ಗಂಭೀರ್ ಗೆ ವಿದೇಶಿ ಉಡುಗೆ ಓಕೆ, ನಮಗೇಕೆ ಕ್ಯಾತೆ ?- ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಪ್ರಶ್ನೆ

ಬಂಗಾಳಿ ನಟಿ ಹಾಗೂ ನೂತನವಾಗಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಉಡುಗೆಯಲ್ಲಿನ ತಾರತಮ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

Last Updated : May 31, 2019, 05:19 PM IST
ಗಂಭೀರ್ ಗೆ ವಿದೇಶಿ ಉಡುಗೆ ಓಕೆ, ನಮಗೇಕೆ ಕ್ಯಾತೆ ?- ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಪ್ರಶ್ನೆ  title=
Photo courtesy: Twitter

ನವದೆಹಲಿ: ಬಂಗಾಳಿ ನಟಿ ಹಾಗೂ ನೂತನವಾಗಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಉಡುಗೆಯಲ್ಲಿನ ತಾರತಮ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಲೋಕಸಭೆಯಾಗಿ ಆಯ್ಕೆಯಾದ ನಂತರ ಸಂಸತ್ತಿನ ಮುಂದೆ ತಮ್ಮ ಗುರುತಿನ ಚೀಟಿಯೊಂದಿಗೆ  ಫೋಟೋ ತೆಗೆಸಿಕೊಂಡಿದ್ದ ನುಶ್ರಾತ್ ಜಹಾನ್ ಹಾಗೂ ಮಿಮಿ ಚಕ್ರವರ್ತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿದೇಶಿ ಉಡುಗೆಯನ್ನು ಧರಿಸಿದ್ದಕ್ಕೆ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಇದಾದ ನಂತರ ಬಿಜೆಪಿ ಗೌತಮ್ ಗಂಭೀರ್ ಕೂಡ ಸಂಸತ್ತಿನ ಎದುರು ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಿ ಫೋಟೋ ತೆಗೆಸಿಕೊಂಡಿದ್ದರು.ಆದರೆ ಇದಕ್ಕೆ ಯಾವುದೇ ತಕಾರಾರು ಎತ್ತಿರಲಿಲ್ಲ.

ಇದನ್ನು ಗಮನಿಸಿದ  ಪತ್ರಕರ್ತೆ ಸ್ವಾತಿ ಚತುರ್ವೇದಿ ಎನ್ನುವವರು ಲಿಂಗ ತಾರತಮ್ಯ ಅನುಸರಿಸುತ್ತಿರುವ ಕುರಿತಾಗಿ ಗಮನ ಸೆಳೆದಿದ್ದರು " ಫ್ಯಾಶನ್ ಪೋಲಿಸ್ ಗಂಭೀರ್ ಮೇಲೆ ಇನ್ನು ಆಕ್ರಮಣ ಮಾಡಿಲ್ಲವೇ ? ಅಥವಾ ಇದು ಕೇವಲ ಮಹಿಳೆರಿಗಷ್ಟೇನಾ ? ಗೌತಮ್ ಗಂಭೀರ್ ನೋಡಲು ಚೆನ್ನಾಗಿ ಕಾಣುತ್ತಾರೆ" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಿಮಿ ಚಕ್ರವರ್ತಿ  ಮೇಡಂ ಬಹುಶಃ ನಾವು ಮಹಿಳೆಯರು ಅಂತಾ ಹಾಗೆ ಮಾಡಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.
 

Trending News