ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ

ಹೆಚ್ಚಿನ ಸಂಖ್ಯೆಯ ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಆ್ಯಪ್ ಆಧಾರಿತ ಕ್ಯಾಬ್ ಆಪರೇಟರ್‌ಗಳಾದ ಉಬರ್ ಮತ್ತು ಓಲಾ ಮತ್ತು ವಾಣಿಜ್ಯ ಬಸ್ಸುಗಳು ರಸ್ತೆಗಿಳಿಯದ ಕಾರಣ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ  ಪಕ್ಕದ ಪ್ರದೇಶದ ಹಲವಾರು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

Last Updated : Sep 19, 2019, 07:51 AM IST
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ  title=

ನವದೆಹಲಿ: ಹೊಸದಾಗಿ ತಿದ್ದುಪಡಿ ಮಾಡಲಾದ ಮೋಟಾರು ವಾಹನಗಳ ಕಾಯ್ದೆ ವಿರುದ್ಧ ಗುರುವಾರ ಒಂದು ದಿನದ ಮುಷ್ಕರಕ್ಕೆ ಸಾರಿಗೆ ಸಂಘಗಳು ಕರೆ ನೀಡಿರುವುದರಿಂದ ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಾದ ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಸಾವಿರಾರು ಪ್ರಯಾಣಿಕರು ಗುರುವಾರ ಪ್ರಯಾಣ ಸಂಕಷ್ಟಗಳನ್ನು ಎದುರಿಸಲಿದ್ದಾರೆ. 

ಹೆಚ್ಚಿನ ಸಂಖ್ಯೆಯ ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಆ್ಯಪ್ ಆಧಾರಿತ ಕ್ಯಾಬ್ ಆಪರೇಟರ್‌ಗಳಾದ ಉಬರ್ ಮತ್ತು ಓಲಾ ಮತ್ತು ವಾಣಿಜ್ಯ ಬಸ್‌ಗಳು ರಸ್ತೆಗಿಳಿಯದ ಕಾರಣ ದೆಹಲಿ-ಎನ್‌ಸಿಆರ್‌ ಸೇರಿದಂತೆ ರಾಷ್ಟ್ರೀಯ ರಾಜಧಾನಿಯ ಅಕ್ಕ-ಪಕ್ಕದ ಪ್ರದೇಶದ ಹಲವಾರು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. 

ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ಸ್ (UFTA) ದಿನವಿಡೀ ಮುಷ್ಕರಕ್ಕೆ ಕರೆ ನೀಡಿದೆ. ಇದು 41 ಸಂಘಗಳು ಮತ್ತು ಸರಕುಗಳು ಮತ್ತು ಪ್ರಯಾಣಿಕರ ವಿಭಾಗಗಳನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಟ್ರಕ್‌ಗಳು, ಬಸ್ಸುಗಳು, ಆಟೊಗಳು, ಟೆಂಪೊಗಳು, ಮ್ಯಾಕ್ಸಿ-ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು ತಮ್ಮ ಪ್ರತಿಭಟನೆಯನ್ನು ನೋಂದಾಯಿಸುವ ಸಲುವಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಎರಡೂ ಸಾರಿಗೆದಾರರನ್ನು ಮುಷ್ಕರಕ್ಕೆ ಒತ್ತಾಯಿಸಿದೆ ಎಂದು ಯುಎಫ್‌ಟಿಎ ಹೇಳಿಕೊಂಡಿದೆ.

"ನಾವು ಕಳೆದ 15 ದಿನಗಳಿಂದ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಹೊಸ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ನಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಮನವಿ ಮಾಡಿದ್ದೇವೆ. ಆದರೆ ಯಾವುದೇ ಪರಿಹಾರ ದೊರೆತಿಲ್ಲ" ಎಂದು ಯುಎಫ್‌ಟಿಎ ಜನರಲ್ ಕಾರ್ಯದರ್ಶಿ ಶ್ಯಾಮ್ಲಾಲ್ ಗೋಲಾ ಹೇಳಿದರು.

ಯುಎಫ್‌ಟಿಎ ಪ್ರಕಾರ, ಆರ್ಥಿಕ ಕುಸಿತದಿಂದಾಗಿ ಆಟೋಮೊಬೈಲ್ ವಲಯವು ಈಗಾಗಲೇ ಬಹಳ ಕಠಿಣ ಸಮಯವನ್ನು ಎದುರಿಸುತ್ತಿದೆ. ಇದರ ಜೊತೆಗೆ ಇತ್ತೀಚಿನ ನೂತನ ಮೋಟಾರು ವಾಹನ ಕಾಯ್ದೆ ಬದಲಾವಣೆಗಳು ಅವರ ದುಃಖವನ್ನು ಹೆಚ್ಚಿಸಲಿವೆ. ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯಿಂದ ಹೆಚ್ಚಿದ ದಂಡದ ನಿಬಂಧನೆಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಯುಎಫ್‌ಟಿಎ ಒತ್ತಾಯಿಸಿದೆ. ಆದರೆ, ದೆಹಲಿ ಟ್ಯಾಕ್ಸಿ ಪ್ರವಾಸಿ ಸಾರಿಗೆ ಸಂಸ್ಥೆ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. ಮುಷ್ಕರ ಹೊರತಾಗಿಯೂ  ಕೆಲವು ಶಾಲೆಗಳು ತೆರೆದಿವೆ.

ಸೆಪ್ಟೆಂಬರ್ 1 ರಂದು ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಕುಡಿದು ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಓವರ್‌ಲೋಡ್ ಮುಂತಾದ ಅಪರಾಧಗಳಿಗೆ 10 ಪಟ್ಟು ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಕಾಯ್ದೆಯನ್ನು ಕೆಲವು ರಾಜ್ಯಗಳು ಯಾವುದೇ ಬದಲಾವಣೆಗಳಿಲ್ಲದೆ ಅಂಗೀಕರಿಸಿದೆ. ಗುಜರಾತ್, ಕರ್ನಾಟಕ ಮತ್ತು ಉತ್ತರಾಖಂಡದಂತಹ ಕೆಲವು ರಾಜ್ಯಗಳು ದಂಡವನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ, ಪುದುಚೇರಿ, ರಾಜಸ್ಥಾನ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ತಿದ್ದುಪಡಿ ಮಾಡಿದ ನೂತನ ಮೋಟಾರು ವಾಹನ ಕಾಯ್ದೆಯನ್ನು ಇನ್ನೂ ಜಾರಿಗೆ ತಂದಿಲ್ಲ. ದಂಡಗಳು ತುಂಬಾ ವಿಪರೀತವಾಗಿದ್ದು, ಇದು ಸಾರ್ವಜನಿಕರಿಗೆ ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಕೆಲವು ರಾಜ್ಯಗ;ಉ ತಿಳಿಸಿವೆ.

Trending News