ಸಾರಾಯಿ ಬಂದ್ ಗೆ ಸಜ್ಜಾಗಿದೆ ಮಹಿಳಾ 'ಬ್ಲೂ ಗ್ಯಾಂಗ್'

    

Last Updated : Jun 17, 2018, 11:55 AM IST
ಸಾರಾಯಿ ಬಂದ್ ಗೆ ಸಜ್ಜಾಗಿದೆ ಮಹಿಳಾ 'ಬ್ಲೂ ಗ್ಯಾಂಗ್'  title=
Photo courtesy: ANI

ಬಸ್ತರ್: ಛತ್ತೀಸ್ ಘಡ್ ನ ಬಸ್ತರ್ ಭಾಗದಲ್ಲಿ ಈಗ ಬ್ಲೂ ಗ್ಯಾಂಗ್ ಎನ್ನುವ ಹೆಸರಿನ ಮಹಿಳಾ ಗುಂಪೊಂದು ಸಾರಾಯಿಯಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಕ್ಕೆ ಮುಂದಾಗಿದೆ.

ಬಸ್ತರ್ ನ ಶಾಂತಿನಗರದ ವಾರ್ಡ್ ನಲ್ಲಿ 13 ಮಹಿಳೆಯರ ಈ ಗುಂಪು ಸಾರಾಯಿ ಮಾರಾಟದ ಮೇಲೆ ನಿಗಾವಹಿಸಿದೆ.ಈ ಮಹಿಳೆಯರು ಕೇವಲ ಅದರ ಬಗ್ಗೆ ನಿಗಾವಹಿಸುವುದರ ಜೊತೆಗೆ ಮಧ್ಯಪಾನ ವ್ಯಸನಿಗಳಾದವರಿಗೆ ಕೌನ್ಸಿಲಿಂಗ್ ಕೂಡ ಮಾಡಿ ಅವರಿಗೆ ಉತ್ತಮ ಜೀವನ ನಡೆಸುವಲ್ಲಿ ಸಹಾಯರಾಗುತ್ತಾರೆ.  

ಈ ಮಹಿಳೆಯರು ಪ್ರಮುಖವಾಗಿ ಬಸ್,ಅಟೋ ಡ್ರೈವರ್,ಹಾಗೂ ರಿಕ್ಷಾ ಡ್ರೈವರ್ ಗಳಿಗೆ ಇದರಿಂದಾಗುವ ಪರಿಣಾಮಗಳಿಗೆ ತಿಳುವಳಿಕೆ ನೀಡುತ್ತಾರೆ.ಅಲ್ಲದೆ ಈ ಶಾಂತಿನಗರದ ಭಾಗದಲ್ಲಿ  ರಾತ್ರಿ 8 ರಿಂದ 12 ರವರೆಗೆ ಯಾವುದಾರರು ಜಗಳವಾದರೆ ಅಥವಾ ನಿಗಧಿತ ಸಮಯದ ನಂತರ ಹೋಟೆಲ್ ತೆರೆದಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ.ಈ ಮಹಿಳೆಯಲು ಹೆಚ್ಚಾಗಿ  ನಗರ ಪ್ರಮುಖ ಸ್ಥಳಗಳಲ್ಲಿ ಅದರಲ್ಲೂ ಎಲ್ಲೆಲ್ಲಿ ಸಾರಾಯಿ ವ್ಯಸನದ ಪ್ರಭಾವವಿರುತ್ತದೆಯೋ ಅಲ್ಲಲ್ಲಿಗೆ ಭೇಟಿ ನೀಡುತ್ತಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ ಬ್ಲೂ ಗ್ಯಾಂಗ್ ನ ಸದಸ್ಯೆ " ನಮ್ಮ ಮನೆಯಲ್ಲಿಯೇ ಗಂಡನ್ಧಿರು ಸಾರಾಯಿ ಕುಡಿದು ತೊಂದರೆ ಕೊಡುವಂತಹ ಸಮಸ್ಯೆಗಳನ್ನು ಎದುರಿಸುತ್ತೇವೆ .ಆದ್ದರಿಂದಾಗಿ ಈ ಸಮಸ್ಯೆಯನ್ನು ನಿವಾರಿಸಲು ನಾವು ಮುಂದಾದೆವು.ನಮ್ಮ ಪತಿಯಂದಿರ ಜೊತೆ ಇತರರರನ್ನು ಬದಲಾಯಿಸಬೇಕೆಂದರು.

ಇನ್ನೊಂದೆಡೆಗೆ ಇವರ ಕಾರ್ಯಕ್ಕೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Trending News