Winter Tour: ಬೆಚ್ಚಗಿನ ಚಳಿಗಾಲದಲ್ಲಿ ಕಡಿಮೆ ಖರ್ಚಿನಲ್ಲಿ ಈ ಸುಂದರ ಸ್ಥಳಗಳಿಗೆ ಪ್ರಯಾಣಿಸಿ

ಉತ್ತರಾಖಂಡದಲ್ಲಿರುವ ರಾಣಿಖೇತ್ ರಮ್ಯ ಗಿರಿಧಾಮಗಳಲ್ಲಿ ಒಂದಾಗಿದೆ. ಇಲ್ಲಿ ನೀವು ರಸ್ತೆಗಳಲ್ಲಿಯೂ ಸಹ ಸುಂದರ ನೋಟಗಳನ್ನು ಕಣ್ತುಂಬಿಕೊಳ್ಳಬಹುದು.

Written by - Puttaraj K Alur | Last Updated : Nov 10, 2021, 06:50 PM IST
  • ಅತ್ಯಂತ ಕಡಿಮೆ ಬಜೆಟ್ ನಲ್ಲಿ ನೀವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು
  • ಚಳಿಗಾಲದಲ್ಲಿ ನೀವು ದೇಶದ ಕೆಲವು ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು
  • ರಾಣಿಖೇತ್ ಗಿರಿಧಾಮ, ಮಸ್ಸೂರಿ, ಕಸೌಲಿಯ ಪ್ರಕೃತಿ ಸೌಂದರ್ಯ ಸವಿಯಲು ಟೂರ್ ಪ್ಲಾನ್ ಮಾಡಿ
Winter Tour: ಬೆಚ್ಚಗಿನ ಚಳಿಗಾಲದಲ್ಲಿ ಕಡಿಮೆ ಖರ್ಚಿನಲ್ಲಿ ಈ ಸುಂದರ ಸ್ಥಳಗಳಿಗೆ ಪ್ರಯಾಣಿಸಿ  title=
ಪ್ರಕೃತಿ ಸೌಂದರ್ಯ ಸವಿಯಲು ಟೂರ್ ಪ್ಲಾನ್ ಮಾಡಿ

ನವದೆಹಲಿ: ಚುಮು ಚುಮು ಚಳಿಗಾಲ ಶುರುವಾಗಿದೆ. ಚಳಿಗಾಲದಲ್ಲಿ ಗಿರಿಧಾಮ(Hill Station)ಕ್ಕೆ ಹೋಗುವುದೇ ಒಂದು ರೀತಿಯ ಬೇರೆ ಮಜಾ ನೀಡುತ್ತದೆ. ಈ ಚಳಿಗಾಲದಲ್ಲಿ ದೇಶದ ಯಾವ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಕೇವಲ 5 ಸಾವಿರ ರೂ.ನಲ್ಲಿ ನೀವು ವಿಂಟರ್ ಟ್ರಿಪ್ ಪ್ಲಾನಿಂಗ್ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಆ ಸ್ಥಳಗಳು ಯಾವುವು ಎಂದು ತಿಳಿಯಿರಿ.

ರಮ್ಯ ರಾಣಿಖೇತ್ ಗಿರಿಧಾಮ

ಉತ್ತರಾಖಂಡದಲ್ಲಿರುವ ರಾಣಿಖೇತ್ ರಮ್ಯ ಗಿರಿಧಾಮ(Ranikhet Hill Station)ಗಳಲ್ಲಿ ಒಂದಾಗಿದೆ. ಇಲ್ಲಿ ನೀವು ರಸ್ತೆಗಳಲ್ಲಿಯೂ ಸಹ ಸುಂದರ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ರಾಣಿಖೇತ್ ನ ಸುಂದರ ದೃಶ್ಯಾವಳಿಗಳಿಂದಾಗಿ ಇದನ್ನು ‘ಕ್ವೀನ್ ಆಫ್ ಹಿಲ್ಸ್’ ಎಂದೂ ಕರೆಯುತ್ತಾರೆ. ಇಲ್ಲಿ ನೀವು ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ ಮಾಡಬಹುದು. 3 ರಿಂದ 4 ದಿನಗಳ ಪ್ರವಾಸದಲ್ಲಿ ನೀವು ರಾಣಿಖೇತ್‌ನಲ್ಲಿ ಮಜ್ಖಾಲಿ, ಚೌಬಾಟಿಯಾ ಗಾರ್ಡನ್ ಮತ್ತು ಜುಲ್ ದೇವಿ ದೇವಸ್ಥಾನದಂತಹ ಅನೇಕ ಸ್ಥಳಗಳನ್ನು ನೋಡಬಹುದು. ಇಲ್ಲಿನ ಗಾಲ್ಫ್ ಕೋರ್ಸ್‌ನಲ್ಲಿ ‘ರಾಜಾ ಹಿಂದೂಸ್ತಾನಿ’ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನೀವು ಇಲ್ಲಿ ಸುಂದರ ಸ್ಥಳಗಳನ್ನು ನೋಡಬಹುದು.

ಇದನ್ನೂ ಓದಿ: Flipkart Offer ! ಕೇವಲ 740 ರೂ.ಗೆ ಖರೀದಿಸಿ Oppo 5G Smartphone 

ಮಸ್ಸೂರಿ

ನೀವು ಜಲಪಾತಗಳನ್ನು ವೀಕ್ಷಿಸಲು ಅಥವಾ ಟ್ರೆಕ್ಕಿಂಗ್ ಮಾಡಲು ಇಷ್ಟಪಡುತ್ತೀರಾ? ಹಾಗಾದರೆ ನೀವು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿ(Mussoorie - Queen of the Hills)ಗೆ ಭೇಟಿ ನೀಡಲೇಬೇಕು. ಮಸ್ಸೂರಿ ದೇಶದಲ್ಲಿಯೇ ಅತಿಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಕೆಂಪ್ಟಿ ಫಾಲ್, ಧನೌಲ್ಟಿ, ಗನ್ ಹಿಲ್ ಪಾಯಿಂಟ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಆನಂದಿಸಬಹುದು. ಶಾಪಿಂಗ್ ಮಾಡಲು ಮಾಲ್ ರಸ್ತೆಯೂ ಇದೆ, ಇಲ್ಲಿ ನೀವು ವಿವಿಧ ರೀತಿಯ ಸ್ಥಳೀಯ ವಸ್ತುಗಳನ್ನು ಸಹ ಕಾಣಬಹುದು. ಇಲ್ಲಿನ ಹೋಟೆಲ್‌ಗಳು ತುಂಬಾ ಅಗ್ಗವಾಗಿವೆ.

ಕಸೌಲಿ

ವಾರಾಂತ್ಯವನ್ನು ಆನಂದಿಸಲು ನೀವು ಹಿಮಾಚಲ ಪ್ರದೇಶ(Himachal Pradesh)ದ ಕಸೌಲಿಗೆ ಭೇಟಿ ನೀಡಬಹುದು. ಕಸೌಲಿಗೆ ನೀವು ರೈಲಿನಲ್ಲಿ ಹೋಗಬಹುದು. ಅಷ್ಟೇ ಅಲ್ಲ ಇಲ್ಲಿ ಕೇವಲ 1 ಸಾವಿರ ರೂ.ಗೆ ಹೋಟೆಲ್‌ಗಳು ಸಿಗುತ್ತವೆ. ಕಸೌಲಿಯ ಕಣಿವೆಗಳಲ್ಲಿ ತಂಪಾದ ವಾತಾವರಣವನ್ನು ಆನಂದಿಸಬಹುದು.

ಇದನ್ನೂ ಓದಿ:  Pre-wedding shoot: ಪ್ರೀ ವೆಡ್ಡಿಂಗ್ ಶೂಟ್ ವೇಳೆ ಜಲಪಾತದಲ್ಲಿ ಸಿಲುಕಿ ಒದ್ದಾಡಿದ ದಂಪತಿ..!

ರಿಷಿಕೇಶ್

ರಾಫ್ಟಿಂಗ್‌ಗೆ ಹೆಸರುವಾಸಿಯಾಗಿರುವ ಉತ್ತರಾಖಂಡ ರಾಜ್ಯದ ರಿಷಿಕೇಶ್(Rishikesh)ದಲ್ಲಿ ನೀವು ಅನೇಕ ಪ್ರವಾಸಿ ಸ್ಥಗಳಿಗೆ ಭೇಟಿ ನೀಡಬಹುದು. ಇಲ್ಲಿ ನೀವು ಗಂಗಾ ನದಿಯಲ್ಲಿ ಸ್ನಾನ ಮಾಡುವುದಷ್ಟೇ ಅಲ್ಲ ಇಲ್ಲಿನ ಘಾಟ್‌ಗಳು, ಘಾಟ್‌ಗಳ ಪೂಜೆಯಂತಹ ಧಾರ್ಮಿಕ ವಿಷಯಗಳು ನಿಮ್ಮನ್ನು ಆಕರ್ಷಿಸುತ್ತವೆ. ಇಲ್ಲಿ ನೀವು ಸುಲಭವಾಗಿ 200 ರೂ.ಗೆ ಆಶ್ರಮದಲ್ಲಿ ಉಳಿಯಲು ಕೊಠಡಿಯನ್ನು ಪಡೆಯಬಹುದು. ಇಲ್ಲಿಗೆ ನೀವು ನಿಮ್ಮ ಕಾರಿನಲ್ಲಿ ಆರಾಮವಾಗಿ ಹೋಗಬಹುದು.

ಲ್ಯಾನ್ಸ್‌ ಡೌನ್(Lansdowne)

ಉತ್ತರಾಖಂಡ ರಾಜ್ಯದಲ್ಲಿರುವ ಲ್ಯಾನ್ಸ್‌ ಡೌನ್(Lansdowne) ತುಂಬಾ ಶಾಂತಿಯುತ ಮತ್ತು ಸುಂದರವಾದ ಸ್ಥಳವಾಗಿದೆ. ನೀವು ವಿಶ್ರಾಂತಿ ಪಡೆಯಲು ಬಯಸಿದರೆ ಲ್ಯಾನ್ಸ್‌ ಡೌನ್‌ಗಿಂತ ಉತ್ತಮವಾದ ಸ್ಥಳವನ್ನು ಕಾಣಲು ಸಾಧ್ಯವಿಲ್ಲ. ಇಲ್ಲಿಗೆ ತಲುಪಲು ಬಸ್ಸು ಮತ್ತು ರೈಲು ಎರಡೂ ಸಂಚರಿಸುತ್ತವೆ. ಅಲ್ಲದೆ ಇಲ್ಲಿ ಹೋಟೆಲ್‌ಗಳು ಅಗ್ಗವಾಗಿವೆ. ಲ್ಯಾನ್ಸ್‌ ಡೌನ್‌ನಲ್ಲಿರುವ ಟಾಪ್ ವ್ಯೂ ಪಾಯಿಂಟ್‌ಗೆ ಹೋಗುವ ಮೂಲಕ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News