ದೀದೀ, ನಿಮ್ಮಿಂದಾಗುವ ಕಪಾಳ ಮೋಕ್ಷ ನನಗೆ ಆಶೀರ್ವಾದ ಇದ್ದಂತೆ: ಪ್ರಧಾನಿ ಮೋದಿ

ನಾನು ನಿಮ್ಮನ್ನು ಮಮತೆಯಿಂದ ದೀದಿ ಎಂದು ಕರೆಯುತ್ತೇನೆ, ಗೌರವಿಸುತ್ತೇನೆ. ನೀವು ಹೊಡೆಯುವ ಏಟು ನನಗೆ ಆಶೀರ್ವಾದ ಇದ್ದಂತೆ ಎಂದಿದ್ದಾರೆ.

Last Updated : May 9, 2019, 04:27 PM IST
ದೀದೀ, ನಿಮ್ಮಿಂದಾಗುವ ಕಪಾಳ ಮೋಕ್ಷ ನನಗೆ ಆಶೀರ್ವಾದ ಇದ್ದಂತೆ: ಪ್ರಧಾನಿ ಮೋದಿ title=

ಪುರುಲಿಯಾ: ನೀವು ನನಗೆ ಕಪಾಳ ಮೋಕ್ಷ ಮಾಡಿದರೆ ನನಗೆ ಆಶೀರ್ವಾದ ಇದ್ದಂತೆ ಎಂದು ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಬಲವಾದ ಹೊಡೆತ ನೀಡಬೇಕು ಎಂದು 2 ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಹೇಳಿಕೆಗೆ ಇಂದಿಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ನಾನು ನಿಮ್ಮನ್ನು ಮಮತೆಯಿಂದ ದೀದಿ ಎಂದು ಕರೆಯುತ್ತೇನೆ, ಗೌರವಿಸುತ್ತೇನೆ. ನೀವು ಹೊಡೆಯುವ ಏಟು ನನಗೆ ಆಶೀರ್ವಾದ ಇದ್ದಂತೆ ಎಂದಿದ್ದಾರೆ.

ಇದೇ ವೇಳೆ, "ನಾನು ನಿಮ್ಮ ಕಪಾಳಮೊಕ್ಷವನ್ನು ಸ್ವೀಕರಿಸುತ್ತೇನೆ... ಹಾಗೆಯೇ ಚಿಟ್​ಫಂಡ್​ಗಳ ಮೂಲಕ ಬಡವರ ಹಣ ಲೂಟಿ ಮಾಡಿದವರ ಕೆನ್ನೆಗೆ ಹೊಡೆಯುವ ಧೈರ್ಯ ನಿಮಗಿದೆಯೇ?" ಎಂದು ಮೋದಿ ಪ್ರಶ್ನಿಸಿದ್ದಾರೆ.

Trending News