ನವದೆಹಲಿ: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಶೇಕಡಾ 90 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಂದ ಸತತ 43 ಗಂಟೆಗಳು ಜೀವನ್ಮರಣ ಹೋರಾಟ ನಡೆಸಿದ್ದ ಉನ್ನಾವೋ(UNNAO) ಅತ್ಯಾಚಾರ ಸಂತ್ರಸ್ತೆ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ.
23 ವರ್ಷ ವಯಸ್ಸಿನ ಸಂತ್ರಸ್ತೆ ರಾಯಬರೇಲಿಯಲ್ಲಿ ತನ್ನ ವಕೀಲರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಅತ್ಯಾಚಾರ ಆರೋಪಿ ಸೇರಿದಂತೆ ಐದು ಮಂದಿ ದುರುಳರು ಆಕೆಯನ್ನು ಅಡ್ಡಗಟ್ಟಿ ಆಕೆಯ ಮೇಲೆ ದಾಳಿ ನಡೆಸಿ ಇರಿದು, ಬೆಂಕಿ ಹಚ್ಚಿದ್ದರು. ಸಂತ್ರಸ್ತೆ ಅದೇ ಸ್ಥಿತಿಯಲ್ಲಿ ಸುಮಾರು 1 ಕಿಲೋಮೀಟರ್ ಓಡುತ್ತಾ ನೆರವಿಗಾಗಿ ಅಂಗಲಾಚಿದ್ದರು. ಶೇಕಡ 90ರಷ್ಟು ಸುಟ್ಟುಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಮೊದಲಿಗೆ ಲಖನೌ, ಕಾನ್ಪುರ ನಂತರ ಹೊಸದಿಲ್ಲಿಯ ಸಫ್ದಾರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 43 ಗಂಟೆಗಳು ಜೀವನ್ಮರಣ ಹೋರಾಟ ನಡೆಸಿದ್ದ ಸಂತ್ರಸ್ತೆ ಕೊನೆಗೂ ಸಾವಿಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ತನ್ನ ಸಹೋದರನೊಂದಿಗೆ ಮಾತನಾಡಿದ್ದ ಸಂತ್ರಸ್ತೆ 'ನನ್ನನ್ನು ರಕ್ಷಿಸಿ. ನಾನು ಸಾಯಲು ಬಯಸುವುದಿಲ್ಲ. ಆದರೆ ದಾಳಿಕೋರರನ್ನು ಬಿಡಬೇಡಿ. ಅವರನ್ನು ಗಲ್ಲಿಗೇರಿಸಬೇಕು' ಎಂದು ಹೇಳಿದ್ದರಂತೆ. ಅದಕ್ಕೆ ತಾವು ಆರೋಪಿಗಳನ್ನು ಬಿಡುವುದಿಲ್ಲ ಎಂದು ಸಹೋದರಿಗೆ ಆಶ್ವಾಸನೆ ನೀಡಿದ್ದೆ ಎಂದು ಆಕೆಯ ಸಹೋದರ ತಿಳಿಸಿದ್ದಾರೆ.
ಏನಿದು ಘಟನೆ?
2019 ರ ಮಾರ್ಚ್‌ನಲ್ಲಿ ಉನ್ನಾವೋದ ಹಳ್ಳಿಯೊಂದರಲ್ಲಿ ಅತ್ಯಾಚಾರ ಎಸಗಿದ ಇಬ್ಬರು ಪುರುಷರು ಮತ್ತು ಅವರ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರು. ಅದಾಗ್ಯೂ, ಆ ಐವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. 23 ವರ್ಷ ವಯಸ್ಸಿನ ಸಂತ್ರಸ್ತೆ ಎರಡು ದಿನಗಳ ಹಿಂದ ರಾಯಬರೇಲಿಯಲ್ಲಿ ತನ್ನ ವಕೀಲರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ದುರುಳರು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಘಟನೆ ಬಳಿಕ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆದೇಶಿಸಿದ್ದರು. ಜೊತೆಗೆ ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿಯೂ ರಾಜ್ಯ ಸರ್ಕಾರ ಘೋಷಿಸಿತ್ತು.
ಉನ್ನಾವೊ ಘಟನೆಯಿಂದ ಕೋಪಗೊಂಡ ನೆಟಿಜನ್‌ಗಳು, #unnaorape ಆರೋಪಿಗಳಿಗೂ ಹೈದರಾಬಾದ್ ಶೈಲಿಯ ಎನ್‌ಕೌಂಟರ್ ಮಾಡುವಂತೆ ಒತ್ತಾಯಿಸಿದ್ದಾರೆ. ಈಗ ಯುಪಿ ಪೊಲೀಸರು ಉತ್ತರಪ್ರದೇಶದಲ್ಲಿ ಇಂತಹ ಅಪರಾಧ ಮಾಡಿದವವರ ವಿರುದ್ಧ ಹೈದರಾಬಾದ್ ಶೈಲಿಯ ಎನ್‌ಕೌಂಟರ್(Hyderabad encounter) ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಉನ್ನಾವ್ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಬದುಕುಳಿಯಲು ಸಾಧ್ಯವಾಗಲಿಲ್ಲ. ಯುಪಿ ಪೊಲೀಸರು ಈಗ ಹೇಗೆ ಕಾರ್ಯನಿರ್ವಹಿಸಲಿದ್ದಾರೆ? ಇದು ಹೈದರಾಬಾದ್ ಪೊಲೀಸರು ನಿಗದಿಪಡಿಸಿದ ಪೂರ್ವನಿದರ್ಶನವನ್ನು ಅನುಸರಿಸುತ್ತದೆಯೇ? ಈಗಾಗಲೇ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳಿಗೆ ಶಿಕ್ಷೆ ಆಗುವುದೇ? ನೋಡೋಣ... ನ್ಯಾಯ ಹೇಗೆ ಮೇಲುಗೈ ಸಾಧಿಸುತ್ತದೆ ಮತ್ತು ಕಾನೂನು ಇಲ್ಲಿಂದ ಮುಂದೆ ತಾಣ ಹಾದಿಯನ್ನು ಹೇಗೆ ತೆಗೆದುಕೊಳ್ಳುತ್ತದೆ "ಎಂದು ಕೆಲ ಟ್ವಿಟ್ಟಿಗರು ಟ್ವೀಟ್ ಮಾಡಿದ್ದಾರೆ.
"#RIPUnnaovictim, ನಮ್ಮ ದೇಶದಲ್ಲಿ ಸಾಕ್ಷಿ ರಕ್ಷಣೆಯನ್ನು ಪುನರ್ ವ್ಯಾಖ್ಯಾನಿಸಲು ನಿಮ್ಮ ಜೀವನದೊಂದಿಗೆ ಆಶಿಸುತ್ತೀರಿ" ಎಂದು ನೆಟಿಜನ್ ಒಬ್ಬರು ಹೇಳಿದರು.
"ಯುಪಿ ಪೋಲಿಸ್ ನಿಮಗೆ ಮುಂದೆ ಏನು ಮಾಡಬೇಕೆಂದು ತಿಳಿದಿದೆ". "ಕರೋ ಎನ್ಕೌಂಟರ್", ಒಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬ ಟ್ವೀಟಿಗರು, "ಇದು @UPGovt & @Uppolice! ಒಂದು ಉತ್ತಮ ಪ್ರತಿಬಿಂಬವಲ್ಲ! ಬೆದರಿಕೆ ತಿಳಿದಿತ್ತು ಮತ್ತು ಆ ಬಗ್ಗೆ ಸುರಕ್ಷಿತೆಯನ್ನು ಖಾತ್ರಿಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು. ಅದು ಸಾಧ್ಯವಾಗಲಿಲ್ಲವೇ? ಅವಳು ನ್ಯಾಯಕ್ಕಾಗಿ ಹೋರಾಡಿದಳು, ಆದರೆ ಅಧಿಕಾರಿಗಳು ಅವಳನ್ನು ವಿಫಲಗೊಳಿಸಿದ್ದಾರೆ! " ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣ, ಉನ್ನಾವೋ, ಹೈದರಾಬಾದ್ ಪ್ರಕರಣಗಳು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡುತ್ತವೆ. "ಉನ್ನಾವ್ ಸಂತ್ರಸ್ತೆ ಮತ್ತೆ ಬದುಕುಳಿಯಲು ಸಾಧ್ಯವಿಲ್ಲ. ಯುಪಿ ಪೊಲೀಸರು ಈಗ ಹೇಗೆ ಕಾರ್ಯನಿರ್ವಹಿಸಲಿದ್ದಾರೆ? ಯುಪಿ ಪೊಲೀಸರು ಹೈದರಾಬಾದ್ ಪೊಲೀಸರಂತೆಯೇ ಕಾರ್ಯ ನಿರ್ವಹಿಸಲಿದ್ದಾರೆಯೇ? ಈಗಾಗಲೇ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿಗಳಿಗೆ ಶಿಕ್ಷೆ ಆಗಲಿದೆಯೇ? ಇಡೀ ದೇಶದಲ್ಲಿ ಅತ್ಯಾಚಾರದಂತಹ ಅಪರಾಧಗಳನ್ನು ಕಡಿಮೆ ಮಾಡಲು ನಮ್ಮ ಸರ್ಕಾರಗಳು ಕಾನೂನಿನ ಮೂಲಕ ಯಾವ ರೀತಿ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ.