ಮಹಿಳೆಯಿಂದ ಸೇವಿಂಗ್ ಮಾಡಿಸಿಕೊಂಡ ಬಳಿಕ ಸಚಿನ್ ತೆಂಡೂಲ್ಕರ್ ಹೇಳಿದ್ದೇನು ಗೊತ್ತೇ?

ಸಾಮಾನ್ಯವಾಗಿ ಸಲೂನ್ ಶಾಪ್ ಗಳಲ್ಲಿ ಪುರುಷರು ಪ್ರಾಬಲ್ಯವನ್ನು ಹೊಂದಿದ್ದಾರೆ .ಅಂತದದರಲ್ಲಿ ಈಗ ಉತ್ತರಪ್ರದೇಶದ ಮಹಿಳೆಯರಿಬ್ಬರು ಇಂತಹ ಪ್ರಾಬಲ್ಯವನ್ನು ಮುರಿಯುವ ಯತ್ನಕ್ಕೆ ಕೈಜೋಡಿಸಿದ್ದಾರೆ.

Last Updated : May 4, 2019, 05:02 PM IST
ಮಹಿಳೆಯಿಂದ ಸೇವಿಂಗ್ ಮಾಡಿಸಿಕೊಂಡ ಬಳಿಕ ಸಚಿನ್ ತೆಂಡೂಲ್ಕರ್ ಹೇಳಿದ್ದೇನು ಗೊತ್ತೇ?   title=
Photo courtesy: Instagram

ನವದೆಹಲಿ: ಸಾಮಾನ್ಯವಾಗಿ ಸಲೂನ್ ಶಾಪ್ ಗಳಲ್ಲಿ ಪುರುಷರು ಪ್ರಾಬಲ್ಯವನ್ನು ಹೊಂದಿದ್ದಾರೆ .ಅಂತದದರಲ್ಲಿ ಈಗ ಉತ್ತರಪ್ರದೇಶದ ಮಹಿಳೆಯರಿಬ್ಬರು ಇಂತಹ ಪ್ರಾಬಲ್ಯವನ್ನು ಮುರಿಯುವ ಯತ್ನಕ್ಕೆ ಕೈಜೋಡಿಸಿದ್ದಾರೆ.

ಹೌದು, 2014 ರಲ್ಲಿ ತಮ್ಮ ತಂದೆ ಕಾಯಿಲೆ ತುತ್ತಾದ ನಂತರ ಈ ಕೆಲಸಕ್ಕೆ ಇಳಿದ ನೇಹಾ ಮತ್ತು ಜ್ಯೋತಿ. ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಈ ಮಹಿಳೆಯರಿಬ್ಬರ ಕುರಿತಾಗಿ ಬರೆದುಕೊಂಡಿದ್ದಲ್ಲದೆ ಸ್ವತ ಅವರಿಂದ ಸೇವಿಂಗ್ ಮಾಡಿಕೊಳ್ಳುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಸಚಿನ್  ತಮ್ಮ  ಇನ್ಸ್ಟಾ ಪೋಸ್ಟ್ ನಲ್ಲಿ " ನಿಮಗೆ ಇದು ಗೊತ್ತಿರದೇ ಇರಬಹುದುದು, ನಾನು ಇದಕ್ಕೂ ಮೊದಲು ಬೇರೆಯವರಿಂದ ಶೇವ್ ಮಾಡಿಸಿಕೊಂಡಿರಲಿಲ್ಲ.ಆದರೆ ಈಗ ಆ ದಾಖಲೆ ಅಳಿಸಿ ಹೋಯಿತು, ಈ ಸಲೂನ್ ಅಂಗಡಿಯ ಮಹಿಳೆಯರನ್ನು ಭೇಟಿ ಮಾಡಿರುವುದು ನಿಜಕ್ಕೂ ಗೌರವದ ಸಂಗತಿ" ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಸಚಿನ್ ನೇಹಾ ಮತ್ತು ಜ್ಯೋತಿ ಇಬ್ಬರಿಗೂ ಕೂಡ ತಮ್ಮ ಶಿಕ್ಷಣ ಮತ್ತು ಉದ್ಯೋಗದ ಅಗತ್ಯಗಳನ್ನು ಪೋರೈಸಿಕೊಳ್ಳಲು ಗಿಲೆಟ್ ಶಿಷ್ಯವೇತನವನ್ನು ವಿತರಿಸಿದರು.

Trending News