ತಿರುವನಂತಪುರಂ: ಕೇರಳ ಮತ್ತು ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಪ್ರತಿಭಟನಾಕಾರರು ತಡೆಯನ್ನೋಡ್ಡಿದ್ದಾರೆ.
ಇತ್ತೀಚಿಗೆ ಸುಪ್ರಿಂಕೋರ್ಟ್ ಶಬರಿಮಲೈ ದೇವಸ್ಥಾನಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಈ ಇಬ್ಬರು ಮಹಿಳೆಯರು ದೇವಸ್ತಾನಕ್ಕೆ ತೆರಳುತ್ತಿದ್ದರು ಆದರೆ ಸ್ಥಳೀಯ ಪ್ರತಿಭಟನಾಕಾರರು ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಅವರಿಗೆ ಕೇವಲ ಸ್ವಲ್ಪ ದೂರದವರೆಗೆ ಮಾತ್ರ ತೆರಲು ಸಾಧ್ಯವಾಯಿತು.
ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಕೇರಳದ ಲಿಬಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆಕೆಯು ಶಬರಿಮಲೈ ದೇವಸ್ತಾನಕ್ಕೆ ತೆರಳುವ ಕುರಿತಾಗಿ ಬರೆದುಕೊಂಡಿದ್ದಳು. ಇದನ್ನು ತಿಳಿದ ಪ್ರತಿಭಟನಾಕಾರರು ಆಕೆಯನ್ನು ಮಾರ್ಗ ಮಧ್ಯದಲ್ಲಿಯೇ ತಡೆಯೊಡ್ಡಿದರು.ದೇವಸ್ತಾನದ ನಿಯಮಾವಳಿಯ ಪ್ರಕಾರ 10 ರಿಂದ 50 ವರ್ಷದ ಮಹಿಳೆಯರಿಗೆ ಅವಕಾಶವಿಲ್ಲ.ಆದರೆ ಇದಕ್ಕೆ ಸುಪ್ರಿಂ ಆಕ್ಷೇಪ ವ್ಯಕ್ತಪಡಿಸಿ ಮಹಿಳೆಯರಿಗೆ ಅವಕಾಶ ನೀಡಿತ್ತು.
ಇನ್ನೊಂದೆಡೆ ಮಾಧವಿ ಎನ್ನುವ ಆಂಧ್ರಪ್ರದೇಶದ ಮಹಿಳೆಗೂ ಸಹಿತ ಭಕ್ತರು ತಡೆಯನ್ನೋಡ್ಡಿದರು.ಸುಪ್ರಿಂಕೋರ್ಟ್ ನ ತೀರ್ಪಿಗೆ ತಲೆ ಭಾಗಿದ ಕೇರಳ ಸರ್ಕಾರ ತಾನು ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದಿಲ್ಲ ಮತ್ತು ದೇವಸ್ತಾನಕ್ಕೆ ತೆರಳುವ ಮಹಿಳಾ ಭಕ್ತರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿತ್ತು.