ನವದೆಹಲಿ: ಜುಲೈ 1 ರಿಂದ ಮೂರು ಜಿಲ್ಲೆಗಳ ಸ್ಥಳೀಯ ನಿವಾಸಿಗಳಿಗೆ ಯಾತ್ರೆಗೆ ಅನುಮತಿ ನೀಡುವ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯ ಹೈಕೋರ್ಟ್ ನಾಲ್ಕು ವಾರಗಳ ಕಾಲ ತಡೆಹಿಡಿದ ಒಂದು ದಿನದ ನಂತರ ಉತ್ತರಾಖಂಡ ಸರ್ಕಾರ ಮಂಗಳವಾರ ಚಾರ್ ಧಾಮ್ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಮುಂದೂಡಿದೆ.
ಉತ್ತರಾಖಂಡ ಸರ್ಕಾರ (Uttarakhand Government) ಮಂಗಳವಾರ ಬೆಳಿಗ್ಗೆ ಚಾರ್ಧಮ್ ಯಾತ್ರೆಗೆ ಸಂಬಂಧಿಸಿದಂತೆ ಪರಿಷ್ಕೃತ ಎಸ್‌ಒಪಿ ಹೊರಡಿಸಿದ್ದು ಪ್ರಸ್ತಾವಿತ ಚಾರ್ಧಮ್ ಯಾತ್ರೆಯನ್ನು ಸರ್ಕಾರ ಮುಂದಿನ ಆದೇಶದವರೆಗೆ ಮುಂದೂಡಿರುವುದಾಗಿ ಉಲ್ಲೇಖಿಸಿದೆ.
ಮೊದಲ ಹಂತದಲ್ಲಿ, ಚಮೋಲಿ ಜಿಲ್ಲೆಯ ಜನರಿಗೆ ಷರತ್ತುಬದ್ಧವಾಗಿ ಯಾತ್ರೆಯನ್ನು ಬದ್ರಿನಾಥ್‌ಗೆ ತೆರೆಯಲು ಸರ್ಕಾರ ನಿರ್ಧರಿಸಿತ್ತು. ರುದ್ರಪ್ರಯಾಗ್ ಜಿಲ್ಲೆಯ ಜನರಿಗೆ ಕೇದಾರನಾಥ ಯಾತ್ರೆ, ಉತ್ತರಕಾಶಿ ಜಿಲ್ಲೆಯ ಜನರಿಗೆ ಗಂಗೋತ್ರಿ ಮತ್ತು ಯಮುನೋತ್ರಿ ಯಾತ್ರೆಗೆ ಅವಕಾಶ ನೀಡಿತ್ತು. ಇದರಲ್ಲಿ ಪ್ರಯಾಣಿಕರ ಕೋವಿಡ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿತ್ತು. ಪ್ರವಾಸೋದ್ಯಮ ಮತ್ತು ದತ್ತಿ ಇಲಾಖೆ ಪ್ರತ್ಯೇಕ ಎಸ್‌ಒಪಿ ನೀಡಲಿದೆ ಎಂದು ನಂಬಲಾಗಿತ್ತು.
ಇದನ್ನೂ ಓದಿ- Astrology: ಯಾವ ರಾಶಿಯ ಸಂಗಾತಿ ನಮಗೆ ಬೆಸ್ಟ್ ಸಂಗಾತಿ? ಬಹುತೇಕ ಜನರಿಗೆ ಇದರ ಉತ್ತರ ತಿಳಿದಿಲ್ಲ
ಚಾರ್ ಧಾಮ್ ಯಾತ್ರೆಯ (Char Dham Yatra) ಮೊದಲ ಹಂತಕ್ಕೆ ಸರ್ಕಾರ ಎಸ್‌ಒಪಿಗಳನ್ನು ನೀಡಿತು. ಇದರಲ್ಲಿ ಚಮೋಲಿ, ರುದ್ರಪ್ರಯಾಗ್ ಮತ್ತು ಉತ್ತರಕಾಶಿ ಜಿಲ್ಲೆಗಳ ನಿವಾಸಿಗಳಿಗೆ ಪೂರ್ವ ನೋಂದಣಿ ಮತ್ತು ಆರ್‌ಟಿಪಿಸಿಆರ್ / ಟ್ರೂನಾಟ್ / ರಾಟ್ ಕೋವಿಡ್ ಋಣಾತ್ಮಕ ಪರೀಕ್ಷಾ ವರದಿಯ ನಂತರ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಋಣಾತ್ಮಕ ಕೋವಿಡ್ ಪರೀಕ್ಷಾ ವರದಿಯನ್ನು ಕೊಂಡೊಯ್ಯುವ ಉತ್ತರಾಖಂಡದ ಎಲ್ಲಾ ನಿವಾಸಿಗಳಿಗೆ ಜುಲೈ 11 ರಿಂದ ಎರಡನೇ ಹಂತದಲ್ಲಿ ನಾಲ್ಕು ದೇವಾಲಯಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿತ್ತು.
Despite Uttarakhand High Court's order against holding Char Dham Yatra this year, the state govt in a fresh set of COVID guidelines said the first phase of the yatra will begin from July 1, while the second phase will commence from July 11; COVID negative report to be mandatory https://t.co/Fm16PD3ssc
— ANI (@ANI) June 29, 2021
ಚಾರ್ ಧಾಮ್ ಯಾತ್ರೆಯನ್ನು ಹೈಕೋರ್ಟ್ ಸೋಮವಾರ ನಿಷೇಧಿಸಿತ್ತು:
ಸೋಮವಾರ, ಸರ್ಕಾರದ ಎಲ್ಲಾ ವಾದಗಳನ್ನು ತಿರಸ್ಕರಿಸಿದ ಹೈಕೋರ್ಟ್, ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ನಡೆಸುವ ಸಂಪುಟ ನಿರ್ಧಾರವನ್ನು ತಡೆಹಿಡಿದಿತ್ತು. ಸರ್ಕಾರದ ಅಧಿಕಾರಿಗಳು ನ್ಯಾಯಾಲಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಚಾಟಿ ಬೀಸಿತ್ತು. ಇದರೊಂದಿಗೆ ಮುಖ್ಯ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಉತ್ತರಿಸಲು ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಅಧಿಕಾರಿಗಳು ತಪ್ಪು ಮತ್ತು ಅಪೂರ್ಣ ಮಾಹಿತಿಯನ್ನು ನೀಡುವ ಮೂಲಕ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಾಗಬಾರದು ಎಂದು ತಿಳಿಸಿತ್ತು.
ಇದನ್ನೂ ಓದಿ- ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ
ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರ ನ್ಯಾಯಪೀಠ ಸೋಮವಾರ ಸ್ಟೇ ಆದೇಶ ಹೊರಡಿಸಿದ್ದು, ಪ್ರಕರಣವನ್ನು ಜುಲೈ 7 ಕ್ಕೆ ಮುಂದೂಡಿದೆ. ಈ ವೇಳೆ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸೂಚಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.