ಆರ್ಥಿಕ ರೂಪುರೇಷೆ ಸಿದ್ದಪಡಿಸಲು ನಾಳೆ ನೀತಿ ಆಯೋಗದಲ್ಲಿ ಪ್ರಧಾನಿ ಮೋದಿ ಸಂವಾದ

    

Last Updated : Jan 9, 2018, 08:00 PM IST
ಆರ್ಥಿಕ ರೂಪುರೇಷೆ ಸಿದ್ದಪಡಿಸಲು ನಾಳೆ ನೀತಿ ಆಯೋಗದಲ್ಲಿ ಪ್ರಧಾನಿ ಮೋದಿ ಸಂವಾದ title=
ಸಂಗ್ರಹ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ಎಲ್ಲ ಪ್ರಮುಖ ಕ್ಷೇತ್ರಗಳ ತಜ್ಞರು ನೀತಿ ಆಯೋಗದಲ್ಲಿ ಬುಧವಾರದಂದು ಸಂವಾದ ನಡೆಸಲಿದ್ದಾರೆ.

ಆರ್ಥಿಕ ಕಾಯ್ದೆಗಳು: ಮುಂದಿರುವ ಮಾರ್ಗ ಎನ್ನುವ ವಿಷಯಕ್ಕೆ ಅನುಗುಣವಾಗಿ  ನೀತಿ ಆಯೋಗದ ಆಯ್ದ ವಲಯಗಳ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು ಪ್ರಧಾನ ಮಂತ್ರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಕಲ್ಪಿಸಿಕೊಂಡಿರುವ ಹೊಸ ಭಾರತಕ್ಕೆ ಹೊಸ ಮುನ್ನಡಿ ಇಡುವ ಸಲುವಾಗಿ ಆರ್ಥಿಕ ನೀತಿಯ ಮುಂದಿರುವ  ಹೊಸ ಮಾರ್ಗಗಳ  ಕುರಿತಾಗಿ ದೇಶದ ಹಲವಾರು ತಜ್ಞರು ಈ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ಪ್ರಧಾನಿಗಳ ಜೊತೆಗೆ ಹಂಚಿಕೊಳ್ಳಲಿದ್ದಾರೆ. 

ಈ ಚರ್ಚೆಯು ಪ್ರಮುಖವಾಗಿ ಆರು ವಿಷಯಗಳನ್ನು ಕೇಂದ್ರೀಕರಿಸುತ್ತದೆ ಅದರಲ್ಲಿ ಪ್ರಮುಖವಾಗಿ  ಸ್ಥೂಲ ಆರ್ಥಿಕ ಸಮತೋಲನಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಗರ ಅಭಿವೃದ್ಧಿ, ಮೂಲಭೂತ ಸೌಕರ್ಯ ಮತ್ತು ಸಂಪರ್ಕ, ಉದ್ಯೋಗ, ಉತ್ಪಾದನೆ ಮತ್ತು ರಫ್ತುಗಳು ಮತ್ತು ಆರೋಗ್ಯ ಮತ್ತು ಶಿಕ್ಷಣ. ವಿಷಯಗಳ ಮೇಲೆ ಚರ್ಚೆ ನಡೆಸಿ ಮುಂದಿನ ಅರ್ಥಿಕ ಬೆಳೆವಣಿಗೆಯ ರೂಪುರೇಷೆಗಳನ್ನು ಸಿದ್ದಪಡಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ, ರಸ್ತೆ ಸಾರಿಗೆ, ಹೆದ್ದಾರಿಗಳು, ಶಿಪ್ಪಿಂಗ್ ಮತ್ತು ಗಂಗಾ ನೀರು ಪುನರ್ವಸತಿ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ರಾಜ್ಯ ಯೋಜನಾ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ 

Trending News