ನಾಳೆ ಆರನೇ ಹಂತದ ಲೋಕಸಭಾ ಚುನಾವಣೆ, ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ...

ಭಾನುವಾರದಂದು ದೇಶದಲ್ಲಿ ಆರನೇ ಹಂತದ ಲೋಕಸಭಾ ಚುನಾವಣೆ ಒಟ್ಟು 59 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡು ಏಳು ರಾಜ್ಯಗಳಲ್ಲಿ ನಡೆಯಲಿದೆ.ಈ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಆತಿಷಿ, ಎಸ್ಪಿ ಅಖಿಲೇಶ್ ಯಾದವ್, ಕೇಂದ್ರ ಸಚಿವೆ ಮೇನಕಾ ಗಾಂಧಿ,ಗೌತಮ್ ಗಂಭೀರ್, ಸಾಧ್ವಿ ಪ್ರಗ್ಯಾ ಸಿಂಗ್ ,ದಿಗ್ವಿಜಯ್ ಸಿಂಗ್ ಅವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

Last Updated : May 11, 2019, 07:35 PM IST
ನಾಳೆ ಆರನೇ ಹಂತದ ಲೋಕಸಭಾ ಚುನಾವಣೆ, ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ...  title=
file photo

ನವದೆಹಲಿ: ಭಾನುವಾರದಂದು ದೇಶದಲ್ಲಿ ಆರನೇ ಹಂತದ ಲೋಕಸಭಾ ಚುನಾವಣೆ ಒಟ್ಟು 59 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡು ಏಳು ರಾಜ್ಯಗಳಲ್ಲಿ ನಡೆಯಲಿದೆ.ಈ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಆತಿಷಿ, ಎಸ್ಪಿ ಅಖಿಲೇಶ್ ಯಾದವ್, ಕೇಂದ್ರ ಸಚಿವೆ ಮೇನಕಾ ಗಾಂಧಿ,ಗೌತಮ್ ಗಂಭೀರ್, ಸಾಧ್ವಿ ಪ್ರಗ್ಯಾ ಸಿಂಗ್ ,ದಿಗ್ವಿಜಯ್ ಸಿಂಗ್ ಅವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಯಾವ ರಾಜ್ಯಗಳಲ್ಲಿ ಎಷ್ಟು ಸೀಟುಗಳಿವೆ? ಇಲ್ಲಿದೆ ಮಾಹಿತಿ:   

-ಬಿಹಾರದ ಆರನೇ ಹಂತದ ಚುನಾವಣೆಯಲ್ಲಿ 8 ಸ್ಥಾನಗಳಿವೆ. 

-ದೆಹಲಿಯಲ್ಲಿ ಎಲ್ಲ 7 ಸ್ಥಾನಗಳಿಗಾಗಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

-ಹರಿಯಾಣದಲ್ಲಿಯೂ ಕೂಡ ಎಲ್ಲ 10 ಸ್ಥಾನಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

-ಜಾರ್ಖಂಡ್ ನಲ್ಲಿ 4 ಸೀಟುಗಳಿಗಾಗಿ ಮತದಾನ ನಡೆಯಲಿದೆ. ಇಲ್ಲಿ ಈಗಾಗಲೇ ಏಪ್ರಿಲ್ 29 ಮತ್ತು ಮೇ 6 ರಂದು ಚುನಾವಣೆಗೆ ನಡೆದಿತ್ತು. ಮೇ 19ರಂದು ಕೂಡ ಜಾರ್ಖಂಡ್ ದಲ್ಲಿ ಮತದಾನ ನಡೆಯಲಿದೆ.

-ಮಧ್ಯಪ್ರದೇಶದ 8 ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದೆ. ಇದಕ್ಕೂ ಮೊದಲು ಏಪ್ರಿಲ್ 29 ಮತ್ತು ಮೇ 6 ರಂದು ಮತದಾನ ನಡೆದಿತ್ತು. ಮೇ 19ರಂದು ಕೊನೆಯ ಹಂತದ ಮತದಾನದಲ್ಲಿ ಕೂಡ ಮಧ್ಯಪ್ರದೇಶ ಭಾಗವಹಿಸಲಿದೆ.

-ಉತ್ತರ ಪ್ರದೇಶದ 14 ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 11 ರಿಂದ ಪ್ರಾರಂಭವಾದ ಎಲ್ಲ ಹಂತಗಳಲ್ಲಿ ಇಲ್ಲಿ ಮತದಾನ ನಡೆಯುತ್ತಿದೆ.

-ಪಶ್ಚಿಮ ಬಂಗಾಳದಲ್ಲಿ 8 ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದೆ.ಇಲ್ಲಿಯೂ ಕೂಡ ಏಳು ಹಂತದ ಮತದಾನ ನಡೆಯುತ್ತಿದೆ.

-1,13,167- ಮತದಾನ ಕೇಂದ್ರಗಳು

-979- ಅಭ್ಯರ್ಥಿಗಳು

-ಕೇವಲ ಹರ್ಯಾಣದಲ್ಲಿಯೇ 223 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

-ಏಳು ರಾಜ್ಯಗಳಲ್ಲಿ 3281 ತೃತೀಯ ಲಿಂಗದ ಮತದಾರರಿದ್ದಾರೆ

-ಉಳಿದ 59 ಕ್ಷೇತ್ರಗಳಲ್ಲಿ  ಮೇ 19 ರಂದು ಕೊನೆಯ ಹಂತದ ಚುನಾವಣೆ ಎಂಟು ರಾಜ್ಯಗಳಲ್ಲಿ ನಡೆಯಲಿದೆ.

Trending News