ಕೇಂದ್ರದ ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!: ಕಾಂಗ್ರೆಸ್ ಟೀಕೆ

ತೆರಿಗೆ ಸಂಗ್ರಹದ ಹೊರೆಯಿಂದ ದೇಶದ ಜನರು ಹೈರಾಣಾಗಿದ್ದಾರೆ, ಆದರೆ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ಹೀಗೆ ತೆರಿಗೆ ಸಂಗ್ರಹಿಸುವುದೇ ದೊಡ್ಡ ಸಾಧನೆ! ಅಂತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Written by - Zee Kannada News Desk | Last Updated : Feb 1, 2022, 04:41 PM IST
  • ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!
  • ಜನರ ಸುಲಿಗೆ ಮಾಡಿ GST ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತ
  • ಬಜೆಟ್ ನಲ್ಲಿ ಜನರ ಬವಣೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ ಎಂದು ಕಾಂಗ್ರಸ್ ವಾಗ್ದಾಳಿ
ಕೇಂದ್ರದ ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!: ಕಾಂಗ್ರೆಸ್ ಟೀಕೆ title=
ಕೇಂದ್ರದ ಬಜೆಟ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಕೇಂದ್ರದ ಬಜೆಟ್(Union Budget 2022)ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ! ಅಂತಾ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಅವರು ಇಂದು(ಫೆ.1) ಮಂಡಿಸಿರುವ ಕೇಂದ್ರ ಬಜೆಟ್ ಅನ್ನು ಟೀಕಿಸಿದೆ.

‘ಕೇಂದ್ರದ ಬಜೆಟ್ ಮಂಡನೆ(Budget 2022) ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ! ಕೇವಲ ಒಂದೂವರೆ ಗಂಟೆಯಲ್ಲೇ ಮುಗಿದುಹೋದ ಬಜೆಟ್ ಭಾಷಣವೇ ಇದಕ್ಕೆ ಸಾಕ್ಷಿ. ಜನರ ಸುಲಿಗೆ ಮಾಡಿ ಜಿಎಸ್ಟಿ ತೆರಿಗೆ ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತವಾಗಿದೆ’ ಅಂತಾ ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ: ಡಿಕೆಶಿಗೆ ಬಿಜೆಪಿ ಎಚ್ಚರಿಕೆ

‘ಈಗಾಗಲೇ ಎರಡು ವರ್ಷಗಳಿಂದ ಕೋವಿಡ್, ಲಾಕ್‌ಡೌನ್‌ಗಳಿಂದಾಗಿ ಜನರ ಆರ್ಥಿಕ ಸ್ಥಿತಿ ಹಾಗೂ ಬದುಕು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಬಡ ಹಾಗೂ ಮಧ್ಯಮವರ್ಗದ ಜನತೆ ಸಣ್ಣ ನಿಟ್ಟುಸಿರು ಬಿಡುವಂತಹ ಯಾವೊಂದು ಕಾರ್ಯಕ್ರಮವಿಲ್ಲದೆ ಬಜೆಟ್(Union Budget)ನಲ್ಲಿ ಜನರ ಬವಣೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ’ ಅಂತಾ ವಾಗ್ದಾಳಿ ನಡೆಸಿದೆ.

‘ಲಾಕ್‌ಡೌನ್‌ನಿಂದ ಆಗಿರುವ ಆರ್ಥಿಕ ಹಿನ್ನೆಡೆಯನ್ನು ಸರಿದೂಗಿಸಲು ಯಾವುದೇ ಯೋಜನೆಗಳು ಈ ಬಜೆಟ್‌ನಲ್ಲಿಲ್ಲ. ಆರ್ಥಿಕ ಚಟುವಟಿಕೆಗಳ ವೃದ್ಧಿಗೆ, ಬಡ, ಮದ್ಯಮವರ್ಗದ ಜನರ ತೆರಿಗೆಯ ಹೊರೆ ಇಳಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ(Central government) ಹುಸಿ ಮಾಡಿದೆ, ಯುವ ಜನತೆ ಭವಿಷ್ಯದ ಕನಸು ಕಾಣುವ ಯಾವುದೇ ಸಕಾರಾತ್ಮಕ ಅಂಶಗಳು ಈ ಬಜೆಟ್‌ನಲಿಲ್ಲ’ ಅಂತಾ ಟೀಕಿಸಿದೆ.

‘ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚುತ್ತಿದೆ. ನೆರೆ, ಬರಗಳಂತಹ ಪ್ರಕೃತಿ ವಿಕೋಪಗಳಿಂದ ನಷ್ಟ ಅನುಭವಿಸಿದ ರೈತರಿಗೆ ಸ್ಥೈರ್ಯ ತುಂಬುವಂತಹ ಯೋಜನೆಗಳು ಅಗತ್ಯವಿದ್ದವು. ರೈತರ ಬಗೆಗೆ ಕಿಂಚಿತ್ತೂ ಯೋಚಿಸದೆ, ಬಜೆಟ್‌ನಲ್ಲಿ ನಿರ್ಲಕ್ಷಿಸುವ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕಾರ ತೀರಿಸಿಕೊಂಡಿದೆಯೇ ಮೋದಿ ಸರ್ಕಾರ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: Budget 2022: ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..?

ತೆರಿಗೆ ಸಂಗ್ರಹಿಸುವುದೇ ಮೋದಿ ಸರ್ಕಾರದ ಸಾಧನೆ!

‘ತೆರಿಗೆ ಸಂಗ್ರಹದ ಹೊರೆಯಿಂದ ದೇಶದ ಜನರು ಹೈರಾಣಾಗಿದ್ದಾರೆ, ಆದರೆ ಪ್ರಧಾನಿ ಮೋದಿ(Narendra Modi)ಯವರ ಸರ್ಕಾರಕ್ಕೆ ಹೀಗೆ ತೆರಿಗೆ ಸಂಗ್ರಹಿಸುವುದೇ ದೊಡ್ಡ ಸಾಧನೆ! ಅವರು ತಮ್ಮ ಖಜಾನೆ ತುಂಬಿಸುವುದನ್ನಷ್ಟೇ ನೋಡುತ್ತಾರೆ, ಜನರ ನೋವನ್ನಲ್ಲ!!’ ಅಂತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿರುವ ಹೇಳಿಕೆಯನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News