ತಾಯಿ ಎದುರೇ ಮಗಳ ಮೇಲೆ ರೇಪ್; ಮುಜಾಫರನಗರದಲ್ಲಿ ಹೀನಾಯ ಕೃತ್ಯ

ತಾಯಿಯ ಎದುರಿಗೇ 22 ವರ್ಷದ ಮಗಳ ಮೇಲೆ ಯುವರಿಬ್ಬರು ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮುಜಾಫರನಗರ ಜಿಲ್ಲೆಯಲ್ಲಿ ನಡೆದಿದೆ.

Last Updated : Apr 15, 2019, 02:06 PM IST
ತಾಯಿ ಎದುರೇ ಮಗಳ ಮೇಲೆ ರೇಪ್; ಮುಜಾಫರನಗರದಲ್ಲಿ ಹೀನಾಯ ಕೃತ್ಯ title=

ಮುಜಾಫಾರನಗರ: ತಾಯಿಯ ಎದುರಿಗೇ 22 ವರ್ಷದ ಮಗಳ ಮೇಲೆ ಯುವರಿಬ್ಬರು ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮುಜಾಫರನಗರ ಜಿಲ್ಲೆಯ ಕಕರೌಲಿಯ ಗನ್ನೇ ಗ್ರಾಮದಲ್ಲಿ ನಡೆದಿದೆ.

ತನ್ನ ತಾಯಿಯೊಂದಿಗೆ ಔಷಧಿ ತರಲು ಕಕರೌಲಿ ಠಾಣೆ ವ್ಯಾಪ್ತಿಯ ಮೆಡಿಕಲ್ ಸ್ಟೋರ್ ಗೆ ಹೋಗಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ದಿಲ್ಷಾ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಜಿತೇಂದ್ರ ಕುಮಾರ್ ಹೇಳಿದ್ದಾರೆ. ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಸಂತ್ರಸ್ತೆ ತಂದೆ ನೀಡಿರುವ ದೂರಿನ ಅನ್ವಯ, ತಮ್ಮ ಮಗಳು, ತಾಯಿಯೊಂದಿಗೆ ಔಷಧಿ ತರಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಗಳನ್ನು ಕಬ್ಭಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

Trending News