ನವದೆಹಲಿ: ರಾಹುಲ್ ಗಾಂಧಿ ಇಂದು ಅವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸಂಸತ್ತನಲ್ಲಿ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಭಾಷಣದ ವೇಳೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ವಿದೇಶಿ ಪ್ರಯಾಣದ ಬಗ್ಗೆ ಪ್ರಸ್ತಾಪಿಸುತ್ತಾ ಪಿಎಂ ಬಾಹರ್ ಮೇ ಜಾತೆ ಹೈ ( ಪ್ರಧಾನಿ ಹೊರಗೆ ಹೋಗುತ್ತಾರೆ(ವಿದೇಶಿ ಪ್ರಯಾಣ) ಇದು 'ಬಾರ್' ಎನ್ನುವ ಹಾಗೆ ಪ್ರತಿಧ್ವನಿಸಿತು
ಆಗ ಸದನ ನಗೆಗಡಲಲ್ಲಿ ಮುಳುಗಿತು. ಆಗ ತಕ್ಷಣ ಸರಿ ಪಡಿಸಿಕೊಂಡ ರಾಹುಲ್ "ಹೊರಹೊಗುತ್ತಾರೆ ಎಂದರೆ ವಿದೇಶಕ್ಕೆ ಎಂದು ಅರ್ಥೈಸಿಕೊಳ್ಳಿ..ಅದು ಒಬಾಮಾಜಿ ಅಥವಾ ಟ್ರಂಪ್ ಜಿ ಎಂದರು. ಆಗ ಆಡಳಿತ ಪಕ್ಷದ ಸದಸ್ಯರು ನಗೆ ಗಡಲಲ್ಲಿ ಮುಳುಗಿ ಬೆಂಚುಗಳನ್ನು ಕುಟ್ಟಿದರು. ಆಗ ಆ ಪ್ರಧಾನಿಯವರು ಕೂಡ ಕೆಲ ಕ್ಷಣ ಮಂದ ನಗೆ ಬೀರಿದರು.
ಇದೆ ವೇಳೆ ರಾಹುಲ್ ಮುಂದುವರೆದು ಮಾತನಾಡುತ್ತಾ "ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಿದ್ದರೂ, ಕೂಡ ತಮ್ಮ ಭದ್ರತಾ ಕವರ್ನಿಂದ ಹೊರ ಬರುವುದಿಲ್ಲ, ಸಣ್ಣ ವ್ಯಾಪಾರಿಗಳೊಂದಿಗೆ ಮಾತನಾಡುವುದಿಲ್ಲ, ಬದಲಾಗಿ ಅವರು ಸೂಟ್-ಬೂಟ್ ಉದ್ಯಮಿಗಳ ಜೊತೆ ಮಾತ್ರ ಮಾತನಾಡುತ್ತಾರೆ" ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಭಾಷಣ ಮುಗಿಸುತ್ತಿದ್ದಂತೆ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡು ಒಂದು ಕ್ಷಣ ಎಲ್ಲರನ್ನು ತಬ್ಬಿಬ್ಬುಗೊಳಿಸಿದರು.