ಮಹಾರಾಷ್ಟ್ರದಲ್ಲಿ ಯಾವ ದುಷ್ಯಂತ್ ಚೌಟಾಲಾನೂ ಇಲ್ಲ - ಬಿಜೆಪಿಗೆ ಶಿವಸೇನಾ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿ- ಶಿವಸೇನಾ ನಡುವೆ ಮುಸುಕಿನ ಗುದ್ದಾಟ ತಾರಕ್ಕೆರಿದ್ದು, ಈಗ ಶಿವಸೇನಾ ವಕ್ತಾರ ಸಂಜಯ್ ರೌತ್ ಮಹಾರಾಷ್ಟ್ರದಲ್ಲಿ ಯಾವ ದುಶ್ಯಂತ್ ಇಲ್ಲ, ತಮ್ಮ ಪಕ್ಷದ್ದು ಧರ್ಮ ಮತ್ತು ಸತ್ಯದ ರಾಜಕಾರಣ ಎಂದು ಹೇಳಿದ್ದಾರೆ.

Last Updated : Oct 29, 2019, 01:13 PM IST
ಮಹಾರಾಷ್ಟ್ರದಲ್ಲಿ ಯಾವ ದುಷ್ಯಂತ್ ಚೌಟಾಲಾನೂ ಇಲ್ಲ - ಬಿಜೆಪಿಗೆ ಶಿವಸೇನಾ ಎಚ್ಚರಿಕೆ  title=
file photo

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿ- ಶಿವಸೇನಾ ನಡುವೆ ಮುಸುಕಿನ ಗುದ್ದಾಟ ತಾರಕ್ಕೆರಿದ್ದು, ಈಗ ಶಿವಸೇನಾ ವಕ್ತಾರ ಸಂಜಯ್ ರೌತ್ ಮಹಾರಾಷ್ಟ್ರದಲ್ಲಿ ಯಾವ ದುಶ್ಯಂತ್ ಇಲ್ಲ, ತಮ್ಮ ಪಕ್ಷದ್ದು ಧರ್ಮ ಮತ್ತು ಸತ್ಯದ ರಾಜಕಾರಣ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಳಂಬದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ರೌತ್ ' ನಮ್ಮಲ್ಲಿ ಯಾವುದೇ ದುಶ್ಯಂತ್ ಇಲ್ಲ, ಅವರ ತಂದೆ ಜೈಲಿನೊಳಗೆ ಇದ್ದಾರೆ. ಇಲ್ಲಿ ನಾವು ಧರ್ಮ ಮತ್ತು ಸತ್ಯದ ರಾಜಕಾರಣವನ್ನು ಮಾಡುತ್ತೇವೆ. ಮಹಾರಾಷ್ಟ್ರವು ಬಹಳ ಸಂಕೀರ್ಣವಾದ ರಾಜಕೀಯವನ್ನು ಹೊಂದಿದೆ' ಎಂದು ರೌತ್ ಹೇಳಿದರು.

'ಯಾರಾದರೂ ನಮ್ಮನ್ನು ಅಧಿಕಾರದಿಂದ ದೂರವಿರಿಸಲು ಬಯಸಿದರೆ, ಅದು ನಮಗೆ ಗೌರವದ ಸಂಗತಿ. ಈ ವಿಚಾರವಾಗಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಲೋಕಸಭಾ ಚುನಾವಣೆಗೆ ಮೊದಲು ನಿರ್ಧರಿಸಿದಂತೆ ನಮ್ಮ ಬೇಡಿಕೆ ಕೆಲಸಗಳು ನಡೆಯಬೇಕು' ಎಂದು ಅವರು ಹೇಳಿದರು.

'ನಮಗೆ ಇತರ ಆಯ್ಕೆಗಳಿವೆ ಎಂದು ಉದ್ಧವ್ ಠಾಕ್ರೆ ಜಿ ಹೇಳಿದ್ದಾರೆ. ಆದರೆ ಆ ಪರ್ಯಾಯವನ್ನು ಸ್ವೀಕರಿಸುವ ಪಾಪವನ್ನು ಬಯಸುವುದಿಲ್ಲ. ಶಿವಸೇನೆ ಯಾವಾಗಲೂ ಸತ್ಯದ ರಾಜಕೀಯವನ್ನು ಮಾಡಿದೆ, ನಾವು ಅಧಿಕಾರಕ್ಕಾಗಿ ಹಸಿದಿಲ್ಲ. ನಾವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದಾಗಲಿ ಅಥವಾ ಎಲ್ಲರಿಗೂ ನೈತಿಕ ಪಾಠ ಕಲಿಸಲು ಸಾಧ್ಯವಿಲ್ಲ ಅಂತಹ ರಾಜಕೀಯದಿಂದ ಶಿವಸೇನೆ ಯಾವಾಗಲೂ ದೂರ ಇರುತ್ತದೆ' ಎಂದು ರೌತ್ ಅವರು ಹೇಳಿದರು. 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ 105 ಸ್ಥಾನಗಳನ್ನು ಗೆದ್ದು ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿತು, ಇನ್ನೊಂದೆಡೆಗೆ ಮಿತ್ರ ಪಕ್ಷ ಶಿವಸೇನಾ 56 ಸ್ಥಾನಗಳನ್ನು ಗಳಿಸಿದೆ.

Trending News