ನವದೆಹಲಿ: ದೇಶದ ದುರ್ಬಲ ಆದಾಯ ವರ್ಗಗಳ ಜನರಿಗೆ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಒದಗಿಸುವುದು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ, ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಸಿಎಲ್‌ಎಸ್‌ಎಸ್ ಅಂದರೆ, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ನೀಡಲಾಗುತ್ತದೆ. ಮನೆ ಖರೀದಿಸಲು ಗೃಹ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯನ್ನು 20 ಮಾರ್ಚ್ 2021 ರವರೆಗೆ ವಿಸ್ತರಿಸಿದೆ. ಇದರಿಂದ 2.50 ಲಕ್ಷಕ್ಕೂ ಹೆಚ್ಚು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ಇದನ್ನು 25 ಜೂನ್ 2015 ರಂದು ಪ್ರಾರಂಭಿಸಲಾಗಿದೆ.
ಇಂದಿನಿಂದ ಬುಕಿಂಗ್ ಆರಂಭ
ಉತ್ತರ ಪ್ರದೇಶ ವಸತಿ ಅಭಿವೃದ್ಧಿ ಮಂಡಳಿಯು ಇಂದಿನಿಂದ ರಾಜ್ಯದ 19 ನಗರಗಳಲ್ಲಿ ಒಟ್ಟು 3516 ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳ ಮನೆಗಳಿಗೆ ಬುಕಿಂಗ್ ನಡೆಸಲಿದೆ. ಅಂದರೆ ಸೆಪ್ಟೆಂಬರ್ 1 ರಿಂದ ಜನರು ತಮ್ಮ ಮನೆಗಳನ್ನು ಬುಕ್ ಮಾಡಲು ಸಾಧ್ಯವಾಗಲಿದೆ. ಬಡವರಿಗೆ ಈ ಮನೆ ಕೇವಲ 3.50 ಲಕ್ಷ ರೂ.ಗೆ ಸಿಗಲಿವೆ. ಇದರ ಅಡಿಯಲ್ಲಿ ಒಟ್ಟು 3516 ಮನೆಗಳಿಗೆ ಬುಕ್ ಮಾಡಲಾಗುವುದು. ಲಖನೌದಲ್ಲಿ ಗರಿಷ್ಠ 816 ಮನೆಗಳಿಗೆ ಬುಕಿಂಗ್ ತೆರೆಯಲಾಗಿದೆ. ಈ ಯೋಜನೆಯಡಿ, ಮನೆ ಖರೀದಿಸಲು ಬಯಸುವ ಜನರು ಅಕ್ಟೋಬರ್ 15 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಷರತ್ತುಗಳು ಅನ್ವಯ
ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ಮಾತ್ರ 3.50 ಲಕ್ಷ ರೂ.ಗಳಲ್ಲಿ ಮನೆ ನೀಡಲಾಗುತ್ತಿದೆ. 3.50 ಲಕ್ಷ ರೂ.ಗಳನ್ನು ಅವರು ಒಟ್ಟು ಮೂರು ವರ್ಷಗಳಲ್ಲಿ ಹಿಂದಿರುಗಿಸಬೇಕು. ಮೊದಲು ಉತ್ತರ ಪ್ರದೇಶದ ಹೌಸಿಂಗ್ ಬೋರ್ಡ್ ಒಟ್ಟು 5 ವರ್ಷಗಳ ಕಂತಿನಲ್ಲಿ ಮನೆ ನೀಡಲು ಯೋಜನೆ ರೂಪಿಸಿತ್ತು. ಆದರೆ, ನಂತರ ಈ ಅವಧಿಯನ್ನು 3 ವರ್ಷಗಳಿಗೆ ಇಳಿಸಲಾಗಿದೆ. ಈ ಯೋಜನೆಯ ಅಡಿ ಬಡವರಿಗೆ ನೀಡಲಾಗುವ ಮನೆಗಳ ಕಾರ್ಪೆಟ್ ಏರಿಯಾ 22.77 ಸ್ಕ್ವೆಯರ್ ಮೀಟರ್ ಇರಲಿದ್ದು, ಸುಪರ್ ಏರಿಯಾ 34.07 ಸ್ಕ್ವೆಯರ್ ಮೀಟರ್ ಇರಲಿದೆ.
ಹೇಗೆ ಅರ್ಜಿ ಸಲ್ಲಿಸಬೇಕು?
- ಈ ಯೋಜನೆಯ ಲಾಭ ಪಡೆಯಲು ಬಯಸುವವರು ಮೊದಲು PMAY ನ ಅಧಿಕೃತ ವೆಬ್‌ಸೈಟ್ https://pmaymis.gov.in/ಗೆ ಲಾಗ್ ಇನ್ ಆಗಬೇಕು.
- ನೀವು LIG, MIG ಅಥವಾ EWS ವರ್ಗಕ್ಕೆ ಒಳಪಟ್ಟರೆ, ಇತರ 3 ಘಟಕಗಳ ಮೇಲೆ ಕ್ಲಿಕ್ ಮಾಡಿ.
- ಮೊದಲ ಕಾಲಂ ನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ. ಎರಡನೇ ಕಾಲಂನಲ್ಲಿ ಆಧಾರ್‌ನಲ್ಲಿ ಬರೆದ ನಿಮ್ಮ ಹೆಸರನ್ನು ನಮೂದಿಸಿ.
- ಇದರ ನಂತರ, ತೆರೆಯುವ ಪುಟದಲ್ಲಿ ಹೆಸರು, ವಿಳಾಸ, ಕುಟುಂಬ ಸದಸ್ಯರ ಸಂಖ್ಯೆಗಳಂತಹ ಸಂಪೂರ್ಣ ವೈಯಕ್ತಿಕ ವಿವರಗಳನ್ನು ನೀಡಬೇಕು.
- ಬಳಿಕ ನೀವು ನೀಡಿರುವ ಮಾಹಿತಿಯ ನಿಖರತೆಯನ್ನು ಪ್ರಾಮಾಣಿಕರಿಸುವ ಬಾಕ್ಸ್ ನಲ್ಲಿ ಕ್ಲಿಕ್ ಮಾಡಿ .
- ಒಮ್ಮೆ ನೀವು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ನೀವು ಇಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.
- ಇದರ ನಂತರ ನೀವು ಈ ಫಾರ್ಮ್ ಅನ್ನು ಸಲ್ಲಿಸಿ.
- ಅರ್ಜಿ ಶುಲ್ಕ 100 ರೂಪಾಯಿ ಹಾಗೂ ಹೆಸರು ನೋಂದಣಿ ಶುಲ್ಕ ರೂ.5000 ನ್ನುಬ್ಯಾಂಕಿನಲ್ಲಿ ಜಮಾ ಮಾಡಬೇಕಾಗುತ್ತದೆ.