ದೆಹಲಿ: ಹಿರಿಯ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ದೇವ್ ಅವರನ್ನು ದೆಹಲಿ ಮುಖ್ಯ ಕಾರ್ಯದರ್ಶಿಯಾಗಿ ದೆಹಲಿ ಸರ್ಕಾರ ನೇಮಕ ಮಾಡಿದೆ.
1987ರ ಬ್ಯಾಚ್ ಐಎಎಸ್ ಅಧಿಕಾರಿಯಾದ ವಿಜಯ್ ಕುಮಾರ್ ದೇವ್ ಅವರು, ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಫೆಬ್ರವರಿಯಲ್ಲಿ ಈ ಹಿಂದೆ ಮುಖ್ಯ ಕಾರ್ಯದರ್ಶಿಯಾಗಿದ್ದ ಅಂಶು ಪ್ರಕಾಶ್ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆಪ್ ಶಾಸಕರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಂಶು ಪ್ರಕಾಶ್ ಆರೋಪಿಸಿದ್ದರು. ಹೀಗಾಗಿ ಕಳೆದ ವಾರ ಕೇಂದ್ರ ಸರ್ಕಾರದ ಟೆಲಿ ಕಮ್ಯಿನಿಕೇಷನ್ ವಿಭಾಗದ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ಅಂಶು ಪ್ರಕಾಶ್ ಅವರನ್ನು ವರ್ಗಾವಣೆ ಮಾಡಿ, ಆ ಹುದ್ದೆಗೆ ವಿಜಯ್ ಕುಮಾರ್ ದೇವ್ ಅವರನ್ನು ನೇಮಕ ಮಾಡಿದೆ.