ನವದೆಹಲಿ: ಈಗ ನಿಮ್ಮ ಎಸ್ಬಿಐ ಖಾತೆಯನ್ನು ನೀವು ಬಯಸಿದ ಶಾಖೆಗೆ ವರ್ಗಾಯಿಸುವುದು ಸುಲಭ. ಇದಕ್ಕಾಗಿ ನೀವು ಬ್ಯಾಂಕಿಗೆ ಅಲೆಯುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನೀವು ಇದನ್ನು ಮಾಡಬಹುದು. ಹೊಸ ಸೌಲಭ್ಯದ ಅಡಿಯಲ್ಲಿ, ನಿಮ್ಮ ಖಾತೆಯನ್ನು ಒಂದು ವಾರದಲ್ಲಿ ಮತ್ತೊಂದು ಶಾಖೆಗೆ ವರ್ಗಾಯಿಸಲಾಗುತ್ತದೆ. ನೀವು ಯಾವುದೇ ಫಾರ್ಮ್ ಭರ್ತಿ ಮಾಡುವ ಅಗತ್ಯವಿಲ್ಲ. ಬ್ಯಾಂಕಿನ ಶಾಖೆಯನ್ನು ಬದಲಾಯಿಸುವ ಸಂಪೂರ್ಣ ಆನ್ಲೈನ್ ಪ್ರಕ್ರಿಯೆ ಏನು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಆನ್ಲೈನ್ ಖಾತೆಗಳನ್ನು ವರ್ಗಾವಣೆ ಮಾಡುವ ಮೊದಲು ಕೆಲವು ವಿಷಯಗಳ ಬಗ್ಗೆ ಮಾಹಿತಿ ತಿಳಿಯುವುದು ಮುಖ್ಯವಾಗಿದೆ. ಈ ಸೇವೆಯನ್ನು KYC (ನೋ ಯುವರ್ ಕಸ್ಟಮರ್) ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಹೆಚ್ಚುವರಿಯಾಗಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದಾಗ ಮಾತ್ರ ಆನ್ಲೈನ್ ಪ್ರೊಸೆಸಿಂಗ್ ಪೂರ್ಣಗೊಳ್ಳುತ್ತದೆ. ಹೇಗಾದರೂ, ಎಸ್ಬಿಐ ಡಿಸೆಂಬರ್ 1 ರಿಂದ ಮೊಬೈಲ್ ಸಂಖ್ಯೆ ನೊಂದಾಯಿಸದಿರುವ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ನಿರ್ಬಂಧಿಸಿದೆ.
ಬ್ಯಾಂಕ್ ಶಾಖೆಯನ್ನು ಬದಲಿಸುವ ವಿಧಾನ ಹೀಗಿದೆ:
1. ಮೊದಲಿಗೆ ನೆಟ್ ಬ್ಯಾಂಕಿಂಗ್ ಲಾಗಿನ್ ಆಗಬೇಕು. ನಿಮ್ಮ ಖಾತೆಯ ಮುಖಪುಟದಲ್ಲಿ 'ಇ-ಸೇವೆಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. 'ಇ-ಸರ್ವಿಸಸ್' ವಿಭಾಗದ ಎಡಭಾಗದಲ್ಲಿ "ಟ್ರಾನ್ಸ್ಫರ್ ಆಫ್ ಸೇವಿಂಗ್ ಅಕೌಂಟ್"(Transfer of Savings Account) ಆಯ್ಕೆಯನ್ನು ನೀವು ನೋಡುತ್ತೀರಿ. ಈ ಆಯ್ಕೆಯನ್ನು ಕ್ಲಿಕ್ ಮಾಡಿದಾಗ, ನೀವು ಎಸ್ಬಿಐನಲ್ಲಿ ಪರದೆಯ ಮೇಲೆ ಲಭ್ಯವಿರುವ ಖಾತೆಗಳನ್ನು ನೋಡುತ್ತೀರಿ. ನೀವು ನಿಮ್ಮ ಖಾತೆಯನ್ನು ವರ್ಗಾಯಿಸಲು ಬಯಸುವ ಇನ್ನೊಂದು ಖಾತೆಯನ್ನು ಆಯ್ಕೆಮಾಡಿ. ನಂತರ ನೀವು ಆಯ್ಕೆ ಮಾಡಿದ ಎಸ್ಬಿಐ ಶಾಖೆಯ ಶಾಖೆ ಕೋಡ್ ಅನ್ನು ಹಾಕುವಂತೆ ಕೇಳಲಾಗುತ್ತದೆ.
2. ನಂತರ 'Get Branch Names' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಅದರ ನಂತರ ಶಾಖೆಯ ಕೋಡ್ ಕೆಳಗಿನ ಪೆಟ್ಟಿಗೆಯಲ್ಲಿ ಶಾಖೆಯ ಹೆಸರು ತೋರಿಸಲ್ಪಡುತ್ತದೆ. ಅಲ್ಲಿಂದ ಶಾಖೆಯನ್ನು ಆಯ್ಕೆ ಮಾಡಿ. ಶಾಖಾ ಕೋಡ್ ನಿಮಗೆ ತಿಳಿದಿದ್ದರ್ರೆ ಅದನ್ನು ಭರ್ತಿ ಮಾಡಿ. 'ನಿಯಮಗಳು ಮತ್ತು ಷರತ್ತುಗಳನ್ನು' ಓದಿದ ನಂತರ, ಅಕ್ಸೆಪ್ಟ್ ಕ್ಲಿಕ್ ಮಾಡಿ ಮತ್ತು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
3. ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ನಂತರ, ನಿಮ್ಮ ಖಾತೆಯನ್ನು ವರ್ಗಾಯಿಸಲು ಬಯಸುವ ಹೊಸ ಶಾಖೆ ಹೆಸರು ಮತ್ತು ಕೋಡ್ ಅನ್ನು ಪರದೆಯ ಮೇಲೆ ಕಾಣಿಸುತ್ತದೆ. ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ, ಎಲ್ಲವೂ ಸರಿಯಿದ್ದರೆ ನಂತರ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿ.
4. ಇದರ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗುತ್ತದೆ. OTP ಯನ್ನು ನಮೂದಿಸಿ, ನೀವು "ಕನ್ಫರ್ಮ್" ಬಟನ್ ಕ್ಲಿಕ್ ಮಾಡಿದಾಗ, ಹೊಸ ಪುಟ ತೆರೆಯುತ್ತದೆ.
5. ಇದರಲ್ಲಿ ವರ್ಗಾವಣೆ ದೃಢೀಕರಣ ಸಂದೇಶವು ನಿಮ್ಮ ಅಸ್ತಿತ್ವದಲ್ಲಿರುವ ಶಾಖೆಯ ವಿವರಗಳನ್ನು ಮತ್ತು ನಿಮ್ಮ ಖಾತೆಯನ್ನು ನೀವು ವರ್ಗಾಯಿಸಿದ ಶಾಖೆಯ ವಿವರಗಳನ್ನು ತೋರಿಸುತ್ತದೆ.
ವೀಡಿಯೊ ವೀಕ್ಷಿಸಿ:
ಗಮನಿಸಿ: ನಿಮ್ಮ ಎಲ್ಲಾ ಖಾತೆಗಳನ್ನು ವರ್ಗಾಯಿಸಲು ನೀವು ಬಯಸಿದರೆ ನಂತರ CIF ಕಡ್ಡಾಯವಾಗಿ ನೀಡಬೇಕು. CIF ಖಾತೆದಾರರ ಖಾತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಗ್ರಾಹಕರ ಮಾಹಿತಿ ಫೈಲ್ ಆಗಿದೆ.