ಇದೇನಿದು ವಿಚಿತ್ರ...ಮದುವೆ ಆಗುತ್ತೆ, ಹನಿಮೂನ್ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲವಂತೆ!

ಗುಜರಾತ್‌ನ ವಡೋದರಾದಲ್ಲಿ ಕ್ಷಮಾ ಬಿಂದು ಎಂಬವರು ಜೂನ್ 11ರಂದು ತಮ್ಮನ್ನು ತಾವೇ ಮದುವೆಯಾಗಲಿದ್ದಾರೆ. ಇದೊಂದು ವಿಚಿತ್ರ ಮದುವೆಯಾದರರು ನೀವು ನಂಬಲೇಬೇಕು. ಈ ವಿಭಿನ್ನ ವಿವಾಹದ ಮೂಲಕ ಇಡೀ ದೇಶದಲ್ಲಿ ಮೊದಲ ಸೋಲೋಗಮಿ ಮದುವೆ ನಡೆಯಲಿದೆ. ಜೂನ್ 11ರಂದು ಈ ಮದುವೆಗೆ ದಿನ ನಿಗದಿಯಾಗಿದ್ದು, ಆ ಬಳಿಕ ಅವರು ಹನಿಮೂನ್‌ಗೆ ಗೋವಾಗೆ ತೆರಳಲಿದ್ದಾರೆ. 

Written by - Bhavishya Shetty | Last Updated : Jun 2, 2022, 04:41 PM IST
  • ತಮ್ಮನ್ನು ತಾವೇ ಮದುವೆಯಾಗಲಿರುವ ಮಹಿಳೆ
  • ಗುಜರಾತ್‌ನ ವಡೋದರದ ಮಹಿಳೆಯ ವಿಚಿತ್ರ ಕೆಲಸ
  • ಮದುವೆ ಬಳಿಕ ಗೋವಾಗೆ ಹನಿಮೂನ್‌ ತೆರಳಲಿದ್ದಾರೆ
ಇದೇನಿದು ವಿಚಿತ್ರ...ಮದುವೆ ಆಗುತ್ತೆ, ಹನಿಮೂನ್ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲವಂತೆ! title=
Sologamy

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಳಿಕ ಗಂಡ ಹೆಂಡತಿ ಹನಿಮೂನ್‌ಗೆಂದು ದೂರದ ಊರುಗಳಿಗೆ ತೆರಳುವುದು ಸಾಮಾನ್ಯ. ಇಬ್ಬರೂ  ಜೊತೆಗೂಡಿ ಒಂದಿಷ್ಟು ಸಮಯವನ್ನು ನೆನಪಿನಲ್ಲಿ ಉಳಿಯುವಂತೆ ರೂಪಿಸಿಕೊಳ್ಳಲು ಪತಿ ಪತ್ನಿಯರು ಹನಿಮೂನ್‌ಗೆಂದು ತೆರಳುತ್ತಾರೆ. ಆದರೆ ಇಲ್ಲೊಂದು ಮಹಿಳೆ ಮದುವೆಯಾಗುತ್ತಿದ್ದು, ಹನಿಮೂನ್‌ಗೆ ಸಹ ತೆರಳುತ್ತಿದ್ದಾಳೆ. ಆದರೆ ಗಂಡ ಮಾತ್ರ ಇರೋದಿಲ್ಲವಂತೆ. ಈ ವಿಚಿತ್ರ ಮದುವೆ ನಡೆಯುತ್ತಿರುವುದು ಬೇರೆ ಯಾವುದೋ ದೇಶದಲ್ಲಿ ಅಲ್ಲ. ಭಾರತದ ಗುಜರಾತ್‌ನ ವಡೋದರದಲ್ಲಿ. 

ಇದನ್ನು ಓದಿ: Johnny Depp: ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್

ಗುಜರಾತ್‌ನ ವಡೋದರಾದಲ್ಲಿ ಕ್ಷಮಾ ಬಿಂದು ಎಂಬವರು ಜೂನ್ 11ರಂದು ತಮ್ಮನ್ನು ತಾವೇ ಮದುವೆಯಾಗಲಿದ್ದಾರೆ. ಇದೊಂದು ವಿಚಿತ್ರ ಮದುವೆಯಾದರರು ನೀವು ನಂಬಲೇಬೇಕು. ಈ ವಿಭಿನ್ನ ವಿವಾಹದ ಮೂಲಕ ಇಡೀ ದೇಶದಲ್ಲಿ ಮೊದಲ ಸೋಲೋಗಮಿ ಮದುವೆ ನಡೆಯಲಿದೆ. ಜೂನ್ 11ರಂದು ಈ ಮದುವೆಗೆ ದಿನ ನಿಗದಿಯಾಗಿದ್ದು, ಆ ಬಳಿಕ ಅವರು ಹನಿಮೂನ್‌ಗೆ ಗೋವಾಗೆ ತೆರಳಲಿದ್ದಾರೆ. 

ಸೊಲೋಗಮಿ ಮದುವೆ ಬಗ್ಗೆ ಮಾತನಾಡಿದ ಕ್ಷಮಾ ಬಿಂದು, "ಇದು ಸ್ವಯಂ-ಪ್ರೀತಿಯ ಕ್ರಿಯೆ. ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದೆ. ಈ ಸಂಬಂಧ ಆನ್‌ಲೈನ್‌ ಮೂಲಕ ಅನೇಕ ವಿಷಯಗಳನ್ನು ಹುಡುಕಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ನಿದರ್ಶನಗಳು ದೊರಕಲಿಲ್ಲ. ಬಹುಶಃ ಇದು ದೇಶದಲ್ಲಿಯೇ ಮೊದಲ ಸ್ವಯಂ ಪ್ರೀತಿಯ ವಿವಾಹವಾಗಿದೆ" ಎಂದು ಹೇಳಿದ್ದಾರೆ. 

"ಇತರರು ತಾವು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಹಾಗಾಗಿ ನನ್ನನ್ನು ನಾನೇ ಮದುವೆಯಾಗುತ್ತಿದ್ದೇನೆ" ಎಂದರು. 

ಇದನ್ನು ಓದಿ: ಐಪಿಎಲ್‌ ಮುಗಿದ್ರೂ ನಿಲ್ಲುತ್ತಿಲ್ಲ ಆರ್‌ಸಿಬಿ ಕ್ರೇಜ್‌!

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಇನ್ನು ವಿವಾಹವು  ಪದ್ಧತಿಯ ಪ್ರಕಾರವೇ ನಡೆಯಲಿದೆ ಎಂದು ತಿಳಿದುಬಂದಿದೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News