ಯಾರಾಗಲಿದ್ದಾರೆ ಛತ್ತೀಸ್ ಗಡ್ ಸಿಎಂ? ಇಂದು ಅಂತಿಮ ನಿರ್ಧಾರ

 ಛತ್ತೀಸ್ ಗಡ್ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ವಿಚಾರ ಭಾನುವಾರ ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದೆ.

Last Updated : Dec 16, 2018, 11:10 AM IST
ಯಾರಾಗಲಿದ್ದಾರೆ ಛತ್ತೀಸ್ ಗಡ್ ಸಿಎಂ? ಇಂದು ಅಂತಿಮ ನಿರ್ಧಾರ  title=

ನವದೆಹಲಿ:  ಛತ್ತೀಸ್ ಗಡ್ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ವಿಚಾರ ಭಾನುವಾರ ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದೆ.

ರಾಯಪುರನಲ್ಲಿ ಭಾನುವಾರದಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಅಲ್ಲಿ ಸಿಎಂ ಯಾರು ಎನ್ನುವುದರ ಕುರಿತಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.ಸದ್ಯ ಟಿ.ಎಸ್. ಸಿಂಗ್ ದೇವ್, ತಮರಾಧ್ವಾಜ್ ಸಾಹು, ಭೂಪೇಶ್ ಬಾಗೇಲ್ ಮತ್ತು ಚರಣ್ ದಾಸ್ ಮಹಾಂತ್ ಅವರು ಮುಖ್ಯಮಂತ್ರಿ ಹುದ್ದೆಗೆ ಉನ್ನತ ಸ್ಪರ್ಧಿಗಳಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರದಂದು ತಮ್ಮ ದೆಹಲಿಯ ನಿವಾಸದಲ್ಲಿ ನಾಲ್ಕು ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಕೇಂದ್ರೀಯ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಮತ್ತು ಛತ್ತೀಸ್ ಗಡ್ ಉಸ್ತುವಾರಿ ಪಿ.ಪಿ. ಪುನಿಯಾ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಹಿತ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಹೆಚ್ಚಿನ ನಾಯಕರನ್ನು ಸೇರಿಸಿಕೊಳ್ಳಲು ಉಪಮುಖ್ಯಮಂತ್ರಿಯನ್ನು ಹೊಂದುವ ವಿಚಾರವಿದೆ ಎನ್ನಲಾಗಿದೆ.ದೆಹಲಿಯಲ್ಲಿ ಕಾಂಗ್ರೆಸ್ನ ಉನ್ನತ ನಾಯಕರೊಂದಿಗೆ ಭೇಟಿಯಾದ ನಂತರ ನಾಲ್ವರು ಸಿಎಂ ಆಕಾಂಕ್ಷಿಗಳು ಭಾನುವಾರ ರಾಯ್ಪುರಕ್ಕೆ ಮರಳಿದರು. ಆದರೆ ಸಿಎಂ ಆಯ್ಕೆ ವಿಚಾರವಾಗಿ ಹೇಳಿಕೆ ನೀಡಲು ನಿರಾಕರಿಸಿದರು. 

ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಿಎಲ್ ಪುನಿಯಾ ಜಿ ಅವರು ಇಂದು ರಾಯ್ಪುರದಲ್ಲಿ ಆಗಮಿಸಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಭಾಗವಹಿಸಿ ಮುಖ್ಯಮಂತ್ರಿಯನ್ನು ಘೋಷಿಸಲಿದ್ದಾರೆ ಎಂದು ಭೂಪೇಶ್ ಬಾಗೇಲ್ ಹೇಳಿದ್ದಾರೆ.

Trending News