರಿ ಎಂದೂ, ಆ ಠಾಣೆ ಮೆಹ್ಸಾನಾದ ಲಗ್ನಾಜ್ ಪೊಲೀಸ್ ಠಾಣೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಕರ್ತವ್ಯ ಲೋಪ ಮತ್ತು ನಿಯಮ ಉಲ್ಲಂಘಿಸಿದ ಕಾರಣದ ಮೇಲೆ ಪೇದೆ ಅರ್ಪಿತಾ ಚೌಧರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೋಲೀಸ್ ಅಧಿಕಾರಿ ಮಂಜಿತಾ ವಂಜಾರ ತಿಳಿಸಿದ್ದಾರೆ.

Trending News