ಮೋದಿಯ ಪರಿವರ್ತನಾ ಯಾತ್ರೆಯಲ್ಲಾದರು ಮುಕ್ತಿ ಸಿಕ್ಕಿತೇ 'ಮಹಾದಾಯಿ'ಗೆ?

ಇಂದು  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರ ಚಿತ್ತ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದ ಮೇಲೆ ನೆಟ್ಟಿದೆ. 

Last Updated : Feb 4, 2018, 11:49 AM IST
ಮೋದಿಯ ಪರಿವರ್ತನಾ ಯಾತ್ರೆಯಲ್ಲಾದರು ಮುಕ್ತಿ ಸಿಕ್ಕಿತೇ 'ಮಹಾದಾಯಿ'ಗೆ? title=

ಬೆಂಗಳೂರು: ಇಂದು  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರ ಚಿತ್ತ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದ ಮೇಲೆ ನೆಟ್ಟಿದೆ. 

ಕಾರಣವಿಷ್ಟೇ ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕದ ಜನರು ಅದರಲ್ಲೂ ಮುಂಬೈ ಕರ್ನಾಟಕದ ಭಾಗದ ನರಗುಂದ ಮತ್ತು ನವಲಗುಂದದಲ್ಲಿ ಮಹಾದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಜೋಡಣೆಯ ವಿಷಯವಾಗಿ ಅನಿರ್ಧಿಷ್ಠಾವಧಿಯ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ.  

ಈ ಭಾಗದಲ್ಲಿ ಈ ಮಹಾದಾಯಿ ವಿಷಯವನ್ನೇ ರಾಜಕೀಯ ದಾಳ ಮಾಡಿಕೊಂಡು ಪ್ರತಿ ಸಾರಿ ಅಧಿಕಾರ ಅನುಭವಿಸಿದ್ದ ಬಿಜೆಪಿ ನಾಯಕರಂತು ಈಗ ಮಹದಾಯಿ ವಿಷಯದಲ್ಲಿನ ರೈತರ ಹೋರಾಟವನ್ನು ರಾಜಕೀಯ ಪ್ರೇರಿತ ಹೋರಾಟ ಎಂದು ದೂರುವ ಮೂಲಕ ಮಹದಾಯಿ ವಿಷಯದಲ್ಲಿನ ತಮ್ಮ ಇಬ್ಬಗೆಯ ನೀತಿಯನ್ನು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಬಾರಿ ಬಿಜೆಪಿಗೆ ಈ ಧೋರಣೆಯೇ ಮುಳುವಾಗುವ ಸಾಧ್ಯತೆ ಇದೆ. ಕಾರಣ ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರವರು ಕುಡಿಯುವ ನೀರಿಗೆ ತಮ್ಮದು ಯಾವುದೇ ಅಭ್ಯಂತರವಿಲ್ಲ ಎನ್ನುವ ರೀತಿಯಲ್ಲಿ ಪತ್ರವನ್ನು ಬರೆದಿದ್ದನ್ನು ಓದಿ ಈ ವಿಷಯಕ್ಕೆ ಭಾರಿ ನಾಟಕೀಯ ತಿರುವನ್ನು ನೀಡಿದ್ದರು. ಆದರೆ ಕಾಲಾಂತರದಲ್ಲಿ ಅದೊಂದು ನಾಟಕ ಪ್ರಹಸನದಂತಾಗಿ ಬಿಜೆಪಿಯು ಭಾರಿ ಮುಖಭಂಗ ಅನುಭವಿಸಿತ್ತು. 

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೆ ಮಹದಾಯಿ ವಿಚಾರವಾಗಿ ಮನೋಹರ್ ಪರಿಕ್ಕರರವರಿಗೆ ಪತ್ರ ಬರೆದಾಗ ಅವರಿಗೆ ಯಾವುದೇ ರೀತಿಯ ಉತ್ತರವನ್ನು ನೀಡಿರಲಿಲ್ಲ. ಆ ಮೂಲಕ ಈ ಸಂಗತಿಯನ್ನು ಕೇವಲ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ನೋಡುವ ಕಾರ್ಯವನ್ನು ಬಿಜೆಪಿ ಬಹಳ ಉದ್ದೇಶ ಪೂರ್ವಕವಾಗಿ ಮಾಡುತ್ತಿರುವುದು ಸ್ಪಷ್ಟವಾದಂತಾಗಿದೆ. 

ಈ ಹಿನ್ನಲೆಯಲ್ಲಿ ಈಗ ಮಹಾದಾಯಿ ವಿಷಯವು ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ಭಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅದರಲ್ಲೂ ಮುಂಬೈ ಕರ್ನಾಟಕದ ಪ್ರದೇಶದಲ್ಲಿ ಹೆಚ್ಚು ಪರಿಣಾಮ ಬೀರಲಿದೆ. ಈ ಭಾಗದಲ್ಲಿ ಬಹುತೇಕ ಬಿಜೆಪಿ ಸಂಸದರೆ ಹೆಚ್ಚಿದ್ದರು ಕೂಡ ಮಹಾದಾಯಿ ವಿಷಯವಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರುವ ಯಾವ ಪ್ರಯತ್ನವನ್ನು ಇವರೆಗೂ ಮಾಡಿಲ್ಲ. ಒಂದು ವೇಳೆ ಈ ಬಾರಿ ಮಹಾದಾಯಿ ವಿಷಯ ತಾರ್ಕಿಕ ಅಂತ್ಯ ಕಾಣದೆ ಇದ್ದಲ್ಲಿ ಆದರ ಪರಿಣಾಮವು ಖಂಡಿತವಾಗಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಪಲಿಸಲಿದೆ. 

ಮಹಾದಾಯಿ ವಿಚಾರವಾಗಿ ಈವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಟಿ ಬಿಚ್ಚಿಲ್ಲ, ಆದ್ದರಿಂದ  ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಹಾದಾಯಿ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆಯೇ ಅಥವಾ ಇಲ್ಲವೇ ಎನ್ನುವುದಕ್ಕೆ ನಾವಿನ್ನು ಕಾದು ನೋಡಬೇಕಾಗಿದೆ. 

 

Trending News