ಅಪಾಯ ಹೆಚ್ಚಿಸುತ್ತಿದೆ ಕರೋನಾ ಹೊಸ ರೂಪಾಂತರ WHO ಎಚ್ಚರಿಕೆ

ವಿಶ್ವದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗತೊಡಗಿವೆ. ಅನೇಕ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಸೋಂಕಿನ ಪ್ರಕರಣಗಳು ಹೊರಬರುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಪಂಚದ ಸಂಪೂರ್ಣ ಜನಸಂಖ್ಯೆಯು ಲಸಿಕೆ ಪಡೆಯುವವರೆಗೆ, ಕರೋನಾ ಸೋಂಕು ಮತ್ತು ಹೊಸ ರೂಪಾಂತರಗಳೊಂದಿಗೆ ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು WHO ಹೇಳಿದೆ.

Written by - Ranjitha R K | Last Updated : Mar 24, 2022, 09:09 AM IST
  • ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಬಗ್ಗೆ WHO ನೀಡಿದೆ ಎಚ್ಚರಿಕೆ
  • ಲಸಿಕೆ ಪ್ರಕ್ರಿಯೆ ಪೂರ್ಣ ಆಗುವವರೆಗೆ ಕರೋನಾ ವಿರುದ್ಧ ಹೋರಾಡಬೇಕು
  • ಜಗತ್ತಿನಲ್ಲಿ ಮತ್ತೆ ಸೋಂಕಿನ ಪ್ರಕರಣಗಳು ಹೆಚ್ಚಾಗತೊಡಗಿವೆ
 ಅಪಾಯ ಹೆಚ್ಚಿಸುತ್ತಿದೆ ಕರೋನಾ ಹೊಸ ರೂಪಾಂತರ  WHO ಎಚ್ಚರಿಕೆ   title=
ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಬಗ್ಗೆ WHO ನೀಡಿದೆ ಎಚ್ಚರಿಕೆ (file photo)

ನವದೆಹಲಿ : ವಿಶ್ವದ ಹಲವು ದೇಶಗಳಲ್ಲಿ ಕೊರೊನಾ (Coronavirus) ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗತೊಡಗಿವೆ. ಹೀಗಿರುವಾಗ ಮತ್ತೆ ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡತೊಡಗಿದೆ. ಏತನ್ಮಧ್ಯೆ, ಎಲ್ಲಾ ದೇಶಗಳು ಲಸಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವವರೆಗೆ, ಹೆಚ್ಚುತ್ತಿರುವ COVID-19 ಸೋಂಕು ಮತ್ತು ಹೊಸ ರೂಪಾಂತರಗಳೊಂದಿಗೆ ಜಗತ್ತು ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಎಲ್ಲರೂ, ಸಾಂಕ್ರಾಮಿಕ ರೋಗದಿಂದ ಶೀಘ್ರ ಮುಕ್ತಿ ಹೊಂದಲು ಬಯಸುತ್ತಾರೆ. ಆದರೆ ಈ ಮಹಾಮಾರಿಯ ಅಪಾಯ ಇನ್ನೂ ಕೊನೆಯಾಗಿಲ್ಲ. ಎಲ್ಲಾ ದೇಶಗಳು ಲಸಿಕೆಯ ಪ್ರಕ್ರಿಯೆಯನ್ನು (Vaccination) ಪೂರ್ಣಗೊಳಿಸುವವರೆಗೆ ಸೋಂಕಿನ ಅಪಾಯ ಮತ್ತು ಹೊಸ ರೂಪಾಂತರಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್,  ಹೇಳಿದ್ದಾರೆ. 

ಇದನ್ನೂ ಓದಿ : ಭ್ರಷ್ಟಾಚಾರ-ವಿರೋಧಿ ಸಹಾಯವಾಣಿಗೆ ಚಾಲನೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ಹೊಸ ಪ್ರಕರಣಗಳಲ್ಲಿ ಶೇ. 7 ರಷ್ಟು ಹೆಚ್ಚಳ : 
ಪಶ್ಚಿಮ ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಸೋಂಕುಗಳಿಂದಾಗಿ ಕಳೆದ ವಾರ ಜಾಗತಿಕವಾಗಿ ಹೊಸ ಕರೋನವೈರಸ್ (Coronavirus) ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 7 ರಷ್ಟು ಹೆಚ್ಚಳವಾಗಿದೆ ಎಂದು WHO ಹೇಳಿತ್ತು. ಆದರೆ, COVID-19 ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕೋವಿಡ್ -19 ಪ್ರಕರಣಗಳಲ್ಲಿ ಜಾಗತಿಕ ಹೆಚ್ಚಳ ಮುಂದುವರೆದಿದೆ ಎಂದು ಘೆಬ್ರೆಯೆಸಸ್ ಹೇಳಿದ್ದಾರೆ. 

70 ರಷ್ಟು ಜನಸಂಖ್ಯೆಗೆ ಇನ್ನೂ ಲಸಿಕೆ ಹಾಕಿಸಬೇಕು : 
ಈ ವರ್ಷದ ಮಧ್ಯದ ವೇಳೆಗೆ ಪ್ರತಿ ದೇಶದ 70 ಪ್ರತಿಶತದಷ್ಟು ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು WHO ಹೊಂದಿದೆ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಇತರ ಅಪಾಯದಲ್ಲಿರುವ ಗುಂಪುಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : Bengal violence: ಅಪರಾಧಿಗಳನ್ನು ಕ್ಷಮಿಸಬಾರದು -ಪ್ರಧಾನಿ ನರೇಂದ್ರ ಮೋದಿ

ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ : 
ಕೆಲವು ಹೆಚ್ಚಿನ ಆದಾಯದ ದೇಶಗಳು ಎರಡನೇ ಬೂಸ್ಟರ್ ಡೋಸ್ ಅನ್ನು ಪ್ರಸ್ತಾಪಿಸಿವೆ. ಆದರೆ ವಿಶ್ವದ ಜನಸಂಖ್ಯೆಯ 1/3 ರಷ್ಟು ಜನರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಆದಾಗ್ಯೂ, ಅನೇಕ ದೇಶಗಳಲ್ಲಿ ವ್ಯಾಕ್ಸಿನೇಷನ್ (Vaccination)ಬಗ್ಗೆ ಪ್ರಗತಿ ಸಾಧಿಸಿದೆ. 

ಕೋವಿಡ್-19 ಪ್ರೋಟೋಕಾಲ್ ಕೊನೆಗೊಳಿಸಿರುವುದೇ ಇದಕ್ಕೆ ಕಾರಣ :
ಈ ವರ್ಷದ ಜನವರಿಯಿಂದ ಕರೋನವೈರಸ್ ಪ್ರಕರಣಗಳು ಕ್ಷೀಣಿಸಲಾರಂಭಿಸಿತ್ತು. ಆದರೆ ಕಳೆದ ವಾರದಿಂದ ಮತ್ತೆ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ (WHO). ಯುರೋಪ್, ಉತ್ತರ ಅಮೆರಿಕ ಮತ್ತು ಇತರ ದೇಶಗಳಲ್ಲಿ ಕೋವಿಡ್-19 ಪ್ರೋಟೋಕಾಲ್ ಅಂತ್ಯಗೊಂಡಿರುವುದೇ ಇದಕ್ಕೆ ಕಾರಣ. 

ಇದನ್ನೂ ಓದಿ Brahmos: ಪಾಕ್ ಗೆ ನಿದ್ದೆಗೆಡಿಸುವ ಸುದ್ದಿ, ಭಾರತದ ಈ 'ಬಾಹುಬಲಿ' ಮಿಸೈಲ್ ಪರೀಕ್ಷೆ ಯಶಸ್ವಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News