ವಿಜ್ಞಾನಿಗಳು ಆಕಳು ಸಗಣಿ ಮೇಲೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲಿ- ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಗೋವಿನ ಸಗಣಿ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ವಿಜ್ಞಾನಿಗಳನ್ನು ಒತ್ತಾಯಿಸಿದರು, ಇದು ರೈತರು ಹಾಲು ಉತ್ಪಾದನೆಯನ್ನು ನಿಲ್ಲಿಸಿದ ನಂತರವೂ ತಮ್ಮ ಹಸುಗಳನ್ನು ಸಾಕಲು ಆರ್ಥಿಕವಾಗಿ ಲಾಭದಾಯಕವಾಗಬಹುದು ಎಂದು ಸಲಹೆ ನೀಡಿದರು.

Last Updated : Jan 14, 2020, 09:28 PM IST
ವಿಜ್ಞಾನಿಗಳು ಆಕಳು ಸಗಣಿ ಮೇಲೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲಿ- ಕೇಂದ್ರ ಸಚಿವ ಗಿರಿರಾಜ್ ಸಿಂಗ್     title=

ನವದೆಹಲಿ: ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಗೋವಿನ ಸಗಣಿ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ವಿಜ್ಞಾನಿಗಳನ್ನು ಒತ್ತಾಯಿಸಿದರು, ಇದು ರೈತರು ಹಾಲು ಉತ್ಪಾದನೆಯನ್ನು ನಿಲ್ಲಿಸಿದ ನಂತರವೂ ತಮ್ಮ ಹಸುಗಳನ್ನು ಸಾಕಲು ಆರ್ಥಿಕವಾಗಿ ಲಾಭದಾಯಕವಾಗಬಹುದು ಎಂದು ಸಲಹೆ ನೀಡಿದರು.

"ಉತ್ತರ ಪ್ರದೇಶದಲ್ಲಿ ಬೀದಿ ದನಗಳು ಒಂದು ಪ್ರಮುಖ ಸಮಸ್ಯೆಯಾಗಿದೆ" ಎಂದು ಸಿಂಗ್ ಸೋಮವಾರ ಇಲ್ಲಿ 12 ರಾಜ್ಯಗಳ ಉಪಕುಲಪತಿಗಳು ಮತ್ತು ಪಶುವೈದ್ಯಕೀಯ ಅಧಿಕಾರಿಗಳ ಕಾರ್ಯಾಗಾರದಲ್ಲಿ ಹೇಳಿದರು.ರೈತರು ಹಸುವಿನ ಸಗಣಿ ಮತ್ತು ಮೂತ್ರದಿಂದ ಹಣ ಸಂಪಾದಿಸಬಹುದಾದರೆ ಅವರು ತಮ್ಮ ದನಗಳನ್ನು ತ್ಯಜಿಸುವುದಿಲ್ಲ ಎಂದು ಸಚಿವರು ತಿಳಿಸಿದರು.

"ಹಸುವಿನ ಹಾಲು, ಸಗಣಿ ಮತ್ತು ಮೂತ್ರಕ್ಕೆ ಮೌಲ್ಯವರ್ಧನೆಯ ಅಪಾರ ವ್ಯಾಪ್ತಿ ಇದೆ, ಅದು ಅಂತಿಮವಾಗಿ ದೇಶದ ಆರ್ಥಿಕತೆಗೆ ಸಹಕಾರಿಯಾಗುತ್ತದೆ" ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು ಹೇಳಿದರು. ಕೃಷಿಯ ವೆಚ್ಚ ಕಡಿಮೆಯಾದರೆ ಗ್ರಾಮಗಳು ಮತ್ತು ರೈತರು ಪ್ರಗತಿ ಹೊಂದುತ್ತಾರೆ ಎಂದರು.

ಇನ್ನು ಮುಂದುವರೆದು ಸಚಿವರು ತಾವು ಮಹಾತ್ಮ ಗಾಂಧಿ, ರಾಮ್ ಮನೋಹರ್ ಲೋಹಿಯಾ ಮತ್ತು ದೀಂದಯಾಲ್ ಉಪಾಧ್ಯಾಯ ಅವರ ಆದರ್ಶಗಳನ್ನು ಅನುಸರಿಸುವುದಾಗಿ ಹೇಳಿದರು."ಜನರು ಗೀತಾ, ಕುರಾನ್ ಮತ್ತು ರಾಮಾಯಣದ ಬೋಧನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆಯೇ, ನಾನು ಗಾಂಧಿ, ಲೋಹಿಯಾ ಮತ್ತು ದೀಂದಯಾಲ್ ಉಪಾಧ್ಯಾಯ ಆದರ್ಶಗಳನ್ನು ಅಭ್ಯಾಸ ಮಾಡುತ್ತೇನೆ" ಎಂದು ಸಿಂಗ್ ಹೇಳಿದರು.

Trending News