ms dhoni dating: ಮಹೇಂದ್ರ ಸಿಂಗ್ ಧೋನಿ ಇದೀಗ ಸಾಕ್ಷಿ ಜೊತೆ ವಿವಾಹವಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಮದುವೆಗೆ ಮುನ್ನ ಈ ನಾಲ್ಕು ನಟಿಯರ ಜೊತೆ ಡೇಟಿಂಗ್ ಮಾಡ್ತಿದ್ರು ಎಂಬ ವದಂತಿ ಇದೆ. ಆ ನಟಿಯರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕ್ರಿಕೆಟಿಗರು ಯಾವಾಗಲೂ ಬಾಲಿವುಡ್ ಮತ್ತು ನಟಿಯರೊಂದಿಗೆ ಸಂಪರ್ಕ ಹೊಂದಿರುತ್ತಾರೆ. ವಿರಾಟ್ ಕೊಹ್ಲಿಯಿಂದ ಹಿಡಿದು ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್’ವರೆಗೆ ಬಾಲಿವುಡ್ ನಟಿಯರನ್ನು ಮದುವೆಯಾದ ಅನೇಕ ಕ್ರಿಕೆಟಿಗರು ಇದ್ದಾರೆ. ಆದರೆ ಈ ಕ್ರಿಕೆಟಿಗರ ಹೆಸರು ಕೂಡ ನಟಿಯರ ಜೊತೆ ತಳುಕು ಹಾಕಿತ್ತು.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಇದರಿಂದ ಹೊರತಾಗಿಲ್ಲ. ಧೋನಿ ಹೆಸರು ದೀಪಿಕಾ ಪಡುಕೋಣೆಯೊಂದಿಗೆ ಹೆಚ್ಚು ತಳುಕು ಹಾಕಿಕೊಂಡಿತ್ತು. ವರದಿಗಳ ಪ್ರಕಾರ, ಧೋನಿ ಅವರು ದೀಪಿಕಾ ಪಡುಕೋಣೆಯವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಆ ಸಮಯದಲ್ಲಿ ಯುವರಾಜ್ ಸಿಂಗ್ ಜೊತೆಗೆ ದೀಪಿಕಾ ಹೆಸರು ಕೇಳಿ ಬಂದಿದ್ದರಿಂದ, ಧೋನಿ ದೀಪಿಕಾ ಅವರಿಂದ ದೂರವಾಗಿದ್ದರು. ಎಂಎಸ್ ಧೋನಿ ಸಂದರ್ಶನವೊಂದರಲ್ಲಿ ದೀಪಿಕಾ ಮೇಲೆ ಕ್ರಶ್ ಇತ್ತು ಎಂದು ಬಹಿರಂಗಪಡಿಸಿದ್ದರು.
ಇವರಲ್ಲದೆ, 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಕ್ರಿಯೇಟಿವ್ ಪ್ರೀತಿ ಸಿಮೋಸ್ ಅವರೊಂದಿಗೆ ಸಹ ಧೋನಿ ಹೆಸರು ಕೇಳಿಬಂದಿತ್ತು. ಆದರೆ ಪ್ರೀತಿ ಸಿಮೋಸ್ ಮತ್ತು ಮಹೇಂದ್ರ ಸಿಂಗ್ ಧೋನಿ ಉತ್ತಮ ಸ್ನೇಹಿತರು. ಸುಮಾರು 16 ವರ್ಷಗಳಿಂದ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದಾರೆ.
'ಗಜನಿ' ಚಿತ್ರದ ನಟಿ ಆಸಿನ್ ಜೊತೆ ಮಹೇಂದ್ರ ಸಿಂಗ್ ಧೋನಿ ಡೇಟಿಂಗ್ ಮಾಡುತ್ತಿದ್ದರು ಎಂದು ಗುಸುಗುಸು ಇದೆ. ಬಟ್ಟೆ ಬ್ರಾಂಡ್ ಒಂದರ ರಾಯಭಾರಿಯಾಗಿದ್ದಾಗಲೇ ಇಬ್ಬರ ನಡುವೆ ಏನೋ ಇದೆ ಎಂಬ ಚರ್ಚೆ ಶುರುವಾಗಿತ್ತು. ವರದಿಗಳ ಪ್ರಕಾರ, 2010 ರಲ್ಲಿ, ಧೋನಿ ಒಮ್ಮೆ ಆಸಿನ್ ಮನೆಗೆ ಭೇಟಿ ನೀಡಿದ್ದರು.
2008 ರಲ್ಲಿ, ಮಹೇಂದ್ರ ಸಿಂಗ್ ಧೋನಿ ಹೆಸರು ನಟಿ ಮತ್ತು ಮಾಡೆಲ್ ಲಕ್ಷ್ಮಿ ರಾಯ್ ಜೊತೆ ಕೇಳಿಬಂದಿತ್ತು. ಪಾರ್ಟಿಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರು 2009 ರಲ್ಲಿ ಬೇರ್ಪಟ್ಟರು ಎಂದು ಹೇಳಲಾಗುತ್ತದೆ.