ತೈಲ ದರ ಏರಿಕೆ ಖಂಡಿಸಿ ನಾಳೆ ಭಾರತ ಬಂದ್

ಕಾಂಗ್ರೆಸ್ ನೇತೃತ್ವದದಲ್ಲಿ ನಾಳೆ ಭಾರತಾಧ್ಯಂತ ಬಂದ್ ಘೋಷಿಸಲಾಗಿದೆ.ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕರೆ ನೀಡಿರುವ ಕರೆಗೆ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಸಹಿತ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದೆ.

Last Updated : Sep 9, 2018, 04:42 PM IST
ತೈಲ ದರ ಏರಿಕೆ ಖಂಡಿಸಿ ನಾಳೆ ಭಾರತ ಬಂದ್ title=

ಬೆಂಗಳೂರು: ಕಾಂಗ್ರೆಸ್ ನೇತೃತ್ವದದಲ್ಲಿ ನಾಳೆ ಭಾರತಾಧ್ಯಂತ ಬಂದ್ ಘೋಷಿಸಲಾಗಿದೆ.ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕರೆ ನೀಡಿರುವ ಕರೆಗೆ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಸಹಿತ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದೆ.

ಈ ಹಿನ್ನಲೆಯುಲ್ಲಿ ಸರ್ಕಾರಿಯ ಎಲ್ಲ ವಿಭಾಗಗಳ ಬಸ್ ಗಳು ನಾಳೆ ರಸ್ತೆಗೆ ಇಳಿಯುವುದಿಲ್ಲ.ಅಲ್ಲದೆ ಓಲಾ ಮತ್ತು ಉಬರ್ ಕ್ಯಾಬ್ ಗಳು,ಐಟಿ ಬಿಟಿ ಸಂಸ್ಥೆಯ ವಾಹನಗಳು ಅಟೋ ರಿಕ್ಷಾ ಖಾಸಗಿ ಶಾಲೆ ವಾಹನಗಳು ಕೂಡ ಲಭ್ಯವಿರುವುದಿಲ್ಲ ಎನ್ನಲಾಗಿದೆ.ಬಂದ್ ದಿನ ನಗರ ಮೆಟ್ರೋ ಸಾರಿಗೆ,ಔಷಧ ಅಂಗಡಿ, ತರಕಾರಿ ಅಂಗಡಿಗಳು, ತುರ್ತು ಸೇವೆಗಳನ್ನು  ಬಿಟ್ಟರೆ ಉಳಿದ್ದೆಲ್ಲವು ಸಹಿತ ಬಂದ್ ದಿನ ಮುಚ್ಚಿರುತ್ತವೆ ಎನ್ನಲಾಗಿದೆ.

ರಾಜ್ಯದ ಖಾಸಗಿ ಶಾಲಾ ಸಂಸ್ಥೆ ಸಂಘವು ಈ ಭಾರತ ಬಂದ್ ಗೆ ಬೆಂಬಲ ನೀಡಿದೆ ಈ ಹಿನ್ನಲೆಯಲ್ಲಿ ಅಂದು ಎಲ್ಲಾ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿರುತ್ತದೆ.ಇನ್ನು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸುವ ವಿಚಾರವಾಗಿ ಹಲವು ಜಿಲ್ಲೆಗಳಲ್ಲಿ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ. 

ಇದುವರೆಗೆ ಚಾಮರಾಜ ನಗರ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ,ಕಲಬುರ್ಗಿ, ಬಾಗಲಕೋಟೆ,ಮೈಸೂರು,  ಉಡುಪಿ ಜಿಲ್ಲೆಗಳಲ್ಲಿ  ಈಗಾಗಲೇ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಇನ್ನು ಬೆಂಗಳೂರಿನಲ್ಲಿ ಮಾಲ್ ಗಳು ಪರಿಸ್ಥಿತಿಗನುಗುಣವಾಗಿ ಬಂದ್ ಮಾಡಲಾಗುವುದು ಎಂದು ತಿಳಿಸಿವೆ 

Trending News