ನವದೆಹಲಿ: ವಿಶ್ವದ ಪ್ರಚಲಿತ ಕಿರು ಸಂದೇಶ ರವಾನೆ ತಾಣ ವಾಟ್ಸ್ ಆಪ್ ಲಾಕ್ ಡೌನ್ ನಡುವೆಯೇ ತನ್ನ ಬಳಕೆದಾರರಿಗೆ ಮತ್ತೊಂದು ಉಡುಗೊರೆಯನ್ನು ನೀಡಲು ನಿರ್ಧರಿಸಿದೆ
ಸಾಮಾಜಿಕ ಚಾಟಿಂಗ್ ಸೈಟ್ ವಾಟ್ಸಾಪ್ (ವಾಟ್ಸಾಪ್) ಲಾಕ್ಡೌನ್ ಮಧ್ಯೆ ನಿಮಗೆ ಮತ್ತೊಂದು ಹೊಸ ಉಡುಗೊರೆಯನ್ನು ನೀಡಲು ನಿರ್ಧರಿಸಿದೆ. ಸದ್ಯ ವಾಟ್ಸ್ ಆಪ್ ತನ್ನ ಈ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಬಳಕೆದಾರರು QR Code ಸ್ಕಾನ್ ಮಾಡಿ ಅದರ ಸೂಚಿಯಲ್ಲಿ ಸಂಪರ್ಕ ಜೋಡಿಸುವುದು ಸುಲಭವಾಗಲಿದೆ. ವಾಟ್ಸ್ ಆಪ್ ಬೀಟಾ ಅನ್ನು ಟ್ರಾಕ್ ಮಾಡುವ WABetaInfoನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುವ ವೈಶಿಷ್ಟ್ಯ ಮೊಟ್ಟಮೊದಲು ಐಓಎಸ್ ಬೀತಾಗಾಗಿ ಪರಿಚಯಿಸಲಾಗಿತ್ತು. ಆದರೆ. ಇದೀಗ ಅಂಡ್ರಾಯಿಡ್ ಬೀಟಾಗಾಗಿಯೂ ಕೂಡ ಇದನ್ನು ವಿಕಸಿತಗೊಳಿಸಲಾಗುತ್ತಿದೆ. ಈ ವೈಶಿಷ್ಟ್ಯವು ಅಪ್ಲಿಕೇಶನ್‌ನ 2.20.171 ಆವೃತ್ತಿಯಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ ಬೀಟಾ ಬಳಕೆದಾರರು ತಮ್ಮ ಹೆಸರಿನ ಮುಂದೆ ಮೇಲಿನ ಬಲಭಾಗದಲ್ಲಿರುವ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ವಿಭಾಗದಲ್ಲಿ ತಮ್ಮದೇ ಆದ ಕಸ್ಟಮ್ ಕ್ಯೂಆರ್ ಕೋಡ್ ಅನ್ನುಕಾಣಬಹುದಾಗಿದೆ. ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಬಳಕೆದಾರರು ತಮ್ಮದೇ ಆದ ಕ್ಯೂಆರ್ ಕೋಡ್ ಅನ್ನು ಇತರರಿಗೆ ತೋರಿಸಲು ಸಹ ಸಾಧ್ಯವಾಗಲಿದ್ದು, ತರ ವಾಟ್ಸಾಪ್ ಖಾತೆಗಳ ಕೋಡ್‌ಗಳನ್ನು ಸಹ ಸ್ಕ್ಯಾನ್ ಮಾಡಬಹುದು. ಬಳಕೆದಾರರು ತಮ್ಮ ಸಂಖ್ಯೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರಲು ನಿರ್ಧರಿಸಿದರೆ, ಕ್ಯೂಆರ್ ಕೋಡ್ ಅನ್ನು ರದ್ದುಗೊಳಿಸಬಹುದು.
ಆದರೆ, ಕ್ಯೂಆರ್ ಕೋಡ್ ಕೇವಲ ಸಂಪರ್ಕ ಹಂಚಿಕೆಗೆ ಸೀಮಿತವಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಕ್ಯೂಆರ್ ಕೋಡ್ ಮೂಲಕ ಕಂಪನಿಯು ತನ್ನ ಪೇಮೆಂಟ್ ವೈಶಿಷ್ಟ್ಯವನ್ನೂ ಸಹ ಸೇರಿಸಬಹುದು. ಆದರೆ, ಈ ವಿಷಯದ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಇದುವರೆಗೆ ನೀಡಿಲ್ಲ.
ವರದಿಯ ಪ್ರಕಾರ, ಪ್ರಸ್ತುತ, ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ, ಆದರೆ ಮುಂದಿನ ಕೆಲವು ದಿನಗಳಲ್ಲಿ ಇದನ್ನು ಪರಿಚಯಿಸುವ ಸಾಧ್ಯನ್ನು ತಜ್ಞರು ವರ್ತಿಸಿದ್ದಾರೆ.