ಮೋದಿಜಿ ನಿಮ್ಮ ಪ್ರಯತ್ನ ಮುಂದುವರಿಸಿ, ಆದರೆ ಸತ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ -ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರ ಚೌಕಿದಾರ್ ಅಭಿಯಾನವನ್ನು ವ್ಯಂಗ್ಯವಾಡುತ್ತಾ ರಾಹುಲ್ ಗಾಂಧಿ "ಮೋದಿಜಿ ನಿಮ್ಮ ಪ್ರಯತ್ನ ಮುಂದುವರಿಸಿ, ಆದರೆ ಸತ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Last Updated : Mar 18, 2019, 03:02 PM IST
ಮೋದಿಜಿ ನಿಮ್ಮ ಪ್ರಯತ್ನ ಮುಂದುವರಿಸಿ, ಆದರೆ ಸತ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ -ರಾಹುಲ್ ಗಾಂಧಿ  title=
file photo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಚೌಕಿದಾರ್ ಅಭಿಯಾನವನ್ನು ವ್ಯಂಗ್ಯವಾಡುತ್ತಾ ರಾಹುಲ್ ಗಾಂಧಿ "ಮೋದಿಜಿ ನಿಮ್ಮ ಪ್ರಯತ್ನ ಮುಂದುವರಿಸಿ, ಆದರೆ ಸತ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಇತ್ತೀಚಿಗೆ ಟ್ವಿಟ್ಟರ್ ನಲ್ಲಿ #ಮೈ ಬಿ ಚೌಕಿದಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗ ಕಿಡಿಕಾರಿರುವ ರಾಹುಲ್ ಗಾಂಧಿ " ಮೋದಿ ಜಿ ನೀವು ಪ್ರಯತ್ನ ಪಡುತ್ತಲೇ ಇರಿ, ಆದರೆ ಸತ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ, ಚೌಕಿದಾರ್ ಚೋರ್ ಹೈ ಎಂದು ಎಲ್ಲ ಭಾರತೀಯರು ಹೇಳುತ್ತಿದ್ದಾರೆ. ನಿಮ್ಮಂತೆ ಸುಷ್ಮಾ ಸ್ವರಾಜ್ ಅವರಿಗೋ ಸಹಿತ ಚೌಕಿದಾರ್ ಪದವನ್ನು ಅವರ ಖಾತೆಗೆ ಸೇರಿಸಿಕೊಳ್ಳಲು ಹೇಳಿ, ಇಲ್ಲದೆ ಇದ್ದಲ್ಲಿ ಅದು ಅಸಹ್ಯವಾಗಿ ಕಾಣುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ನ ಜ್ಯೋತಿರಾದಿತ್ಯ ಸಿಂಧ್ಯ ಎಲ್ಲರು ಪ್ರಧಾನಿ ರೀತಿ ಚೌಕಿದಾರ್ ರಾದರೆ ದೇಶವನ್ನು ಯಾರು ರಕ್ಷಣೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 

ಭಾನುವಾರದಂದು ಪ್ರಧಾನಿ ಮೋದಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಪದವನ್ನು ಸೇರಿಸಿದಾಗ ಬಿಜೆಪಿಯ ಎಲ್ಲ ನಾಯಕರು ಪ್ರಧಾನಿ ಮಾರ್ಗವನ್ನು ಅನುಸರಿಸಿದ್ದರು.ಈ ಹಿನ್ನಲೆಯಲ್ಲಿ ಈಗ ರಾಹುಲ್ ಗಾಂಧಿ ಮೋದಿ ನಡೆಗೆ ಕಿಡಿಕಾರಿದ್ದಾರೆ. 

Trending News