ಪೊಲೀಸ್ ದೌರ್ಜನ್ಯಕ್ಕೆ ಬೇಸತ್ತು ಶ್ರೀರಾಮನ ಬಳಿ ನ್ಯಾಯ ಕೇಳಲು ಹೋದ ವ್ಯಕ್ತಿ..!

ಬಸ್ತಿಯಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ 70 ಕಿಮೀ ಪ್ರಯಾಣಿಸಿರುವ ನಿಶಾದ್, ‘ಸ್ಥಳೀಯ ಪೊಲೀಸರು ಆತನ ವಿರುದ್ಧ ಹಲವಾರು ನಕಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Written by - Puttaraj K Alur | Last Updated : Oct 18, 2021, 04:08 PM IST
  • ಪೊಲೀಸರ ದೌರ್ಜನ್ಯಕ್ಕೆ ಬೇಸತ್ತು ಶ್ರೀರಾಮನ ಬಳಿ ನ್ಯಾಯ ಕೇಳಲು ಹೋದ ವ್ಯಕ್ತಿ
  • ಬಸ್ತಿಯಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ 70 ಕಿಮೀ ಪ್ರಯಾಣಿಸಿರುವ ಸೋಮನಾಥ ನಿಶಾದ್
  • ಪೊಲೀಸರು ತನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪ
ಪೊಲೀಸ್ ದೌರ್ಜನ್ಯಕ್ಕೆ ಬೇಸತ್ತು ಶ್ರೀರಾಮನ ಬಳಿ ನ್ಯಾಯ ಕೇಳಲು ಹೋದ ವ್ಯಕ್ತಿ..!  title=
ಶ್ರೀರಾಮನ ಬಳಿ ನ್ಯಾಯ ಕೇಳಲು ಹೋದ ವ್ಯಕ್ತಿ

ಅಯೋಧ್ಯೆ: ಪೊಲೀಸರ ದೌರ್ಜನ್ಯಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಶ್ರೀರಾಮನ(Lord Sri Ram)ಬಳಿ ನ್ಯಾಯ ಕೇಳಲು ಅಯೋಧ್ಯೆಗೆ ನಡೆದುಕೊಂಡೇ ಹೋಗಿರುವ ಘಟನೆ ನಡದಿದೆ. ಉತ್ತರ ಪ್ರದೇಶ(Uttar Pradesh)ದ ಬಸ್ತಿ ಜಿಲ್ಲೆಯ ನಿವಾಸಿ ಸೋಮನಾಥ ನಿಶಾದ್ ಅವರೇ ‘ತನಗೆ ನ್ಯಾಯ ದೊರಕಿಸಿಕೊಡು ಶ್ರೀರಾಮ’ ಎಂಬ ಅಕ್ಷರಗಳಿರುವ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದುಕೊಂಡು ಅಯೋಧ್ಯೆಗೆ ತಲುಪಿರುವ ವ್ಯಕ್ತಿ.

ಪೊಲೀಸರ ದೌರ್ಜನ್ಯ(Fake Police Case)ದಿಂದ ತನಗೆ ನ್ಯಾಯ ದೊರಕಿಸಿಕೊಡುವಂತೆ ಆತ ರಾಮನ ಮುಂದೆ ಬೇಡಿಕೊಳ್ಳುತ್ತಿದ್ದಾನೆ. ಬಸ್ತಿಯಿಂದ ಅಯೋಧ್ಯೆ(Basti to Ayodhya) ಗೆ ಕಾಲ್ನಡಿಗೆಯಲ್ಲಿ 70 ಕಿಮೀ ಪ್ರಯಾಣಿಸಿರುವ ನಿಶಾದ್, ‘ಸ್ಥಳೀಯ ಪೊಲೀಸರು ಆತನ ವಿರುದ್ಧ ಹಲವಾರು ನಕಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ನಾನು ಪ್ರತಿಯೊಬ್ಬರ ಮನೆಯ ಬಾಗಿಲನ್ನು ತಟ್ಟಿದ್ದೇನೆ, ಆದರೆ ಯಾರೂ ನನಗೆ ಸಹಾಯ ಮಾಡಿಲ್ಲ. ನನಗೆ ನ್ಯಾಯ ದೊರಕಿಸಿಕೊಡುವ ಭರವಸೆ ಉಳಿದಿಲ್ಲ, ಹೀಗಾಗಿ ಸರ್ವಶಕ್ತ  ಶ್ರೀರಾಮನ ಬಳಿಗೆ ಬಂದಿದ್ದೇನೆ. ಇಲ್ಲಿ ನ್ಯಾಯ ಸಿಗುತ್ತದೆಂಬ ವಿಶ್ವಾಸ ನನಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 'ಸಿಡಬ್ಲ್ಯುಸಿ ಸಭೆಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಅವಹೇಳನಕಾರಿ ಹೇಳಿಕೆ , ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ

ಈ ವರ್ಷದ ಆರಂಭದಲ್ಲಿ ತನ್ನ ಹಳ್ಳಿಯಲ್ಲಿ ಕೆಲವು ನಿವಾಸಿಗಳೊಂದಿಗೆ ಸಣ್ಣ ಘರ್ಷಣೆ ಉಂಟಾದಾಗ ನನಗೆ ತೊಂದರೆ ಆರಂಭವಾಯಿತು. ಆಗಿನ ಸಬ್ ಇನ್ಸ್‌ಪೆಕ್ಟರ್ ದೀಪಕ್ ಸಿಂಗ್ ಅವರು ತನ್ನ ವಿರುದ್ಧ ಪ್ರತಿಸ್ಪರ್ಧಿ ಗುಂಪಿನ ಆದೇಶದ ಮೇರೆಗೆ ಪ್ರಕರಣ ದಾಖಲಿಸಿದರು ಎಂದು ನಿಶಾದ್ ಆರೋಪಿಸಿದ್ದಾರೆ. ‘ಪೊಲೀಸರು ನನ್ನ ವಿರುದ್ಧ ಗೂಂಡಾ ಕಾಯ್ದೆ(Goonda Act)ಯಡಿ ಪ್ರಕರಣ ದಾಖಲಿಸಿದ್ದಾರೆ. ನನ್ನ ವಿರುದ್ಧದ ಪ್ರಕರಣವನ್ನು ಪರಿಶೀಲಿಸುವಂತೆ ನಾನು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ. ಆದರೆ ಯಾರೂ ನನ್ನ ಮಾತು ಕೇಳುತ್ತಿಲ್ಲವೆಂದು ಹೇಳಿದ್ದಾರೆ.

ತನಗೆ 20 ಸಾವಿರ ರೂ. ನೀಡುವಂತೆ ಪೊಲೀಸ್ ಅಧಿಕಾರಿ ದೀಪಕ್ ಸಿಂಗ್ ಕೇಳಿದ್ದರು. ನಾನು ಹಣ ನೀಡಲು ಸಾಧ್ಯವಾಗದಿದ್ದಾಗ ಪೊಲೀಸ್ ಅಧಿಕಾರಿಯು ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು ಎಂದು ನಿಶಾದ್ ಆರೋಪಿಸಿದ್ದಾರೆ. ನಕಲಿ ಪ್ರಕರಣದಲ್ಲಿ ಹುಡುಗಿ ಮತ್ತು ಆಕೆಯ ಕುಟುಂಬದ ಎಂಟು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಸಿಂಗ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಈ ವಿಷಯ ಮಾಧ್ಯಮದ ಗಮನಕ್ಕೆ ಬಂದಿತ್ತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Online fraud : ನೀವು ಕೂಡಾ ಆನ್ಲೈನ್ ಫ್ರಾಡ್ ಗೆ ಒಳಗಾಗಿದ್ದರೆ ಹೀಗೆ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News