ಇಂಡಿಯಾ ಗೇಟ್ ಬಳಿ 'ಪಾಕಿಸ್ತಾನ್ ಜಿಂದಾಬಾದ್' ಕೂಗಿದ ಮಹಿಳೆ ಬಂಧನ; ಗಣರಾಜ್ಯೋತ್ಸವ ಪೂರ್ವಾಭ್ಯಾಸಕ್ಕೆ ತಡೆ

ಗಣರಾಜ್ಯೋತ್ಸವ ಪೆರೇಡ್ ಪೂರ್ವಾಭ್ಯಾಸ ನಡೆಯುತ್ತಿದ್ದ ಪ್ರದೇಶದಲ್ಲಿ ಪೋಲಿಸ್ ಬಿಗಿ ಭದ್ರತೆ ನಡುವೆಯೂ ಪ್ರವೇಶಿಸಲು ಪ್ರಯತ್ನಿಸಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 

Last Updated : Jan 14, 2019, 08:16 PM IST
ಇಂಡಿಯಾ ಗೇಟ್ ಬಳಿ 'ಪಾಕಿಸ್ತಾನ್ ಜಿಂದಾಬಾದ್' ಕೂಗಿದ ಮಹಿಳೆ ಬಂಧನ; ಗಣರಾಜ್ಯೋತ್ಸವ ಪೂರ್ವಾಭ್ಯಾಸಕ್ಕೆ ತಡೆ title=

ನವದೆಹಲಿ: ಇಂಡಿಯಾ ಗೇಟ್ ಬಳಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿದ ಮಹಿಳೆಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. 

ಗಣರಾಜ್ಯೋತ್ಸವ ಪೆರೇಡ್ ಪೂರ್ವಾಭ್ಯಾಸ ನಡೆಯುತ್ತಿದ್ದ ಪ್ರದೇಶದಲ್ಲಿ ಪೋಲಿಸ್ ಬಿಗಿ ಭದ್ರತೆ ನಡುವೆಯೂ ಪ್ರವೇಶಿಸಲು ಪ್ರಯತ್ನಿಸಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. 

ಬಂಧಿತ ಮಹಿಳೆಯನ್ನು ಹೈದರಾಬಾದ್'ನ ನಿಜಾಮಾಬಾದ್ ಮೂಲದ ಸುಲ್ತಾನ ಎಂದು ಗುರುತಿಸಲಾಗಿದೆ. ಇಂಡಿಯಾ ಗೇಟ್ನಲ್ಲಿ ಅಮರ್ ಜವಾನ್ ಜ್ಯೋತಿಗೆ ಪ್ರವೇಶಿಸಲು ಪ್ರಯತ್ನಿಸಿದ ಆಕೆಯನ್ನು ಭದ್ರತಾ ಸಿಬ್ಬಂದಿ ತಡೆಯಲು ಪ್ರಯತ್ನಿಸಿದಾಗ ಗಲಾಟೆ ಆರಂಭಿಸಿದ್ದಾಳೆ. ಕೂಡಲೇ ದೆಹಲಿ ಮಹಿಳಾ ಕಾನ್ಸ್ಟೇಬಲ್'ಗಳು ಮಹಿಳೆಯನ್ನು ಬಂಧಿಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮಹಿಳಾ ಆಶ್ರಯ ಮನೆಯಲ್ಲಿ ಇರಿಸಲಾಗಿದೆ. 

Trending News