ನವದೆಹಲಿ: ದೆಹಲಿ ಮೆಟ್ರೋ ನಿಲ್ದಾಣದಿಂದ 20 ಲೈವ್ ಬುಲೆಟ್ಗಳನ್ನು ಹೊತ್ತ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಸೋಮವಾರದಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಬಂದ ಮಹಿಳೆ ಭಾನುವಾರ ಸಂಜೆ ಸಿಐಎಸ್ಎಫ್ ಸಿಬ್ಬಂದಿ ಆದರ್ಶ ನಗರ್ ಮೆಟ್ರೋ ನಿಲ್ದಾಣದಲ್ಲಿ ತನ್ನ ಚೀಲವನ್ನು ಸ್ಕ್ಯಾನ್ ಮಾಡುತ್ತಿರುವಾಗ ಚೀಲದಲ್ಲಿ ಬುಲೆಟ್ ಇರುವ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ಮಹಿಳೆಯು ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ. ಅವರ ತಂದೆ ತನ್ನ ಶಸ್ತ್ರಾಸ್ತ್ರ ಪರವಾನಗಿಯ ಪ್ರತಿಯನ್ನು ತೋರಿಸಿ 20 ಸುತ್ತುಗಳ ಯುದ್ಧಸಾಮಗ್ರಿ (.32 ಕ್ಯಾಲಿಬರ್) ಆತನಿಗೆ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಮಹಿಳೆ ಮತ್ತು ಇತರರನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಂಡವು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ತಿಳಿದು ಬಂದಿದೆ. ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ದೆಹಲಿ ಮೆಟ್ರೋದಲ್ಲಿನ ಭದ್ರತೆ ಮತ್ತು ಇತರ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.